ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಬಿಐ ಮುಖ್ಯಸ್ಥರ ನೇಮಕಾತಿಗೆ ಕಾನೂನಿಗೆ ತಿದ್ದುಪಡಿ

ವಿರೋಧದ ನಡುವೆಯೇ ಲೋಕಸಭೆ ಅಸ್ತು
Last Updated 26 ನವೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಸಿಬಿಐ ಮುಖ್ಯಸ್ಥರ ನೇಮಕಕ್ಕೆ ಅನುವು ಮಾಡಿ­ಕೊಡುವ ತಿದ್ದುಪಡಿ ಮಸೂದೆಯು ಕಾಂಗ್ರೆಸ್‌ನ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ಬುಧವಾರ ಅಂಗೀಕಾರಗೊಂಡಿತು.

ಈ ಮುಂಚಿನ ನಿಯಮದ ಪ್ರಕಾರ, ಸಿಬಿಐ ನಿರ್ದೇಶಕರ ನೇಮಕಾತಿ ಸಮಿತಿಯ ಮೂವರು ಸದಸ್ಯರಲ್ಲಿ ಲೋಕಸಭೆಯ ಅಧಿಕೃತ ಪ್ರತಿಪಕ್ಷದ ನಾಯಕರೂ ಇರಬೇಕೆಂಬುದು ಕಡ್ಡಾ­ಯ­ವಾಗಿತ್ತು.  ಆದರೆ ಈಗ ಲೋಕ­ಸಭೆ­ಯಲ್ಲಿ ಅಧಿಕೃತ ವಿರೋಧ ಪಕ್ಷ ಇಲ್ಲ. ಹೀಗಾಗಿ, ‘ಲೋಕಸಭೆಯ ಅತಿದೊಡ್ಡ ಪ್ರತಿಪಕ್ಷದ ನಾಯಕ ಈ ಸಮಿತಿಯ ಸದಸ್ಯರಲ್ಲಿ ಒಬ್ಬರಾಗಿ­ರುತ್ತಾರೆ’ ಎಂದು ತಿದ್ದುಪಡಿ ಮಾಡಲಾಗಿದೆ.

‘ಸಮಿತಿಯಲ್ಲಿ ಯಾವುದೇ ಸದಸ್ಯ ಹುದ್ದೆ ಖಾಲಿ ಇದ್ದ ಮಾತ್ರಕ್ಕೆ ಅಥವಾ ಯಾವುದೇ ಸದಸ್ಯ ಗೈರುಹಾಜರಿಯ­ಲ್ಲಿದ್ದರೆ ಅದಕ್ಕಾಗಿ ಸಿಬಿಐ ನಿರ್ದೇಶಕರ ನೇಮಕಾತಿ ಅನೂರ್ಜಿತವಾಗುವುದಿಲ್ಲ’ ಎಂಬ ನಿಬಂಧನೆಯನ್ನೂ ತಿದ್ದುಪಡಿ ಒಳಗೊಂಡಿದೆ. ಲೋಕಸಭೆಯಲ್ಲಿ ದೊಡ್ಡ ಪ್ರತಿ­ಪಕ್ಷವಾದ ತಮ್ಮನ್ನು ಸಿಬಿಐ ಮುಖ್ಯಸ್ಥರ ಆಯ್ಕೆ ಪ್ರಕ್ರಿಯೆಯಿಂದ ಹೊರಗಿಡ­ಬೇಕು ಎಂಬ ಉದ್ದೇಶದಿಂದಲೇ ಈ ತಿದ್ದುಪಡಿ ತರಲಾಗಿದೆ ಎಂದು ಕಾಂಗ್ರೆಸ್‌ ಟೀಕಿಸಿದೆ.

ಪ್ರತಿಪಕ್ಷವನ್ನು ಅವಮಾನಿಸಲೆಂದೇ ಹಾಗೂ ಸಿಬಿಐ ನಿರ್ದೇಶಕರ ನೇಮಕಾತಿ­ಯಿಂದ ಕಾಂಗ್ರೆಸ್ಸನ್ನು  ಪೂರ್ತಿಯಾಗಿ ಹೊರಗಿಡಬೇಕು ಎಂಬ ದುರುದ್ದೇಶ­ದಿಂದಲೇ ಈ ತಿದ್ದುಪಡಿಗಳನ್ನು ಮಾಡ­ಲಾಗಿದೆ ಎಂದು ಕಾಂಗ್ರೆಸ್‌ ನಾಯಕ ಖರ್ಗೆ ಅವರು ಆಪಾದಿಸಿದರು.
ಬಿಜೆಪಿ ಸದಸ್ಯರಾದ ತಥಾಗತ್‌ ಸಪ್ತತಿ ಮತ್ತು ಭರ್ತೃಹರಿ ಮಹ್ತಾಬ್‌ ಅವರು ಇದನ್ನು ಬೆಂಬಲಿಸಿದರು.

‘ಈ ಹಿಂದೆ ಯಾವತ್ತೂ ಸಿಬಿಐ ನಿರ್ದೇಶಕರ ನೇಮಕಾತಿ ಈ ರೀತಿ ನಡೆದ ಉದಾಹರಣೆಯೇ ಇಲ್ಲ. ಒಂದೊಮ್ಮೆ ಹೀಗೆ ಎಂದಾದ್ದರೂ ನಡೆದಿದ್ದರೆ ಅದನ್ನು ಬಹಿರಂಗಪಡಿ­ಸಬೇಕು’ ಎಂದೂ ಕಾಂಗ್ರೆಸ್‌ ಹೇಳಿತು. ಕಾಂಗ್ರೆಸ್‌ ಸಂಸದ ಮೊಯಿಲಿ ಅವರೂ ಈ ತಿದ್ದುಪಡಿಗಳನ್ನು ತೀವ್ರವಾಗಿ ವಿರೋಧಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT