ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿರಿಧಾನ್ಯ ಮೇಳ

Last Updated 27 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ರೈತರು ಬೆಳೆಯುವ ಸಿರಿಧಾನ್ಯ ಬೆಳೆಗಳ ಮಾರುಕಟ್ಟೆ, ಗ್ರಾಹಕರಿಗೆ ವಿಷಮುಕ್ತ ಆಹಾರ ನೀಡುವ ಉದ್ದೇಶದಿಂದ ಬೆಂಗಳೂರಿನ ‘ಗ್ರಾಮೀಣ ಕುಟುಂಬ’ ಸಂಸ್ಥೆಯು ಇಕ್ರಾ ಸಾವಯವ ಕೃಷಿ ಸಂಘಟನೆ, ಗ್ರೀನ್ ಫೌಂಡೇಶನ್, ಸಹಜ ಸೀಡ್ಸ್, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಹಾಗೂ ಇತರ ಸಂಸ್ಥೆಗಳ ಸಹಯೋಗದೊಂದಿಗೆ ಮೇ 1ರಿಂದ  3ರವರೆಗೆ ಮೂರು ದಿನಗಳ ಕಾಲ ಸಿರಿಧಾನ್ಯ ಮೇಳವನ್ನು ಬೆಂಗಳೂರಿನ ಲಾಲ್‌ಬಾಗ್‌ನಲ್ಲಿರುವ ಡಾ. ಮರಿಗೌಡ ಸ್ಮಾರಕ ಸಭಾಂಗಣದಲ್ಲಿ ಆಯೋಜಿಸಿದೆ.

ಮೇಳದಲ್ಲಿ...
* ರೈತರು ಹಾಗೂ ಗ್ರಾಹಕರ ಮಧ್ಯೆ ಸಂಪರ್ಕ ಕಲ್ಪಿಸಲು ಪ್ರತ್ಯೇಕ ವ್ಯವಸ್ಥೆ. ನೈಸರ್ಗಿಕ- ಸಾವಯವ ಉತ್ಪನ್ನಗಳನ್ನು ಕೊಳ್ಳುವವರು, ವ್ಯಾಪಾರಸ್ಥರು ನೇರವಾಗಿ ರೈತರ ಜತೆ ಮಾತುಕತೆ ನಡೆಸುವ ಅವಕಾಶ.
* ಸಿರಿಧಾನ್ಯ ಸಂಸ್ಕರಣೆ ಯಂತ್ರ ಪ್ರದರ್ಶನ ಹಾಗೂ ಕಾರ್ಯ ವಿಧಾನ ಪ್ರಾತ್ಯಕ್ಷಿಕೆ
* ಗ್ರಾಹಕರಿಗಾಗಿ ಸಿರಿಧಾನ್ಯಗಳ ವಿಶೇಷ ತಿಂಡಿ ತಯಾರಿಕೆ ಕಲಿಯುವ ಮತ್ತು ಅವುಗಳನ್ನು ಸವಿಯುವ ಅವಕಾಶ
* ಪ್ರತಿಯೊಂದು ಸಿಧಾನ್ಯಗಳ ತೆನೆ, ಕಾಳು, ಅದರ ವ್ಯವಸಾಯ ವಿಧಾನ ಹಾಗೂ ಸಿರಿಧಾನ್ಯ ಸೇವನೆಯಿಂದ ಸಿಗುವ ಆರೋಗ್ಯ ಪ್ರಯೋಜನದ ಮಾಹಿತಿ, ಪುಸ್ತಕ ಪ್ರದರ್ಶನ– ಮಾರಾಟ.
* ಗ್ರಾಹಕರೇ ತಯಾರಿಸಿದ ಹಪ್ಪಳ, ಸಂಡಿಗೆ ಮತ್ತು ಉಪ್ಪಿನಕಾಯಿ ಮಾರಾಟ ವ್ಯವಸ್ಥೆ. ಇದರ ಜತೆಗೆ ಕೊರಲು, ಸಜ್ಜೆ, ಜೋಳ, ರಾಗಿ ರೊಟ್ಟಿ ಪಾಯಸ, ಪೊಂಗಲ್, ಬಿಸಿಬೇಳೆಬಾತ್, ಚಕ್ಕುಲಿ, ಸವಿಯಲು ಅವಕಾಶ.

ಏನೆಲ್ಲ ಇದೆ?
ಶುದ್ಧ ಆಹಾರವನ್ನು ಒಂದೇ ಸೂರಿನಡಿಯಲ್ಲಿ ಕೊಡುವ ಉದ್ದೇಶ ಮೇಳದ್ದು. ನೈಸರ್ಗಿಕ ಮತ್ತು ಸಾವಯವ ಉತ್ಪನ್ನಗಳು, ಸಿರಿಧಾನ್ಯಗಳು, ವಿವಿಧ ತಳಿಯ ಅಕ್ಕಿಗಳು, ಬೇಳೆ ಕಾಳುಗಳು, ಸಾಂಬಾರು ಪದಾರ್ಥಗಳು, ಬೆಲ್ಲ, ಸಕ್ಕರೆ, ಜೇನುತುಪ್ಪ, ಕಾಫಿ, ಟೀ, ಒಣಹಣ್ಣುಗಳು, ಆಕಳ ತುಪ್ಪ, ಇನ್ನಿತರ ಪದಾರ್ಥಗಳು ಇರಲಿವೆ.

ಮೂರು ದಿನಗಳ ಕಾಲ ಬೆಳಿಗ್ಗೆ 8ರಿಂದ ಸಂಜೆ 7ರವರೆಗೆ ನಡೆಯುವ ಈ ಸಿರಿಧಾನ್ಯ ಮೇಳವು ಸಣ್ಣ ರೈತರು, ವ್ಯಾಪಾರಸ್ಥರು ಮತ್ತು ಗ್ರಾಹಕರ ಮಧ್ಯೆ ಸಮನ್ವಯ ಬೆಳೆಸುವ ಉದ್ದೇಶ ಹೊಂದಿದೆ. ಹೆಚ್ಚಿನ ಮಾಹಿತಿಗೆ: ಶ್ರೀಧರ್ ಮೂರ್ತಿ ಎಂ.ಎಚ್. ಅವರನ್ನು ಸಂಪರ್ಕಿಸಬಹುದು. ದೂ:  9738449133

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT