ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

"ಸುಶ್ಮಿತಾ ನನ್ನ ನೆಚ್ಚಿನ ನಟಿ'

Last Updated 2 ಮೇ 2016, 19:54 IST
ಅಕ್ಷರ ಗಾತ್ರ

‘ನಟಿ ಸುಶ್ಮಿತಾ ಸೇನ್‌ ನನ್ನ ನೆಚ್ಚಿನ ನಟಿ’ ಎಂದು ನೃತ್ಯ ಸಂಯೋಜಕಿ ಹಾಗೂ ನಿರ್ದೇಶಕಿಯಾಗಿರುವ ಫರ್‍ಹಾ ಖಾನ್‌ ಟ್ವೀಟಿಸಿದ್ದಾರೆ. 

ಫರ್‍್ಹಾ ಖಾನ್‌ ನಿರ್ದೇಶನದ ಚೊಚ್ಚಲ ಚಿತ್ರ ‘ಮೈ ಹೂ ನಾ’ 2004ರ ಮೇ 30ರಂದು ತೆರೆಕಂಡಿದ್ದು, ಈಗ 12 ವರ್ಷ ಪೂರೈಸಿದೆ. ಈ ವೇಳೆ ಚಿತ್ರದಲ್ಲಿ ಅಭಿನಯಿಸಿರುವ ಪ್ರಮುಖ ನಟ ನಟಿಯರಾದ ಶಾರುಖ್‌ ಖಾನ್‌ ಹಾಗೂ ಸುಶ್ಮಿತಾ ಅವರನ್ನು ನೆನಪಿಸಿಕೊಂಡಿದ್ದಾರೆ.

ಚಿತ್ರಕ್ಕೆ 12 ತುಂಬಿದ್ದರೂ, ಆ ಚಿತ್ರದ ನಾಯಕಿಯಾದ ಸುಶ್ಮಿತಾ ನನ್ನ ಅತ್ಯಂತ ನೆಚ್ಚಿನ ನಟಿ. ಮಿಸ್‌ ಚಾಂದಿನಿಯಾಗಿ ಕೆಮಿಸ್ಟ್ರಿ ಅಧ್ಯಾಪಕಿಯಾಗಿ ಅಭಿನಯಿಸಿರುವ ಸುಶ್ಮಿತಾ ಇಂದಿಗೂ ಹಾಟೆಸ್ಟ್‌ ಟೀಚರ್‌ ಆಗಿದ್ದಾರೆ’ ಎಂದು ಬರೆದಿದ್ದಾರೆ 51 ವರ್ಷದ ಫರ್‍್ಹಾ.

‘‘ಎಲ್ಲರಿಗೂ ಅವರ ಮೊದಲ ಪ್ರೀತಿ ತುಂಬಾ ವಿಶೇಷವಾಗಿರುತ್ತದೆ. ಹಾಗೆಯೇ ನನಗೂ ‘ಮೈ ಹೂ ನಾ’ ಚಿತ್ರ ಸದಾ ವಿಶೇಷವಾಗಿರುತ್ತದೆ’’ ಎಂದು ಟ್ವಿಟರ್‌ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. 

ಸಹಾಯಕ ನೃತ್ಯಗಾರ್ತಿಯಾಗಿ ಬಿ–ಟೌನ್‌ ಅಂಗಳಕ್ಕೆ ಕಾಲಿಟ್ಟ ಫರ್‍್ಹಾ ಖಾನ್‌  ಕೊರಿಯೊಗ್ರಾಫರ್‌ ಆಗಿ ದೊಡ್ಡ ನಟ ನಟಿಯರೊಂದಿಗೆ ಕೆಲಸ ಮಾಡಿದ್ದಾರೆ. ಜೊತೆಗೆ ನಿರ್ದೇಶಕಿಯಾಗಿ ‘ಓಂ ಶಾಂತಿ ಓಂ’, ‘ತೀಸ್‌ ಮಾರ್ ಖಾನ್‌’, ‘ಹ್ಯಾಪಿ ನ್ಯೂ ಇಯರ್‌’ ಚಿತ್ರಗಳನ್ನು ನಿರ್ದೇಶಿಸಿದ್ದಾರೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT