ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೀಟ್‌ ಬೆಲ್ಟ್‌ ಜಿಜ್ಞಾಸೆ

ಕುಂದುಕೊರತೆ
Last Updated 19 ಜನವರಿ 2015, 19:30 IST
ಅಕ್ಷರ ಗಾತ್ರ

ನಾನು ಮಾರತ್‌ಹಳ್ಳಿ ಸೇತುವೆ ಮೇಲೆ ಹೋಗುವಾಗ ತುಂಬಾ ಟ್ರಾಫಿಕ್‌ ಇತ್ತು. ಹೆಜ್ಜೆ ಹೆಜ್ಜೆಗೂ ವಾಹನ ನಿಧಾನವಾಗಿ ಚಲಿಸುತ್ತಿರುವಾಗ ಪೊಲೀಸ್‌ ಇನ್‌್ಸಪೆಕ್ಟರ್‌ ನನ್ನನ್ನು ತಡೆದು ಪಕ್ಕಕ್ಕೆ ಕರೆದು ಸೀಟ್‌ ಬೆಲ್ಟ್‌ ಹಾಕಿಲ್ಲ ಎಂದು ₨ 100 ದಂಡ ವಿಧಿಸಿ ಕೈಯಲ್ಲಿ (ಕಂಪ್ಯೂಟರ್‌) ಚೀಟಿ ಕೊಟ್ಟರು. ಆಗ ಅವರಿಗೆ, ‘ನೀವು ನೋಡಿದ ಹಾಗೆ ಹೆಜ್ಜೆ ಹೆಜ್ಜೆಗೂ ವಾಹನಗಳು ನಿಧಾನವಾಗಿ ಚಲಿಸುತ್ತಿರುತ್ತವೆ. ನನಗೆ ₨ 100 ದಂಡ ವಿಧಿಸಿದಿರಿ. ಆದರೆ ಇಲ್ಲಿ ನನ್ನ ಜೊತೆಯಲ್ಲಿಯೇ ಆಟೋ, ಟೆಂಪೊ, ಲಾರಿ, ಬಸ್ಸು ಇನ್ನು ಇತರ ವಾಹನಗಳಿಗೆ ಏಕೆ ದಂಡ ವಿಧಿಸಿಲ್ಲ, ಇವರು ನಿಮ್ಮ ಕಣ್ಣಿಗೆ ಕಾಣಿಸುತ್ತಿಲ್ಲವೇ’ ಎಂದು ಕೇಳಿದೆ. ಅದಕ್ಕೆ ಅವರು ‘ಕಾನೂನು ಮಾಡಿದವರನ್ನೇ ಕೇಳಿ’ ಎಂದರು. ಆತ ಕೊಟ್ಟ ಚೀಟಿಯನ್ನು ನನ್ನ ಜೇಬಿನಲ್ಲಿ ಇಟ್ಟು ಈ ಪತ್ರಕ್ಕೆ ನಕಲು ಮಾಡಲು ನೋಡಿದರೆ ಅಕ್ಷರಗಳೇ ಮಾಯವಾಗಿದ್ದವು. ಅಷ್ಟು ಕಳಪೆಯಾಗಿತ್ತು ಕಾಗದ. ನಗರದಲ್ಲಿ ಎಷ್ಟೋ ಕಡೆ ವೇಗವಾಗಿ ವಾಹನಗಳನ್ನು ಓಡಿಸುವುದು ಸಾಧ್ಯವಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಸೀಟ್‌ಬೆಲ್ಟ್‌ ಹಾಕದ ಕಾರಿನವರಿಗೆ ಮಾತ್ರ ದಂಡ ವಿಧಿಸುವಂಥ ಕಾನೂನು ಬೇಕಾ? ಆಟೋ, ಟೆಂಪೊ, ಲಾರಿ, ಬಸ್ಸು ಇವರಿಗೆ ಬೇಕಾಗಿಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT