ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಪ್ಟೆಂಬರ್‌ನಲ್ಲಿ ಪರೀಕ್ಷಾರ್ಥ ಸಂಚಾರ

ನಮ್ಮ ಮೆಟ್ರೊ: ಪೀಣ್ಯ ಇಂಡಸ್ಟ್ರಿ– ನಾಗಸಂದ್ರ ಮಾರ್ಗ
Last Updated 31 ಜುಲೈ 2014, 20:09 IST
ಅಕ್ಷರ ಗಾತ್ರ

ಬೆಂಗಳೂರು: ಪೀಣ್ಯ ಇಂಡಸ್ಟ್ರಿ ನಿಲ್ದಾಣ­ದಿಂದ  ನಾಗಸಂದ್ರದವರೆಗಿನ (ಹೆಸರ­ಘಟ್ಟ ಕ್ರಾಸ್‌) 2.5 ಕಿ.ಮೀ ಉದ್ದದ ‘ನಮ್ಮ ಮೆಟ್ರೊ’ದ ಮಾರ್ಗದಲ್ಲಿ ಸೆಪ್ಟೆಂ­ಬರ್‌ ಮೂರನೇ ವಾರದ ವೇಳೆಗೆ ಪರೀ­ಕ್ಷಾ­ರ್ಥ ಸಂಚಾರ ಪ್ರಾರಂಭ­ವಾ­ಗುವ ಸಾಧ್ಯತೆ ಇದೆ.

ಈ ಮಾರ್ಗದಲ್ಲಿ ವರ್ಷಾಂತ್ಯಕ್ಕೆ ಸಾರ್ವ­­­­ಜನಿಕ ಸಂಚಾರ ಆರಂಭ­ವಾಗ­ಲಿದೆ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮವು ಈಗಾಗಲೇ ಘೋಷಿ­ಸಿದೆ.

10 ಕಿ.ಮೀ ಉದ್ದದ ಸಂಪಿಗೆ ರಸ್ತೆ– ಪೀಣ್ಯ ಇಂಡಸ್ಟ್ರಿ ಮಾರ್ಗದಲ್ಲಿ ಕಳೆದ ಐದು ತಿಂಗಳುಗಳಿಂದ ಮೆಟ್ರೊ ರೈಲಿನ ಸಂಚಾರ ಯಶಸ್ವಿಯಾಗಿ ಸಾಗಿದೆ.

ಪೀಣ್ಯ ಇಂಡಸ್ಟ್ರಿಯಿಂದ ನಾಗಸಂದ್ರ­ದ­ವ­ರೆಗೆ ಹಳಿ ಅಳವಡಿಕೆ ಕಾರ್ಯ ಭರ­ದಿಂದ ಸಾಗಿದ್ದು, ಆಗಸ್ಟ್‌ ಅಂತ್ಯಕ್ಕೆ ಪೂರ್ಣ­ಗೊಳ್ಳುವ ನಿರೀಕ್ಷೆ ಇದೆ.

ಜಾಲಹಳ್ಳಿ, ದಾಸರಹಳ್ಳಿ ಮತ್ತು ನಾಗಸಂದ್ರ ನಿಲ್ದಾಣಗಳ ನಿರ್ಮಾಣ ಕಾರ್ಯವೂ ಅಂತಿಮ ಹಂತದಲ್ಲಿದೆ.
ಸೆಪ್ಟೆಂಬರ್‌ ಮೂರನೇ ವಾರದಿಂದ ನವೆಂಬರ್‌ ಕೊನೆ ವಾರದವರೆಗೆ ಪರೀ­ಕ್ಷಾರ್ಥ ಸಂಚಾರ ನಡೆಸಿ, ಡಿಸೆಂಬರ್‌­ನಲ್ಲಿ ಸಾರ್ವಜನಿಕ ಸಂಚಾರ ಪ್ರಾರಂಭಿ­ಸುವ ಗುರಿಯನ್ನು ನಿಗಮವು ಇರಿಸಿ­ಕೊಂಡಿದೆ.

ದಾಸರಹಳ್ಳಿ ಭಾಗದಲ್ಲಿ ಭೂಸ್ವಾ­ಧೀನ ಕಾರ್ಯ ತಡವಾಗಿದ್ದರಿಂದ ಈ ಮಾರ್ಗದ ನಿರ್ಮಾಣ ಕಾರ್ಯದಲ್ಲಿ ವಿಳಂಬ­ವಾಗಿದೆ ಎಂದು ನಿಗಮದ ಅಧಿಕಾರಿಯೊಬ್ಬರು ತಿಳಿಸಿದರು.

ಮೆಟ್ರೊದ ಮೊದಲ ಹಂತದಲ್ಲಿ ಒಟ್ಟು 42.2 ಕಿ.ಮೀ ಉದ್ದದ ಮೆಟ್ರೊ ಮಾರ್ಗವನ್ನು ನಿರ್ಮಿಸಲಾಗುತ್ತಿದೆ.
ಬೈಯಪ್ಪನಹಳ್ಳಿ– ಎಂ.ಜಿ.­ರಸ್ತೆ­ವರೆಗಿನ 6.7 ಕಿ.ಮೀ. ಉದ್ದದ ಮಾರ್ಗ­ದಲ್ಲಿ 2011ರ ಅಕ್ಟೋಬರ್‌ನಲ್ಲಿ ರೈಲು ಸಂಚಾರ ಆರಂಭವಾಯಿತು.

ಎಂ.ಜಿ.ರಸ್ತೆಯಿಂದ ಮೈಸೂರು ರಸ್ತೆಯ ನಾಯಂಡಹಳ್ಳಿ ಜಂಕ್ಷನ್‌­ವರೆಗಿನ ಮಾರ್ಗದಲ್ಲಿ 2015ರ ಏಪ್ರಿಲ್‌ ವೇಳೆಗೆ ರೈಲು ಓಡಿಸುವ ಗುರಿ ಇಟ್ಟುಕೊಳ್ಳಲಾಗಿದೆ.

ಸಂಪಿಗೆರಸ್ತೆಯಿಂದ ಜೆಪಿ ನಗರದ ಪುಟ್ಟೇನ­ಹಳ್ಳಿ ಕ್ರಾಸ್‌ವರೆಗೆ 2015ರ ಸೆಪ್ಟೆಂಬರ್‌ನಲ್ಲಿ ಮೆಟ್ರೊ ಸಂಚಾರ ಆರಂಭವಾಗುವ ಸಾಧ್ಯತೆ ಇದೆ.

ಎರಡನೇ ಹಂತದಲ್ಲಿ 72.10 ಕಿ.ಮೀ ಉದ್ದದ ಮೆಟ್ರೊ ಮಾರ್ಗ ನಿರ್ಮಾಣಗೊಳ್ಳಲಿದೆ. ಇದರ ವಿವಿಧ ಮಾರ್ಗಗಳ ಕಾಮಗಾರಿಗಳಿಗೆ  ಟೆಂಡರ್‌ ಕರೆಯಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT