ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂರ್ಯ ನಡಿಗೆ ಆರೋಗ್ಯದ ಕಡೆಗೆ

Last Updated 26 ಮೇ 2015, 19:30 IST
ಅಕ್ಷರ ಗಾತ್ರ

ಮೂಳೆ ಕಾಯಿಲೆಗಳಾದ ರಿಕೆಟ್ಸ್‌್, ಸವಕಳಿ, ಅಶಕ್ತತೆ ನಿವಾರಣೆಗೆ ಮುಂಜಾನೆಯ ಹೂಬಿಸಿಲಿನ ನಡಿಗೆ  ಪರಿಣಾಮಕಾರಿ ವ್ಯಾಯಾಮ. ಸೂರ್ಯನೊಂದಿಗೆ ಏಳುವ ರೂಢಿ ಪ್ರಾಥಃಕಾಲದ ಶಾರೀರಿಕ  ನಿತ್ರಾಣ ತೊಲಗಿಸಿ ಬದುಕನ್ನು ಗೆಲುವಾಗಿಸುತ್ತದೆ. ’ಎ’ ಮತ್ತು ’ಡಿ’ ಜೀವಸತ್ವಗಳು ಸೂರ್ಯನಿಂದ ಲಭಿಸಿ, ಕೆಂಪು ಮತ್ತು ಬಿಳಿ ರಕ್ತ ಕಣಗಳ ಉತ್ಪತ್ತಿಯನ್ನು ಹೆಚ್ಚಿಸುವುದರೊಂದಿಗೆ ಸಕ್ಕರೆ ಕಾಯಿಲೆಯನ್ನು ಹತೋಟಿಯಲ್ಲಿಡುತ್ತದೆ. ರಾತ್ರಿ ಉತ್ತಮ ನಿದ್ದೆ ಬರಲು ಸಹಕರಿಸುವ ಮೇಲೆಟೋನಿನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ.  ಜೀರ್ಣಕ್ರಿಯೆ ಉತ್ತಮವಾಗುತ್ತದೆ. ಹಸಿವನ್ನು ಹೆಚ್ಚಿಸುತ್ತದೆ.

ಸ್ನಾನಕ್ಕೂ ಮುಂಚೆ ದೇಹಕ್ಕೆ ಕೊಬ್ಬರಿ ಎಣ್ಣೆ ಲೇಪಿಸಿಕೊಂಡು ಮುಂಜಾನೆಯ ಎಳೆಬಿಸಿನಲ್ಲಿ ಕಾಯಿಸಿದರೆ ಚರ್ಮ ದ್ರವಾಂಶ ಹೀರಿ ಕಾಂತಿಯುಕ್ತವಾಗುವುದು. ಹೊಂಬಿಸಿಲಿನ ಕಿರಣಗಳಡಿಯಲ್ಲಿನ ವ್ಯಾಯಾಮ ಎತ್ತರಕ್ಕನುಗುಣವಾದ ಶಾರಿರೀಕ ತೂಕವನ್ನು ಹೊಂದಲು ಸಹಕರಿಸುವದು. ಶರೀರದಲ್ಲಿನ ಅನುಪಯುಕ್ತ   ವಸ್ತುಗಳನ್ನು ಹೊರಹಾಕುತ್ತದೆ, ಲಿವರ್ ಸಮರ್ಪಕಾಗಿ ಕಾರ್ಯನಿರ್ವಹಿಸುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT