ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಪ್ರೀಂ ಕೋರ್ಟ್‌ ಆದೇಶದ ಉಲ್ಲಂಘನೆ

ಅಕ್ಷರ ಗಾತ್ರ

ಬೆಂಗಳೂರಿನ ಕೃಷ್ಣರಾಜಪುರದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ದೇವಾಲಯ ನಿರ್ಮಾಣವಾ­ಗುತ್ತಿರುವುದನ್ನು ಪ್ರಜಾಪರಿವರ್ತನಾ ವೇದಿಕೆ ವಿರೋ­ಧಿಸಿರುವ ಸುದ್ದಿಗೆ ಪ್ರತಿಕ್ರಿಯೆ (ಪ್ರ.ವಾ., ಅ.೨೨). ಸರ್ಕಾರಿ ಜಮೀನಿನಲ್ಲಿ ಯಾವುದೇ ಧಾರ್ಮಿಕ ಕಟ್ಟಡದ ನಿರ್ಮಾಣ ಆಗುವುದು ಸುಪ್ರೀಂ ಕೋರ್ಟಿನ ಆದೇಶದ ಸ್ಪಷ್ಟ ಉಲ್ಲಂಘನೆ ಆಗುತ್ತದೆ. ತಮ್ಮ ಎದುರಲ್ಲಿಯೇ ಇಂತಹ ಅಕ್ರಮ  ನಡೆಯು­ತ್ತಿದ್ದರೂ, ಕಾನೂನಿನ ಪಾಲನೆ ಮಾಡಬೇಕಾದ ಸಂಬಂಧಪಟ್ಟ ಅಧಿಕಾರಿಗಳು ಸುಮ್ಮನಿರುವುದು   ಅನುಮಾನಕ್ಕೆ ಕಾರಣವಾಗುತ್ತಿದೆ.

ಸಾರ್ವಜನಿಕರ ಅಭಿಪ್ರಾಯ ಪಡೆದು ದೇವಸ್ಥಾನ ನಿರ್ಮಾಣ ಮಾಡುತ್ತಿರುವುದಾಗಿ ಈ ನಿರ್ಮಾಣ ಕಾರ್ಯದಲ್ಲಿ ತೊಡಗಿರುವವರು ಸಮರ್ಥನೆ ಮಾಡಿ­ಕೊಂಡಿ­ರುವುದು ಗಮನಾರ್ಹ. ಅನಧಿಕೃತ ಗುಡಿ ನಿರ್ಮಿಸುವವರು ಮಾತ್ರ ಸಾರ್ವಜನಿಕರೇ? ಅಂತಹ ಅಕ್ರಮ­ಗಳನ್ನು ವಿರೋಧಿಸುವವರೂ ಸಾರ್ವ­ಜನಿಕರ ಲ್ಲವೇ? ಸಾರ್ವಜನಿಕ ಸ್ಥಳಗಳು  ಪರಿಸರದ ಹಿತದೃಷ್ಟಿ­ಯಿಂದ ಉದ್ಯಾನಗಳಾಗಿ ಮಾತ್ರವೇ  ಉಳಿಯಬೇಕು. ಘನ ನ್ಯಾಯಾಲಯವು ತನ್ನ ಆದೇಶಗಳ ಪಾಲನೆ­ಯಾಗದಿದ್ದಲ್ಲಿ  ಸ್ಥಳೀಯ ಅಧಿಕಾರಿಗಳನ್ನೇ ಅದಕ್ಕೆ ಹೊಣೆ ಮಾಡಿ, ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂ­ಡರೆ ಮಾತ್ರ ಇಂತಹ ಎಷ್ಟೋ ಅಕ್ರಮಗಳಿಗೆ ಮೂಗು­ದಾರ ಹಾಕಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT