ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಬಿಐ ತನಿಖೆಗೆ ಒತ್ತಾಯ

ಮಹಾರಾಷ್ಟ್ರದ ಕಸರ್ವಾಡಿಯ ದಲಿತ ಕುಟುಂಬದ ಹತ್ಯೆ
Last Updated 21 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮಹಾರಾಷ್ಟ್ರದ ಕಸರ್ವಾಡಿಯ ದಲಿತ ಕುಟುಂಬದ ಸಂಜಯ್‌ ಜಾಧವ್‌, ಅವರ ಪತ್ನಿ ಜಯಶ್ರೀ ಹಾಗೂ ಪುತ್ರ ಸುನಿಲ್‌ ಅವರ ಕೊಲೆ ಪ್ರಕರಣವನ್ನು ಸಿಬಿಐಗೆ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸಿ ‘ದಲಿತ್‌ ಪ್ಯಾಂಥರ್ಸ್‌ ಆಫ್‌ ಇಂಡಿಯಾ’ ಸಂಘಟನೆಯ ಸದಸ್ಯರು ಪುರಭವನದ ಎದರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ದಲಿತ್‌ ನಾಗರಾಜ್‌ ಮಾತನಾಡಿ, ‘ಸಂಜಯ್‌ ಜಾಧವ್‌ ಕುಟುಂಬದವರನ್ನು ಅ.21ರಂದು ಅದೇ ಗ್ರಾಮದ ಸವರ್ಣೀಯರು ತುಂಡು ತುಂಡಾಗಿ ಕತ್ತರಿಸಿ ಕೊಲೆ ಮಾಡಿ ಶವಗಳನ್ನು ಅವರ ಜಮೀನಿನಲ್ಲಿ ಎಸೆದಿದ್ದರು. ಘಟನೆ ನಡೆದು ಒಂದು ತಿಂಗಳಾದರೂ ಈವರೆಗೂ ಆರೋಪಿಗಳನ್ನು ಬಂಧಿಸಿಲ್ಲ’ ಎಂದು ದೂರಿದರು.

‘ಹತ್ಯೆ ಮಾಡಿರುವ ಸವರ್ಣೀಯರ ಹೆಸರುಗಳನ್ನು ಆ ಗ್ರಾಮದ ದಲಿತರು ಹೇಳಿದ್ದಾರೆ. ಆದರೆ,  ಪೊಲೀಸರು ಆರೋಪಿಗಳನ್ನು ಬಂಧಿಸದೆ ದಲಿತ ಕುಟುಂಬಗಳಿಗೆ ಕಿರುಕುಳ ನೀಡುತ್ತಿದ್ದಾರೆ. ದೇಶದಲ್ಲಿ ನಿರಂತರವಾಗಿ ದಲಿತರ ಮೇಲೆ ಹಲ್ಲೆ ನಡೆಯುತ್ತಿದ್ದರೂ ಅದನ್ನು ತಡೆಯಲು ಸರ್ಕಾರಗಳು, ನ್ಯಾಯಾಲಯ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಆರೋಪಿಸಿದರು.

ಘಟನೆ ಸಂಬಂಧ ಪ್ರಕರಣದ ಆರೋಪಿಗಳನ್ನು ಶೀಘ್ರ ಬಂಧಿಸಬೇಕು. ಅಲ್ಲದೇ, ನಿಷ್ಪಕ್ಷಪಾತ ತನಿಖೆ ನಡೆಸಲು ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದರು. ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ತೊಲ್‌ ತಿರುಮಾವಳವನ್‌, ರಾಜ್ಯ ಘಟಕದ ಕಾರ್ಯದರ್ಶಿ ರಾಜ್‌ಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT