ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೃಜನ್ ಸೈಲೆಂಟ್ ಮಾತು

Last Updated 4 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಟೀವಿ ಪ್ರೇಕ್ಷಕರಿಗೆ ಸೃಜ ಎಂದೇ ಪರಿಚಿತರು ಸೃಜನ್ ಲೋಕೇಶ್. ಒಂದಷ್ಟು ಸಿನಿಮಾಗಳಲ್ಲೂ ನಟಿಸಿ, ರಿಯಾಲಿಟಿ ಷೋಗಳ ಮೂಲಕ ಮನೆಮಾತಾದ ಸೃಜನ್, ‘ಬಿಗ್ ಬಾಸ್’ ಮನೆಯಲ್ಲೂ ದೀರ್ಘಾವಧಿ ಉಳಿದು ಬಂದವರು. ‘ಟಿಪಿಕಲ್ ಕೈಲಾಸ’ನಾಗಿ ನಗಿಸಿದ್ದ ಅವರ ‘ಸಪ್ನೋಂ ಕಿ ರಾಣಿ’ ಚಿತ್ರ ಸದ್ಯ ತೆರೆಗೆ ಬರಲು ಸಿದ್ಧವಾಗುತ್ತಿದೆ. ತೆರೆ ಮೇಲೆ ನಗಿಸುವ, ನಿಜ ಜೀವನದಲ್ಲಿ ಸಖತ್ ಸೈಲೆಂಟ್ ಆಗಿರುವ ಅವರು ಒಂದಷ್ಟು ಮಾತಾಡಿದ್ದಾರೆ ನೋಡಿ...

*‘ಮಜ ವಿಥ್ ಸೃಜ’, ‘ಮಜಾ ಟಾಕೀಸ್’ ಆಯ್ತು. ಇನ್ನೂ ಏನೇನು ‘ಮಜ’ ಕಾದಿದೆ?
‘ಮಜ’ ಅನ್ನೋ ಶಬ್ದದಿಂದ ಏನ್ ಬೇಕಾದ್ರೂ ಬರಬಹುದು. ಮಜದಿಂದ ಸಜಾ ಕೂಡ ಬರಬಹುದು. ಆದರೆ ನನ್ನಿಂದ ಮಜ ಸಿಕ್ಕುತ್ತಾ ಅನ್ನೋದೇ ನನಗೆ ಮುಖ್ಯ. ನನ್ನಲ್ಲಿ ಖುಷಿ ಇದ್ರೆ ಮಾತ್ರ ಅದನ್ನು ಹಂಚೋಕೆ ಸಾಧ್ಯ. ನಮ್ಮವರ ಜೊತೆ ತರ್ಲೆ ಮಾಡಿಕೊಂಡು ಯಾವತ್ತೂ ಖುಷಿ ಖುಷಿಯಾಗಿ, ಮಜದಿಂದಲೇ ಇರ್ತೀನಿ. ಅದರಿಂದಲೇ ಷೋಗಲ್ಲಿ ನಗೆ ಉಕ್ಕುವುದು.

*ನಿಮ್ಮಲ್ಲೊಬ್ಬ ‘ಆಶು ಕವಿ’ ಇದ್ದನಂತೆ?
ಇದು ತುಂಬ ಹಳೆಯ ವಿಚಾರ. ದಾರೀಲಿ ಹೋಗೋವಾಗ ಯಾವುದಾದ್ರೂ ಶಬ್ದ ಕಂಡರೆ ಅದರ ಮೇಲೆ ಕವಿತೆ ಕಟ್ಟುತ್ತಿದ್ದೆ. ಆದರೆ ಈಗ ಅದು ಸಾಧ್ಯವೇ ಇಲ್ಲ. ಆಗ ಬೇಕಷ್ಟು ಸಮಯ ಇರ್ತಿತ್ತು. ಯೋಚಿಸೋಕೆ ಏನೂ ಇರ್ತಿರ್ಲಿಲ್ಲ. ಈಗ ಟೈಮ್ ಕಡಿಮೆ ಇದೆ. ಯೋಚಿಸೋಕೆ ಸಾಕಷ್ಟು ವಿಚಾರಗಳಿವೆ.

*ತೆರೆ ಹಿಂದೆ ಸೃಜ ಸೈಲೆಂಟ್ ಅಂತೆ?
ಹೌದು. ತುಂಬಾ ಜನ ಕೇಳ್ತಾರೆ, ಟೀವಿಲಿ ಅಷ್ಟೊಂದು ನಗಿಸೋರು ಯಾಕೆ ಮಾತೇ ಆಡಲ್ಲ ಅಂತ. ಅಲ್ಲಿ ಹಣ ಕೊಡ್ತಾರೆ, ನೀವು

ಸ್ಕೂಲಲ್ಲಿನ ಹವಾ
ಹೈಸ್ಕೂಲಲ್ಲಿ ಇರೋವಾಗಲೇ ರೌಡಿಸಂ ಎಲ್ಲ ಇತ್ತು. ಒಮ್ಮೆ ಎರಡು ಗುಂಪಿನ ಮಧ್ಯೆ ಜಗಳವಾಗೋ ಸಂದರ್ಭವಿದ್ದಾಗ ಸ್ನೇಹಿತರೆಲ್ಲ ಸೇರಿ ನನ್ನನ್ನು ಮುಂದೆ ಬಿಟ್ಟು, ನೀನೇನು ಹೆದರಿಕೋಬೇಡ ಮಗ, ನಾವಿದೀವಿ. ನೀನ್ ಹೋಗು ಅಂತ ಬೆನ್ನು ತಟ್ಟಿದ್ರು. ನಾನ್ಯಾಕೆ ಇಲ್ಲಿದೀನಿ, ಯಾಕೆ ಮಧ್ಯೆ ಸಿಕ್ಕಿದ್ದೀನಿ ಅನ್ನೋದೇ ನನಗೆ ತೊಚುತ್ತಿಲ್ಲ. ಮುಂದೆ ಹೋಗಿ ತಿರುಗಿ ನೋಡಿದ್ರೆ ಹಿಂದಿದ್ದವರ್‍ಯಾರೂ ಇಲ್ಲ. ಎಲ್ಲ ಕಾಲಿಗೆ ಬುದ್ಧಿ ಹೇಳಿದ್ರು. ಆ ಕಡೆ ನೋಡಿದ್ರೆ ಎದುರು ಪಾರ್ಟಿಯವರು, ‘ಏ ಇವ್ನಲ್ಲ, ಈತ ಪಾಪದೋನು, ಸುಮ್ನೆ ಬಿಟ್ ಬಿಡಿ’ ಅಂದ್ರು. ಅದು ಪಕ್ಕಾ ಡ್ರಮಾಟಿಕ್ ಪ್ರಸಂಗ. ಒಂದು ವೇಳೆ ಹೊಡೆದೇ ಬಿಟ್ಟಿದ್ರೆ!

ಕೊಡಲ್ವಲ್ಲ ಅಂತೀನಿ.

*ಸೃಜನ್ ಮಾತು ಕೇಳಬೇಕಾದ್ರೆ ಹಣ ಕೊಡ್ಬೇಕು ಅಂತೀರಿ...
ಹಾಗಲ್ಲ. ವಿಷಯ ಇಷ್ಟೇ, ಷೋಗಳಲ್ಲಿ ಮಾತಾಡೋಕೆ ಏನಾದರೊಂದು ವಿಚಾರವಿರುತ್ತೆ. ಹೊರಗಡೆ ಸಿಕ್ಕಾಗ ಅಂಥದ್ದೇನೂ ಇರಲ್ಲ. ಮಾತು ತುಂಬ ಮಹತ್ವವಾದದ್ದು. ವೇಸ್ಟ್ ಮಾಡಬಾರದು ಅನ್ನೋದು ನನ್ನ ನಂಬಿಕೆ. ಸುಮ್ನೆ ನಗಿಸು ಅಂದ್ರೆ ಹೇಗಾಗತ್ತೆ. ಸಿಗ್ನಲ್‌ಗಳಲ್ಲಿ ಯಾರೋ ಹಲೋ ಅಂತಾರೆ. ನಾನೂ ಹಲೋ ಅಂತೀನಿ. ಏನ್ ಸಾರ್, ಮಾತೇ ಆಡಲ್ಲ ಅಂತಾರೆ. ಅದಕ್ಕೆ ನಾನು ಮನೇಲಿ ಸ್ನಾನ ಮಾಡ್ತೀನಿ, ಇಲ್ಲೂ ಮಾಡಕ್ಕಾಗತ್ತಾ ಅಂತೀನಿ.

*‘ಕೈಲಾಸ’ನಾಗಿ ಕಾರಣವಿಲ್ಲದೇ ಹೊಡೆಸ್ಕೊಂಡ್ರಿ. ಜೀವನದಲ್ಲಿ?
ಜೀವನದಲ್ಲೂ ಹಾಗೇನೇ. ಆದರೆ ಯಾರೂ ಕೆನ್ನೆಗೆ ಹೊಡೀಲಿಲ್ಲ. ಸಂದರ್ಭಗಳು ಆಗಾಗ ಹೇಳದೇ ಕೇಳದೇ ಪೆಟ್ಟು ಕೊಡುತ್ತಿರುತ್ತವೆ.

*ಸ್ವಪ್ನದಲ್ಲಿ ರಾಣಿಯರು ಬರ್ತಿರ್ತಾರಾ?
ಮೊದಲು ತುಂಬಾ ಜನ ರಾಣಿಯರು, ಯುವ ರಾಣಿಯರೆಲ್ಲ ಬರ್ತಿದ್ರು. ಮದುವೆ ಆದ ನಂತರ ಅವೆಲ್ಲ ನಿಂತೇ ಹೋಗಿದೆ.

*ಸಿಕ್ಕಾಪಟ್ಟೆ ಪ್ರಾಮಾಣಿಕರಾಗಿದ್ದೀರಿ ಅಂತಾಯ್ತು?
ಪ್ರಾಮಾಣಿಕತೆ ಇದ್ದೇ ಇದೆ. ಒಂದು ವೇಳೆ ಈಗ್ಲೂ ಬಂದ್ರೆ ಹೆಂಡ್ತಿಗೇನೂ ಗೊತ್ತಾಗಲ್ಲ. ಆದರೆ ನಮಗೆ ಗೊತ್ತಾಗುತ್ತಲ್ಲ. ಅದಕ್ಕೇ ಬೇಡ ಅಂತ. ಹಂಗೂ ನಾನು ಕನಸಲ್ಲಿ ಯಾರನ್ನಾದ್ರೂ ಇಮ್ಯಾಜಿನ್ ಮಾಡ್ಕೊಂಡ್ರೆ, ಅದು ನನ್ ಹೆಂಡ್ತಿಗೆ ಗೊತ್ತಾದ್ರೆ ಅದರ ಪರಿಣಾಮ ಮಾತ್ರ ನಾನೂ ಇಮ್ಯಾಜಿನ್ ಮಾಡ್ಕೊಳ್ಳೋಕೆ ಆಗಲ್ಲ.

*ನಿಮಗೆ ಸಿ.ಎ ಮಾಡೋ ಆಸೆ ಇತ್ತಲ್ಲ.
ಸಿ.ಎ ಅಷ್ಟೇ ಅಲ್ಲ, ಸಿ.ಎಂ ಕೂಡ ಆಗೋ ಆಸೆ ಇದೆ. ಆಗಲ್ವಲ್ಲ. ಸಿ.ಎ ಮಾಡೋಕೆ ಟ್ರೈ ಮಾಡಿದ್ದೆ. ಕಾಲೇಜಲ್ಲಿ ನಾನು ತುಂಬ ಸೀರಿಯಸ್ ವಿದ್ಯಾರ್ಥಿ. ಆದರೆ ನನ್ನ ಪಕ್ಕ ಕೂತು ನನ್ನ ನೋಡಿ ಕಾಪಿ ಹೊಡೆದೋನು ಪರೀಕ್ಷೆಯಲ್ಲಿ ಪಾಸಾದ. ನಾನು ಫೇಲಾದೆ. ಆಮೇಲೆ, ಇದು ಆಗೋ ಕೆಲಸ ಅಲ್ಲ. ನನಗೆ ಎಷ್ಟು ಬೇಕೋ ಅಷ್ಟು ಓದ್ಕೊಂಡಿದ್ರೆ ಸಾಕು ಅಂತ ಆಗ್ಲೇ ನಿರ್ಧಾರ ಮಾಡ್ಕೊಂಡೆ.

*‘ಬಿಗ್ ಬಾಸ್’ ನಿಮ್ಮ ಜೀವನದಲ್ಲಿ ಎಂಥ ಪಾತ್ರ ವಹಿಸಿತು?
‘ಬಿಗ್ ಬಾಸ್’ನಿಂದ ಲೈಫ್ ಬದಲಾಗೋಯ್ತು ಅನ್ನೋದೆಲ್ಲ ಶುದ್ಧ ಸುಳ್ಳು. ಅದೂ ಒಂದು ಮನೆ. ಮನೆಯಲ್ಲಿ ಇದ್ದಂತೆಯೇ ಅಲ್ಲೂ ಇರ್ತೀವಿ. ಅಲ್ಲಿ ಕ್ಯಾಮೆರಾಗಳು ನಮ್ಮನ್ನು ನೋಡುತ್ತಿರುತ್ತವೆ ಅನ್ನೋ ಪ್ರಜ್ಞೆ ಇರುತ್ತೆ ಅಷ್ಟೇ. ವರ್ತನೆ ಚೆನ್ನಾಗಿದ್ರೆ ಅಲ್ಲಿ ಉಳಿದುಕೊಳ್ತೀವಿ, ಇಲ್ಲದಿದ್ರೆ ಆಚೆ ಬರ್ತೀವಿ. ಅಲ್ಲಿ ಹೋಗಿ ಬೇರೆ ಮನುಷ್ಯ ಆಗ್ಬಿಟ್ಟೆ ಅನ್ನೋವಂಥದ್ದು ಏನೂ ಇಲ್ಲ. ಹಾಗೆ ಅಂತಾದ್ರೆ ಎಲ್ಲರನ್ನೂ ಆ ಮನೆಯಲ್ಲಿ ಹಾಕಿಬಿಟ್ರೆ ಬದಲಾಗಿಬಿಡ್ತಾರಾ? ವರ್ತನೆಗಿಂತ ವ್ಯಕ್ತಿತ್ವವಷ್ಟೇ ಮುಖ್ಯ.

*ನಿಮಗೆ ಖುಷಿಯಾಗುವ ಮತ್ತು ಇರಿಟೇಟ್ ಆಗುವ ವಿಚಾರಗಳೇನು?
ಅಡುಗೆ ಮಾಡೋದು ಮತ್ತು ನಿದ್ದೆ ಮಾಡೋದು ನನ್ನ ತುಂಬ ಇಷ್ಟದ ವಿಚಾರಗಳು. ಆದರೆ ನನ್ನ ಬಟ್ಟೆಗಳನ್ನು ನಾನೇ ಒಗೆದುಕೊಳ್ಳುವುದರಷ್ಟು ಬೇಸರ ಇನ್ನೊಂದಿಲ್ಲ. ಶಾಪಿಂಗ್ ಮಾಡೋದೂ ನನಗೆ ಆಗಿಬರುವುದಿಲ್ಲ. ಮದುವೆಯಾದ ಐದು ವರ್ಷಗಳಲ್ಲಿ ನಾನು ಶಾಪಿಂಗ್ ಹೋಗಿರೋದು ತುಂಬ ಕಡಿಮೆ. ಹೆಂಡತಿಯೇ ನನಗೆ ಬಟ್ಟೆ ತರೋದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT