ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಬಿಐ ಮುಂದೆ ಸಾಹು ಹಾಜರು

Last Updated 22 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಭುವನೇಶ್ವರ (ಪಿಟಿಐ): ಶಾರದಾ ಚಿಟ್‌ ಫಂಡ್‌ನ ಬಹುಕೋಟಿ ಹಗರಣದ ತನಿಖೆಯನ್ನು ಚುರುಕು­ಗೊಳಿ­ಸಿರುವ ಸಿಬಿಐ ಶನಿವಾರವೂ ಕಾರ್ಯಾ­ಚರಣೆ­ಯನ್ನು ಮುಂದುವ­ರಿ­ಸಿದ್ದು ಒಡಿಶಾ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಅವರ ಆಪ್ತ ಸಹಾಯಕ ಸರೋಜ್‌ ಸಾಹು ಅವರನ್ನು ತನಿಖೆಗಾಗಿ ತನ್ನ ಕಚೇರಿಗೆ ಕರೆಸಿಕೊಂಡಿದೆ.

ಪಟ್ನಾಯಕ್‌ ಅವರ ‘ನವೀನ್‌ ನಿವಾಸ’ ಹಾಗೂ ಆಡಳಿತಾರೂಢ ಬಿಜೆಡಿ ಕಚೇರಿಯಲ್ಲಿ ಕೆಲಸ ನಿರ್ವ ಹಿಸುವ ಸಾಹು ಬಂಧನವು ಮುಖ್ಯ­ಮಂತ್ರಿ­ಗಳಿಗೆ ಮುಜುಗರ ತಂದೊಡ್ಡಿದೆ ಎನ್ನಲಾಗಿದೆ.

‘ಸಿಬಿಐ ಅಧಿಕಾರಿಗಳಿಂದ ನನಗೆ ಕರೆ ಬಂತು. ಅದಕ್ಕಾಗಿ ನಾನು ಇಲ್ಲಿ ಬಂದಿದ್ದೇನೆ. ಆದರೆ ನನ್ನನ್ನು ಯಾವ ಕಾರಣಕ್ಕೆ ಕರೆಸಿಕೊಂಡಿದ್ದಾರೆ ಎಂದು ತಿಳಿದಿಲ್ಲ’ ಎಂದು ಸಾಹು ಸಿಬಿಐ ಕಚೇರಿಗೆ ಪ್ರವೇಶಿಸುವಾಗ ಸುದ್ದಿ­ಗಾರ­ರೊಂದಿಗೆ ಹೇಳಿದರು.

ಆದರೆ ಚಿಟ್‌ ಫಂಡ್‌ ಹಗರಣದಲ್ಲಿ ಬಿಜೆಡಿ   ಪಕ್ಷ ಹಾಗೂ ಸರ್ಕಾರದ ಯಾವುದೇ ಪಾತ್ರ ಇಲ್ಲ ಎಂದು ಪಟ್ನಾಯಕ್‌ ಸ್ಪಷ್ಟ ಪಡಿಸಿದ್ದಾರೆ.

ಬೋಸ್‌ ಪೊಲೀಸ್‌ ವಶಕ್ಕೆ(ಕೋಲ್ಕತಾ  ವರದಿ): ಸಿಬಿಐನಿಂದ ಬಂಧನಕ್ಕೊಳ­ಗಾ­ಗಿ­­ರುವ ರಾಜ್ಯಸಭಾ ಸದಸ್ಯ, ತೃಣಮೂಲ ಕಾಂಗ್ರೆಸ್‌ನ ರಾಜ್ಯಸಭಾ ಸದಸ್ಯ ಸೃಂಜಯ್‌ ಬೋಸ್‌ ಅವರನ್ನು ನಾಲ್ಕು ದಿನಗಳ ಕಾಲ ಪೊಲೀಸ್‌ ವಶಕ್ಕೆ ಒಪ್ಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT