ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಬಿಐಗೆ ಹೆಚ್ಚಿನ ಸ್ವಾಯತ್ತತೆ: ಶಂಕೆ ಬೇಡ– ಸಿನ್ಹಾ

Last Updated 30 ಮಾರ್ಚ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಮತ್ತಷ್ಟು ಪರಿ­ಣಾ­ಮ­ಕಾರಿಯಾಗಿ ಕಾರ್ಯ ನಿರ್ವ­ಹಿ­ಸಲು ಸಿಬಿಐ ಮತ್ತು ಪೊಲೀಸ್‌ ಇಲಾಖೆ­ಗಳಿಗೆ ಹೆಚ್ಚಿನ ಸ್ವಾಯತ್ತತೆ ನೀಡುವಂತೆ ಕೋರಿ­ರುವ ತಮ್ಮ ಬೇಡಿಕೆಯನ್ನು ಶಂಕೆ­ಯಿಂದ ನೋಡುವುದು ಬೇಡ ಎಂದು  ಸಿಬಿಐ ನಿರ್ದೇಶಕ ರಂಜಿತ್‌ ಸಿನ್ಹಾ ಮನವಿ ಮಾಡಿದ್ದಾರೆ.

ಹೆಚ್ಚಿನ ಹಣಕಾಸು  ಮತ್ತು ವೃತ್ತಿ ಸ್ವಾತಂತ್ರ್ಯ ಬೇಡಿಕೆಯನ್ನು ರಾಷ್ಟ್ರ ವಿರೋಧಿ ಅಥವಾ ಕಾನೂನಿಗಿಂತ ಮೇಲುಗೈ ಸಾಧಿಸಲು ಸಿಬಿಐ ಹವಣಿ­ಸು­ತ್ತಿದೆ ಎಂದು ಅಪಾರ್ಥ ಮಾಡಿಕೊ­ಳ್ಳು­ವುದು ಬೇಡ ಅವರು ಸ್ಪಷ್ಟಪಡಿಸಿದ್ದಾರೆ.

‘ಸಿಬಿಐ ಅಥವಾ ಪೊಲೀಸ್‌ ವ್ಯವಸ್ಥೆ ಕಾರ್ಯವೈಖರಿ ಬಲಪಡಿಸುವ ನಿಟ್ಟಿನಲ್ಲಿ ಹೆಚ್ಚಿನ ಸ್ವಾಯತ್ತತೆ ಕೋರಿ­ದರೆ  ಅದನ್ನು ಯಾಕೆ ಸಂಶಯದಿಂದ  ನೋಡಬೇಕು’ ಎಂದು ಸಿನ್ಹಾ ಭಾನುವಾರ ಪ್ರಶ್ನಿಸಿದ್ದಾರೆ. 2ಜಿ, ಕಲ್ಲಿದ್ದಲು ನಿಕ್ಷೇಪ ಹಂಚಿಕೆ, ಸೇನಾ ವಾಹನ ಖರೀದಿ ಅವ್ಯವಹಾರ ಹಗ­ರ­­ಣಗಳ ತನಿಖೆ ವೇಳೆ ಎದುರಾಗುವ ಸವಾಲುಗಳನ್ನು ಅವರು ಬಿಚ್ಚಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT