ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಳ್ಳು ಸದಸ್ಯತ್ವ?

Last Updated 30 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಬೆಂಗಳೂರಿನ ವಿಜಯನಗರದ ಗ್ಯಾರೇಜ್‍ ಒಂದರಲ್ಲಿ ಈಚೆಗೆ ಬೈಕ್‍ ರಿಪೇರಿ ಮಾಡಿಸುತ್ತಾ ನಿಂತಿದ್ದೆ. ಮಧ್ಯಾಹ್ನದ ಹೊತ್ತು. ನರೇಂದ್ರ ಮೋದಿ ಅವರ ಚಿತ್ರವಿರುವ ಟೋಪಿ ತೊಟ್ಟ ನಾಲ್ಕಾರು ಮಹಿಳೆಯರು ನಮ್ಮತ್ತ ಬಂದರು. ಗ್ಯಾರೇಜ್ ಸುತ್ತಮುತ್ತಲ ಮನೆಗಳ ಗೃಹಿಣಿಯರೂ ಹೊರಗಿದ್ದರು. ಟೋಪಿ ತೊಟ್ಟ ಮಹಿಳೆಯರು, ‘ನಿಮ್ಮ ಮೊಬೈಲ್‍ ಫೋನ್‌ನಿಂದ ಈ ನಂಬರ್‌ಗೆ ಕರೆ ಮಾಡಿ. ಮೋದಿ ಅವರಿಗೆ ಸಪೋರ್ಟ್ ಮಾಡಿ. ನಿಮ್ಮ ಮನೆಗೆ ಒಂದು ಕಾರ್ಡು ಬರುತ್ತದೆ’ ಎಂದು ನೆರೆದಿದ್ದವರಲ್ಲಿ ಕೇಳುತ್ತಿದ್ದರು.

‘ಅದರಿಂದ ನಮಗೇನು ಉಪಯೋಗ?’ ಎಂದು ಒಂದಿಬ್ಬರು ಕೇಳಿದರು. ‘ಆ ಕಾರ್ಡ್ ಬಂದರೆ ನಿಮಗೆ ರೇಷನ್‍ ಕಾರ್ಡ್, ಆಧಾರ್ ಕಾರ್ಡ್ ತರ ಎಲ್ಲ ಕೆಲಸಕ್ಕೂ ಉಪಯೋಗಕ್ಕೆ ಬರುತ್ತದೆ. ಬೇರೆ ಬೇರೆ ಬೆನಿಫಿಟ್ಸ್ ಸಿಗುತ್ತೆ’ ಎಂದರು. ಕೆಲವರು ಕರೆ ಮಾಡಿದರು, ಕೆಲವರು ನಿರಾಕರಿಸಿದರು.

ಒಂದೆರಡು ದಿನಗಳ ನಂತರ ನನ್ನ ಮೊಬೈಲ್‌ಗೆ ಒಂದು ಮೆಸೇಜ್ ಬಂದಿತ್ತು. ‘ನರೇಂದ್ರ ಮೋದಿ ಅವರನ್ನು ಬೆಂಬಲಿಸಲು, ಬಿಜೆಪಿ ಸದಸ್ಯರಾಗಲು ಈ ನಂಬರ್‌ಗೆ  ಮಿಸ್‌್ಡಕಾಲ್‌ ಕೊಡಿ’ ಎಂಬ ಸಂದೇಶದೊಂದಿಗೆ ಒಂದು ದೂರವಾಣಿ ಸಂಖ್ಯೆಯನ್ನು ನೀಡಲಾಗಿತ್ತು. ಮಹಿಳೆಯರು ನೀಡಿದ್ದ ಸಂಖ್ಯೆ ಮತ್ತು ಈ ಸಂಖ್ಯೆ ಒಂದೇ ಆಗಿತ್ತು.

ಬಿಜೆಪಿಯ ಕೆ.ಎಸ್‍.ಈಶ್ವರಪ್ಪ  ‘ನಮ್ಮದು 8.75 ಕೋಟಿ ಸದಸ್ಯರಿರುವ ವಿಶ್ವದ ಅತಿದೊಡ್ಡ ಪಕ್ಷ’ ಎಂದಿದ್ದಾರೆ  (ಪ್ರ.ವಾ., ಮಾರ್ಚ್ 30). ತಮಗೆ ಅರಿವಿಲ್ಲದೆಯೇ ಹೀಗೆ ಬಿಜೆಪಿಯ ಸದಸ್ಯರಾದವರು ಎಷ್ಟು ಮಂದಿಯೋ? ಜನರನ್ನು ವಂಚಿಸಿ, ಕೋಟಿ ಲೆಕ್ಕದಲ್ಲಿ ಸದಸ್ಯರನ್ನು ಕೂಡಿ ಹಾಕುವುದು ಯಾವ ಹೆಗ್ಗಳಿಕೆ ಸ್ವಾಮಿ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT