ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿವಿಸಿ, ವಿಸಿ ನೇಮಕ ವಿವಾದ: ‘ಸುಪ್ರೀಂ’ ಒಪ್ಪಿಗೆ ಪಡೆಯಲು ನಿರ್ದೇಶನ

Last Updated 17 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಕೇಂದ್ರೀಯ ಜಾಗೃತ ಆಯುಕ್ತರು (ಸಿವಿಸಿ) ಮತ್ತು ಜಾಗೃತ ಆಯುಕ್ತರ (ವಿಸಿ) ನೇಮಕಕ್ಕೂ ಮುನ್ನ ತನ್ನ ಅನುಮತಿ ಪಡೆಯುವಂತೆ  ಹಾಗೂ ನೇಮಕಾತಿ ಪ್ರಕ್ರಿಯೆಯ ವಿವರ ಸಲ್ಲಿಸುವಂತೆ ಸುಪ್ರೀಂಕೋರ್ಟ್‌ ಬುಧ­ವಾರ ಕೇಂದ್ರ ಸರ್ಕಾ­ರಕ್ಕೆ ಸೂಚಿಸಿದೆ.

ಮುಖ್ಯ ನ್ಯಾಯಮೂರ್ತಿ ಎಚ್.ಎಲ್‌. ದತ್ತು ಮತ್ತು ನ್ಯಾಯಮೂರ್ತಿಗಳಾದ ಮದನ್‌ ಬಿ. ಲೋಕುರ್‌ ಅವರನ್ನೊಳ­ಗೊಂಡ ಪೀಠ, ಈಗಿನ ನೇಮ­ಕಾತಿ ಪ್ರಕ್ರಿ­ಯೆಯನ್ನು ಮುಂದುವರಿಸು­ವಂತೆಯೂ ಸರ್ಕಾ­ರಕ್ಕೆ ನಿರ್ದೇಶನ ನೀಡಿದೆ.

ವಿಚಾರಣೆಯಲ್ಲಿ ಕೇಂದ್ರ ಸರ್ಕಾರದ ಪರ ಹಾಜರಿದ್ದ ಅಟಾರ್ನಿ ಜನರಲ್‌ ಮುಕುಲ್‌ ರೋಹಟಗಿ ಅವರು, ನೇಮ­ಕಾತಿ ಪ್ರಕ್ರಿ­ಯೆಗೆ ಸಂಬಂಧಿಸಿದ ದಾಖಲು­ಪತ್ರ­ಗಳನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿ­ಸು­ವುದಾಗಿ ಪೀಠಕ್ಕೆ ತಿಳಿಸಿದರು.   ಜಾಗೃತ ಆಡಳಿತದಲ್ಲಿ ಸಮಗ್ರತೆ, ನಿರ್ವ­­ಹಣೆ ಮತ್ತು ತರಬೇತಿಗಾಗಿರುವ ಸರ್ಕಾ­ರೇತರ ಸಂಸ್ಥೆಯೊಂದು (ಎನ್‌ಜಿಒ) ಸಲ್ಲಿ­ಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ­ಯ ಬಗ್ಗೆ ಪೀಠ ವಿಚಾರಣೆ ನಡೆಸಿತು.

ಕ್ರಮವಾಗಿ ಸೆಪ್ಟೆಂಬರ್‌ 7 ಮತ್ತು 28­ರಂದು ನಿವೃತ್ತರಾದ ವಿಸಿ ಜೆ.ಎಂ. ಗರ್ಗ್‌ ಮತ್ತು ಸಿವಿಸಿ ಪ್ರದೀಪ್‌ ಕುಮಾ-ರ್‌ ಅವರ ಅಧಿಕಾರಾವಧಿ ಮು­ಗಿದ ಬಳಿಕ  ಖಾಲಿಯಾದ ಹುದ್ದೆಗಳ-ನ್ನು ಸರ್ಕಾರ ಯಾವುದೇ ಪ್ರಚಾರ ನೀಡದೆ ಭರ್ತಿ ಮಾಡಲು ಹೊರಟಿದೆ ಎಂದು ಅರ್ಜಿ­ಯಲ್ಲಿ ಆರೋಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT