ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೀಮಾಂಧ್ರದಲ್ಲಿ ಟಿಡಿಪಿ, ತೆಲಂಗಾಣದಲ್ಲಿ ಕಾಂಗ್ರೆಸ್‌

ಆಂಧ್ರ ನಗರ ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ ಪ್ರಕಟ
Last Updated 12 ಮೇ 2014, 19:30 IST
ಅಕ್ಷರ ಗಾತ್ರ

ಹೈದರಾಬಾದ್‌ (ಪಿಟಿಐ): ಸಾರ್ವತ್ರಿಕ ಚುನಾವಣೆಗೆ ಸೆಮಿ­ಫೈನಲ್‌ ಎಂದೇ ಕರೆಯಲಾಗಿದ್ದ ಆಂಧ್ರ ಪ್ರದೇಶ ಸ್ಥಳೀಯ ಸಂಸ್ಥೆ­ಗಳ ಚುನಾವಣೆ ಫಲಿತಾಂಶ ಸೋಮವಾರ ಪ್ರಕಟ­ವಾ­ಗಿದ್ದು, ಸೀಮಾಂಧ್ರದಲ್ಲಿ ಟಿಡಿಪಿ ಮೇಲುಗೈ ಸಾಧಿಸಿದ್ದರೆ ತೆಲಂಗಾಣದಲ್ಲಿ ಕಾಂಗ್ರೆಸ್‌ ಹಿಡಿತ ಸಾಧಿಸಿದೆ. ಆದರೆ ಸೀಮಾಂ­ಧ್ರದಲ್ಲಿ ಕಾಂಗ್ರೆಸ್‌ ಮುಖಭಂಗ ಅನುಭವಿಸಿದೆ. 

ತೆಲಂಗಾಣದಲ್ಲಿ ತೆಲಂಗಾಣ ರಾಷ್ಟ್ರಸಮಿತಿಗೆ (ಟಿಆರ್‌ಎಸ್‌) ಮತ್ತು ಸೀಮಾಂಧ್ರದಲ್ಲಿ ವೈಎಸ್‌ಆರ್‌ ಕಾಂಗ್ರೆ­ಸ್‌ಗೆ ಹಿನ್ನಡೆಯಾಗಿದೆ.  ಗಜ್ವೆಲ್‌ ಮುನ್ಸಿಪಾಲಿಟಿ­ಯಲ್ಲಿ ಟಿಡಿಪಿ  ಜಯ ಸಾಧಿಸಿದೆ. ತೆಲಂಗಾಣದ ಬಹುತೇಕ ನಗರ ಸಭೆ ಮತ್ತು ಪಾಲಿಕೆಗಳಲ್ಲಿ ಕಾಂಗ್ರೆಸ್‌ ಜಯಸಾಧಿಸಿದೆ.

ಸೀಮಾಂಧ್ರ ಭಾಗದಲ್ಲಿ ಚಂದ್ರ­ಬಾಬು ನಾಯ್ದು ನೇತೃತ್ವದ ಟಿಡಿಪಿ 60 ಕ್ಕೂ ಹೆಚ್ಚು ಪುರಸಭೆ­ಗಳಲ್ಲಿ ಜಯಸಾಧಿಸಿದೆ. ಆಂಧ್ರಪ್ರದೇಶ ವಿಭಜನೆ ವಿರೋಧಿಸಿ ಹೋರಾಟ ನಡೆಸುತ್ತಾ ಬಂದಿದ್ದ ವೈಎಸ್‌ಆರ್‌ ಕಾಂಗ್ರೆಸ್‌ನ ವೈ.ಎಸ್‌.ಜಗನ್‌ ಮೋಹನ್‌ ರೆಡ್ಡಿ ನೇತೃತ್ವದ ವೈಎಸ್‌ಆರ್‌ಸಿ 17 ಪುರಸಭೆಗಳನ್ನು ತನ್ನ ತೆಕ್ಕೆಗೆ ಪಡೆದಿದೆ.

ಸೀಮಾಂಧ್ರದಲ್ಲಿ ವಿಜಯವಾಡ ಸೇರಿದಂತೆ ಟಿಡಿಪಿ ಐದು ಪಾಲಿಕೆಗಳಲ್ಲಿ ಜಯ ಸಾಧಿಸಿದೆ. ಕಡಪ ಸೇರಿ ಎರಡು ಪಾಲಿಕೆಗಳಲ್ಲಿ ವೈಎಸ್‌ಆರ್‌ ಕಾಂಗ್ರೆಸ್ ಅಧಿಕಾರ ಹಿಡಿಯ­ಲಿದೆ.  ತೆಲಂಗಾಣದ ಕರೀಂನಗರ ಪಾಲಿಕೆ ಟಿಆರ್ಎಸ್‌ ಪಾಲಾ­­ಗಿದೆ. ಇಲ್ಲಿನ 56 ನಗರಸಭೆಗಳಲ್ಲಿ ಕಾಂಗ್ರೆಸ್‌ 23 ರಲ್ಲಿ ಗೆಲುವು ಸಾಧಿಸಿದೆ.

ಇಲ್ಲಿ ಟಿಆರ್‌ಎಸ್‌ಗೆ 9, ಟಿಡಿಪಿಗೆ 4, ಬಿಜೆಪಿಗೆ 2ರಲ್ಲಿ ಗೆಲುವು ದಕ್ಕಿದೆ. ಉಳಿದ ನಗರ­ಸಭೆಗಳಲ್ಲಿ ಯಾವುದೇ ಪಕ್ಷಗಳು ಬಹುಮತ ಪಡೆದಿಲ್ಲ. ಸೀಮಾಂಧ್ರದಲ್ಲಿ ಗೆಲುವಿಗೆ ಟಿಡಿಪಿ ಸಿಹಿಹಂಚಿ ವಿಜಯೋತ್ಸಾಹ ಆಚ­ರಿಸಿತು. ಟಿಡಿಪಿ ಜಯ ಭ್ರಷ್ಟಾಚಾರ ವಿರುದ್ಧದ ಜಯ ಎಂದು ಸಿಂಗ­ಪುರದಿಂದ  ಚಂದ್ರಬಾಬು ನಾಯ್ಡು ಸಂದೇಶ ಕಳುಹಿಸಿದ್ದಾರೆ.
ಫಲಿತಾಂಶವನ್ನು ಪರಿಶೀಲಿಸುವುದಾಗಿ ವೈಎಸ್‌ಆರ್‌ ಕಾಂಗ್ರೆಸ್‌ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT