ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂಕ್ಷ್ಮ ಪ್ರದೇಶಗಳಲ್ಲಿ ಬದಲಾವಣೆ

ಹಸಿರು ನ್ಯಾಯಮಂಡಳಿಗೆ ಕೇಂದ್ರದ ಮಾಹಿತಿ
Last Updated 22 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಪಶ್ಚಿಮಘಟ್ಟದ ವ್ಯಾಪ್ತಿಯ ರಾಜ್ಯ ಸರ್ಕಾರಗಳು ಸಮೀ­ಕ್ಷೆಯ ಬಳಿಕ  ಅಲ್ಲಿನ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ (ಇಎಸ್‌ಎ)­ಕೆಲವೊಂದು ಪ್ರದೇಶಗಳನ್ನು  ಸೇರಿಸುವ ಅಥವಾ ಕೈಬಿ­ಡುವ ಪ್ರಸ್ತಾವ ಮುಂದಿ­ಡುವ ಸಾಧ್ಯತೆ ಇದೆ ಎಂದು ಪರಿಸರ ಹಾಗೂ ಅರಣ್ಯ ಖಾತೆ ಸಚಿವಾಲಯವು ಹಸಿರು ನ್ಯಾಯಮಂಡಳಿಗೆ ಸೋಮವಾರ ಮಾಹಿತಿ ನೀಡಿದೆ.

‘ಯಾವುದೇ ಕ್ರಮ ತೆಗೆದುಕೊಳ್ಳುವ ಮುಂಚೆ ಈ ಪ್ರಸ್ತಾವಗಳನ್ನು ಪರಿ­ಶೀಲಿ­ಸ­­ಲಾಗುತ್ತದೆ’ ಎಂದು ಹಸಿರು ನ್ಯಾಯ­ಮಂಡಳಿ ಅಧ್ಯಕ್ಷ ನ್ಯಾ.ಸ್ವತಂತ್ರ ಕುಮಾರ್‌್ ನೇತೃತ್ವದ ಪೀಠದ ಮುಂದೆ ಸಚಿ­ವಾಲ­ಯದ  ಕಾರ್ಯದರ್ಶಿ ಅಶೋಕ್‌್ ಲವಸಾ ಸಲ್ಲಿಸಿದ್ದ ಪ್ರಮಾಣ­ಪತ್ರ-­ದಲ್ಲಿ ಹೇಳಲಾಗಿದೆ.

ಹಿಂದಿನ ವಿಚಾರಣೆಯ ಸಂದರ್ಭ­ದಲ್ಲಿ ಪರಿಸರ ಸಚಿವಾಲಯ ಪಶ್ಚಿಮ­ಘಟ್ಟ­ಗಳಲ್ಲಿ ಅಭಿವೃದ್ಧಿ ಚಟುವಟಿಕೆ­ಗಳಿಗೆ ಸಂಬಂಧಿಸಿ ಮಾಧವ್‌ ಗಾಡ್ಗೀಳ್‌ ವರದಿ ಕೈಬಿಡುವುದಾಗಿ ತಿಳಿಸಿತ್ತು. ಕಸ್ತೂರಿ ರಂಗನ್‌ ವರದಿ ಬಗ್ಗೆಯೂ ಕೆಲವು ಅನು­ಮಾನಗಳು ಇವೆ. ಪಶ್ಚಿಮ­ಘಟ್ಟಗಳಲ್ಲಿ ಪರಿಸರ ಸೂಕ್ಷ್ಮ ಪ್ರದೇಶ­ಗಳನ್ನು ಗುರುತಿ­ಸಲು ಸಮೀಕ್ಷೆ ನಡೆಸುವ ಉದ್ದೇಶವಿದೆ ಎಂದು ಹೇಳಿತ್ತು.

ಸೂಕ್ಷ್ಮವಲಯದ ರಕ್ಷಣಾ ವಿಷ­ಯದ ತನ್ನ ನಿಲುವು ಬದ­ಲಾ­ಯಿಸಿ­ದ್ದ­ಕ್ಕಾಗಿ   ಸಚಿವಾಲ­ಯ­ವನ್ನು ಸುಪ್ರೀಂಕೋರ್ಟ್‌್ ತೀವ್ರ ತರಾಟೆಗೆ ತೆಗೆದುಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT