ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಮಿತ್ರಾ ಮಹಾಜನ್‌ ನೂತನ ಸ್ಪೀಕರ್‌?

Last Updated 4 ಜೂನ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಅನುಭವಿ ಸಂಸದೀಯಪಟು ಹಾಗೂ ಬಿಜೆಪಿ ಹಿರಿಯ ನಾಯಕಿ ಸುಮಿತ್ರಾ ಮಹಾ­ಜನ್ ಅವರು ಲೋಕಸಭೆಯ ಸಭಾಧ್ಯಕ್ಷ­ರಾ­ಗುವ (ಸ್ಪೀಕರ್‌) ಸಾಧ್ಯತೆ ಹೆಚ್ಚಾಗಿದೆ. ಈ ಬಗ್ಗೆ ಬಿಜೆಪಿ ಅಧ್ಯಕ್ಷ ರಾಜನಾಥ್‌ ಸಿಂಗ್‌ ಅವರು ಸುಮಿತ್ರಾ ಅವರಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಸುಮಿತ್ರಾ ಅವರು 1989ರಿಂದ ಮಧ್ಯಪ್ರದೇಶದ ಇಂದೋರ್‌ ಲೋಕ­ಸಭಾ ಕ್ಷೇತ್ರದಿಂದ ನಿರಂತರವಾಗಿ ಆಯ್ಕೆ­ಯಾಗುತ್ತಿದ್ದಾರೆ. ಅವರು ಸ್ಪೀಕರ್‌ ಆದರೆ ಈ ಸ್ಥಾನಕ್ಕೆ ಏರಿದ ಎರಡನೇ ಮಹಿಳೆ ಎಂಬ  ಹೆಗ್ಗಳಿಕೆಗೆ ಪಾತ್ರರಾಗ­ಲಿದ್ದಾರೆ. ಯುಪಿಎ ಸರ್ಕಾರದ ಎರಡನೇ ಅವಧಿಯಲ್ಲಿ ಮೀರಾ­ಕುಮಾರ್‌ ಸಭಾಧ್ಯಕ್ಷರಾಗಿದ್ದರು.

71 ವರ್ಷದ ಸುಮಿತ್ರಾ ಮಹಾ­ಜನ್‌ ಅವರು ಅಟಲ್ ಬಿಹಾರಿ ವಾಜ­­ಪೇಯಿ ಅವರ ಸಂಪುಟದಲ್ಲಿ ರಾಜ್ಯ ಸಚಿವರಾಗಿ ಕೆಲಸ ಮಾಡಿದ್ದರು.

ಬುಧವಾರದಿಂದ ಆರಂಭವಾಗಿರುವ 16ನೇ ಲೋಕಸಭೆಯ ಮೊದಲ ಅಧಿವೇಶನದಲ್ಲಿ ಶುಕ್ರವಾರ ಸಭಾಧ್ಯಕ್ಷರ  ಆಯ್ಕೆ ನಡೆಯಲಿದೆ. ಬಿಜೆಪಿ ಯಾವುದೇ ಕ್ಷಣದಲ್ಲಿ ಅಭ್ಯರ್ಥಿಯನ್ನು ಘೋಷಣೆ ಮಾಡಬಹುದು ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT