ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಬ್ರತೊ ಅರ್ಜಿ ವಜಾ

Last Updated 4 ಜೂನ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಹೂಡಿಕೆ­ದಾರ­ರಿಗೆ ವಂಚಿಸಿ-­ರುವ ಪ್ರಕರಣದಲ್ಲಿ 3 ತಿಂಗಳಿನಿಂದ ಜೈಲಿನ­ಲ್ಲಿರುವ ಸಹಾರಾ ಸಮೂಹದ ಅಧ್ಯಕ್ಷ ಸುಬ್ರತೊ ರಾಯ್‌ ಗೃಹ­ಬಂಧನ­ದಲ್ಲಿಡುವಂತೆ ಕೋರಿ ಸಲ್ಲಿ­ಸಿದ್ದ ಮನವಿ­ಯನ್ನು ಸುಪ್ರೀಂ­ಕೋರ್ಟ್‌ ಬುಧವಾರ ವಜಾ ಮಾಡಿದೆ.

ಆದರೆ ₨ 5,000 ಕೋಟಿ ನಗದು ಕ್ರೋಡೀಕರಿ­ಸುವ ಸಲುವಾಗಿ  ಆಸ್ತಿ ಮಾರಾಟ ಮಾಡಲು ರಾಯ್‌ ಅವರಿಗೆ ಕೋರ್ಟ್‌ ಅವಕಾಶ ನೀಡಿದೆ. ಜೈಲಿ­ನಿಂದ ಬಿಡುಗಡೆಯಾ-­ಗುವುದಕ್ಕೆ ಹೂಡಿ­ಕೆ­­ದಾರರಿಗೆ ಮರು­ಪಾವತಿ ಖಾತ್ರಿ ಹಣ­ವಾಗಿ ಮತ್ತೆ 5,000 ಕೋಟಿ ರೂಪಾ­ಯಿ­ಗಳನ್ನು ಬ್ಯಾಂಕ್‌ ಖಾತೆಯಲ್ಲಿ ಇಡಬೇಕು’ ಎಂದೂ ನ್ಯಾಯಾಲಯ ಹೇಳಿದೆ.

‘ಜೈಲಿನಿಂದ ಹೊರಗೆ ಸ್ಥಳಾಂತರಿಸಲು ಕೋರಿ ಸುಬ್ರತೊ ಸಲ್ಲಿಸಿದ್ದ ಮನ­ವಿಯನ್ನು ವಜಾ ಮಾಡ­ಲಾಗಿದೆ’ ಎಂದು ನ್ಯಾಯ­ಮೂರ್ತಿ­ಗ­ಳಾ­ದ ಟಿ.ಎಸ್. ಠಾಕೂರ್‌ ಹಾಗೂ ಎ.ಕೆ. ಸಿಕ್ರಿ ಅವರ ಪೀಠ ಹೇಳಿತು.

ಮಾರ್ಚ್‌ 4ರಿಂದ ಸುಬ್ರತೊ ಇಲ್ಲಿನ ತಿಹಾರ್‌ ಜೈಲಿನಲ್ಲಿ ಬಂದಿ­ಯಾಗಿದ್ದಾರೆ.  ಹೂಡಿಕೆದಾರರಿಗೆ ₨ 5,000 ಕೋಟಿ  ನಗದು ಪಾವತಿ­ಸ­ಬೇಕು. ಬಿಡುಗಡೆಗೆ ಪೂರ್ವ ಷರತ್ತಾಗಿ ₨ 5,000 ಕೋಟಿ ಹಣವನ್ನು ಬ್ಯಾಂಕ್‌ ಖಾತೆಯಲ್ಲಿ ಇಡಬೇಕು ಎಂದು ಸುಬ್ರತೊ ಅವರಿಗೆ ಈ ಮೊದಲು ಕೋರ್ಟ್‌ ತಾಕೀತು ಮಾಡಿತ್ತು.

9 ನಗರಗಳಲ್ಲಿರುವ ಸ್ಥಿರಾಸ್ತಿ­ಗಳನ್ನು ಮಾರಾಟ ಮಾಡಲು ಕೂಡ ಸಹಾರಾ ಸಮೂ­ಹಕ್ಕೆ ಅನುಮತಿ ನೀಡಲಾಗಿದೆ.

‘ಈ ಸ್ಥಿರಾಸ್ತಿಗಳನ್ನು ಮಾರ್ಗ­ಸೂಚಿ ದರ­ಕ್ಕಿಂತ (ಸರ್ಕಲ್ ರೇಟ್) ಕಮ್ಮಿಗೆ ಮಾರಾಟ ಮಾಡ­ಬಾರದು. ಅದೂ ಅಲ್ಲದೇ ಖರೀದಿದಾರರು ಈ ಸಮೂ­ಹಕ್ಕೆ ಸೇರಿದವರು ಅಥವಾ ಸುಬ್ರತೊ ರಾಯ್‌ ಬಂಧುಗಳಾಗಿರಬಾರದು’ ಎಂದು ಪೀಠ ತಿಳಿಸಿದೆ.

‘ಮಾರಾಟದಿಂದ  ಬಂದ ಲಾಭಾಂಶ­ವನ್ನು ಪ್ರತ್ಯೇಕ ಬ್ಯಾಂಕ್ ಖಾತೆಯಲ್ಲಿ ಠೇವಣಿ ಇಡಬೇಕು ಮತ್ತು ಇದನ್ನು ಷೇರು ಮಾರುಕಟ್ಟೆ ನಿಯಂತ್ರಕ ಸೆಬಿ ನಿರ್ವಹಿಸ­ಬೇಕು’ ಎಂದೂ ಕೋರ್ಟ್ ಹೇಳಿದೆ.

ನಿಶ್ಚಿತ ಠೇವಣಿ ಹಣ ಪಡೆಯು­ವುದಕ್ಕೆ ಹಾಗೂ  ಕರಾರುಪತ್ರಕ್ಕೆ ಸಂಬಂಧಿಸಿ ದಂತೆ ಸಹಾರಾ ಮೇಲೆ ವಿಧಿಸಿದ್ದ ನಿರ್ಬಂಧವನ್ನು ಪೀಠ ತೆರವು ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT