ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಬಿಐ ಹೊಸ ಮುಖ್ಯಸ್ಥರ ಆಯ್ಕೆ ಪ್ರಕ್ರಿಯೆ ಆರಂಭ

Last Updated 23 ನವೆಂಬರ್ 2014, 13:20 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ) : ಸಿಬಿಐ ಮುಖ್ಯಸ್ಥ ರಂಜಿತ್‌ ಸಿನ್ಹಾ ಅವರ ಅಧಿಕಾರಾವಧಿಯು ಡಿಸೆಂಬರ್‌ 2ಕ್ಕೆ ಕೊನೆಗೊಳ್ಳಲಿದ್ದು, ಅವರ ನಿರ್ಗಮನದಿಂದ ತೆರವಾಗುವ ಸ್ಥಾನಕ್ಕೆ ಹೊಸಬರನ್ನು ನೇಮಿಸುವ ಪ್ರಕ್ರಿಯೆ ಆರಂಭವಾಗಿದೆ.

ಕೇಂದ್ರ ಆಡಳಿತ ಮತ್ತು ತರಬೇತಿ ಇಲಾಖೆಯು ಹಿರಿಯ ಐಪಿಎಸ್‌ ಅಧಿಕಾರಿಗಳ ಹೆಸರನ್ನು ಸಿಬಿಐ ಮುಖ್ಯಸ್ಥರ ಹುದ್ದೆಗಾಗಿ ಪರಿಶೀಲಿಸುತ್ತಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಸಿಬಿಐ ಮುಖ್ಯಸ್ಥರ ಆಯ್ಕೆಯು ಈ ಬಾರಿ ಲೋಕಪಾಲ ಕಾಯ್ದೆಯನ್ವಯ ನಡೆಯಲಿದೆ. ಇಲಾಖಾಮಟ್ಟದ ಆಯ್ಕೆ ಸಮಿತಿಯು ಶಿಫಾಸರು ಮಾಡುವವರ ಹೆಸರನ್ನು ಕೇಂದ್ರ ಸರ್ಕಾರ ಮುಖ್ಯಸ್ಥರ ಹುದ್ದೆಗೆ ಪರಿಗಣಿಸಲಿದೆ.

ಪ್ರಧಾನಮಂತ್ರಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಅಥವಾ ಹಿರಿಯ ನ್ಯಾಯಾಧೀಶರನ್ನೊಳಗೊಂಡ ಉನ್ನತಮಟ್ಟದ ಸಮಿತಿಯು ಮುಖ್ಯಸ್ಥರ ಆಯ್ಕೆಯನ್ನು ಅಂತಿಮಗೊಳಿಸಲಿದೆ.

ಕೇಂದ್ರ ಗೃಹ ಇಲಾಖೆಯು ಹಿರಿಯ ಐಪಿಎಸ್‌ ಅಧಿಕಾರಿಗಳ ಪಟ್ಟಿಯನ್ನು ಆಡಳಿತ ಮತ್ತು ತರಬೇತಿ ಇಲಾಖೆಗೆ ಕಳಿಸಿದ್ದು, ಸೇವಾ ಹಿರಿತನ, ದಕ್ಷತೆ ಹಾಗೂ ಭ್ರಷ್ಟಾಚಾರದ ವಿರುದ್ಧ ತನಖೆ ನಡೆಸಿದ ಅನುಭವಗಳನ್ನು ಹೊಂದಿರುವವರ ಹೆಸರನ್ನು ಆಯ್ಕೆ ಸಮಿತಿ ಪರಿಗಣಿಸಲಿದೆ.

ಪ್ರಧಾನಮಂತ್ರಿಯವರ ನೇತೃತ್ವದ ಉನ್ನತ ಮಟ್ಟದ ಸಮಿತಿಯಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕರ ಗೈರು ಹಾಜರಿಯಲ್ಲಿಯೂ ಸಿಬಿಐ ಮುಖ್ಯಸ್ಥರ ಹೆಸರನ್ನು ಅಂತಿಮಗೊಳಿಸಲು ಲೋಕಪಾಲ ಕಾಯ್ದೆ ಹಾಗೂ ದೆಹಲಿ ವಿಶೇಷ ಪೊಲೀಸ್‌ ಜಾರಿ (ಡಿಎಸ್‌ಪಿಇ) ಕಾಯ್ದೆ – 1946ಕ್ಕೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಮುಂದಾಗಿದೆ.

ಸದ್ಯ ಲೋಕಸಭೆಯಲ್ಲಿ ಕಾನೂನು ಬದ್ಧವಾದ ವಿರೋಧ ಪಕ್ಷದ ನಾಯಕರು ಇಲ್ಲದೆ ಇರುವುದರಿಂದ ಈ ತಿದ್ದುಪಡಿಯು ಅನಿವಾರ್ಯವಾಗಿದೆ ಎಂದು ಉನ್ನತ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT