ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೀಮಿತ ಗಣಿಗಾರಿಕೆಗೆ ಅಸ್ತು

ಗೋವಾ: ವಾರ್ಷಿಕ 2 ಕೋಟಿ ಟನ್‌ಗೆ ಅವಕಾಶ
Last Updated 21 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ: ಗೋವಾದಲ್ಲಿ ವಾರ್ಷಿಕ­ವಾಗಿ ಎರಡು ಕೋಟಿ ಟನ್‌ಗಳಷ್ಟು ಕಬ್ಬಿಣದ ಅದಿರು ತೆಗೆಯುವುದಕ್ಕೆ ಸುಪ್ರೀಂ­ಕೋರ್ಟ್‌್ ಸೋಮವಾರ ಅನು­ಮತಿ ನೀಡಿದೆ.

‘ಈ ಬಗ್ಗೆ ತಜ್ಞರ ಸಮಿತಿಯು ಇನ್ನು ಆರು ತಿಂಗಳಲ್ಲಿ ಅಂತಿಮ ಶಿಫಾರಸು ನೀಡ­ಲಿದೆ’ ಎಂದು ನ್ಯಾಯಮೂರ್ತಿ­ಗಳಾದ ಎ.ಕೆ.­ಪಟ್ನಾಯಕ್‌್, ಎಸ್‌.­ಎಸ್‌.­­ನಿಜ್ಜರ್‌್ ಹಾಗೂ ಎಫ್‌.ಎಮ್‌.ಐ ಕಲೀಫುಲ್ಲಾ  ಅವರನ್ನೊಳ­ಗೊಂಡ ಪೀಠ ಹೇಳಿತು.
ಸುಮಾರು ಒಂದೂವರೆ ವರ್ಷ­ಗಳಿಂದ  ಗೋವಾ­ದಲ್ಲಿ ಕಬ್ಬಿಣದ ಅದಿರು ಗಣಿಗಾರಿಕೆಯನ್ನು ನಿಷೇಧಿ­ಸಲಾಗಿತ್ತು.

‘1962ರಿಂದ ನೀಡಿದ್ದ ಗಣಿ ಗುತ್ತಿಗೆ ಪರವಾನಗಿ 2007ರ ನಂತರವೂ ನವೀಕರಣವಾಗಿದೆ ಎಂದು ಭಾವಿಸಬಾ­ರದು. ರಾಷ್ಟ್ರೀಯ ಉದ್ಯಾನಗಳು ಹಾಗೂ ವನ್ಯಧಾಮಗಳ ಸುತ್ತ ಒಂದು ಕಿ.ಮೀ ವ್ಯಾಪ್ತಿಯಲ್ಲಿ ಗಣಿ ಗುತ್ತಿಗೆಗೆ ಅವಕಾಶ­ವಿಲ್ಲ’ ಎಂದೂ ಪೀಠ ಹೇಳಿದೆ.

ಇನ್ನು ಆರು ತಿಂಗಳಿನೊಳಗೆ ರಾಷ್ಟ್ರೀಯ ಉದ್ಯಾನಗಳ ಸುತ್ತಲಿನ ‘ಪರಿ­­ಸರ ಸೂಕ್ಷ್ಮ’ ಪ್ರದೇಶಗಳನ್ನು ಗುರು­ತಿ­­ಸುವಂತೆ ಪರಿಸರ ಹಾಗೂ ಅರಣ್ಯ ಸಚಿ­ವಾಲ­ಯಕ್ಕೆ ಕೋರ್ಟ್‌್ ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT