ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಮಿಯಲ್ಲಿ ಫೆಡರರ್‌–ಮರ್ರೆ ಹಣಾಹಣಿ

ವಿಂಬಲ್ಡನ್‌ ಟೆನಿಸ್‌ ಟೂರ್ನಿ: ಇಂದು ಮರಿಯಾ ಶರಪೋವಾ–ಸೆರೆನಾ ವಿಲಿಯಮ್ಸ್‌ ಹಣಾಹಣಿ
Last Updated 8 ಜುಲೈ 2015, 19:30 IST
ಅಕ್ಷರ ಗಾತ್ರ

ಲಂಡನ್ (ರಾಯಿಟರ್ಸ್):  ಶುಕ್ರವಾರ ಆಲ್‌ಇಂಗ್ಲೆಂಡ್‌ ಕ್ಲಬ್‌ನಲ್ಲಿ ವಿಂಬಲ್ಡನ್‌ ವೀಕ್ಷಿಸಲು ಹೋಗುವ ಟೆನಿಸ್‌ ಪ್ರೇಮಿಗಳಿಗೆ ಭರ್ಜರಿ ರಸದೌತಣ ಕಾದಿದೆ. ಏಕೆಂದರೆ,  ಟೆನಿಸ್‌ನ ಇಬ್ಬರು ಘಟಾನುಘಟಿಗಳ ನಡುವಣ ಸೆಮಿಫೈನಲ್‌ ಹಣಾಹಣಿ ನಡೆಯಲಿದೆ.

ಏಳು ಬಾರಿ ವಿಂಬಲ್ಡನ್ ಪ್ರಶಸ್ತಿ ಗೆದ್ದಿರುವ ಸ್ವಿಟ್ಜರ್‌ಲೆಂಡ್‌ನ ರೋಜರ್ ಫೆಡರರ್ ಮತ್ತು 2013ರ ವಿಂಬಲ್ಡನ್  ಚಾಂಪಿಯನ್  ಬ್ರಿಟನ್‌ನ  ಆ್ಯಂಡಿ ಮರ್ರೆ ಮುಖಾಮುಖಿಯಾಗಲಿದ್ದಾರೆ.

ಬುಧವಾರ ನಡೆದ ಎಂಟರ ಘಟ್ಟದ ಪಂದ್ಯದಲ್ಲಿ ರೋಜರ್ ಫೆಡರರ್ 6–3, 7–5, 6–2 ರಿಂದ ಫ್ರಾನ್ಸ್‌ನ ಗಿಲ್ಲೆಸ್‌ ಸಿಮೊನ್‌್ ವಿರುದ್ಧ ಜಯ ಗಳಿಸಿದರು.

ಫೆಡರರ್  ವಿಂಬಲ್ಡನ್‌ನಲ್ಲಿ ಹತ್ತನೇ ಬಾರಿ ಸೆಮಿ ಹಂತಕ್ಕೆ ಲಗ್ಗೆ ಇಟ್ಟರು.   1 ತಾಸು, 34 ನಿಮಿಷಗಳ ಅವಧಿಯ ಪಂದ್ಯದಲ್ಲಿ ಫೆಡರರ್  12ನೇ ಶ್ರೇಯಾಂಕದ ಸಿಮೊನ್‌ ಅವರನ್ನು ಮಣಿಸಿದರು.

ಮಳೆ ಅಡ್ಡಿಪಡಿಸಿದ್ದ ಪಂದ್ಯದ ಮೊದಲ ಸೆಟ್‌ನಲ್ಲಿ ಸ್ವಲ್ಪ ಪ್ರತಿರೋಧ ಒಡ್ಡಿದ ಸೈಮನ್ ಅವರನ್ನು ಫೆಡರರ್ ಸೋಲಿಸಿದರು. ಉತ್ತಮ ರಿಟರ್ನ್‌ಗಳಿಗೆ  ಹೆಸರಾದ ಸೈಮನ್ ಎರಡನೇ ಸೆಟ್‌ನಲ್ಲಿ ತೀವ್ರ ಪ್ರತಿಸ್ಪರ್ಧೆ ಒಡ್ಡಿದರು. 

ಇದರಿಂದಾಗಿ ಫೆಡರರ್ 7–5ರಿಂದ ಸೆಟ್‌ ಗೆದ್ದರು. ಕೊನೆಯ ಸೆಟ್‌ನಲ್ಲಿ ಎದುರಾಳಿಗೆ ಹೆಚ್ಚಿನ ಅವಕಾಶ ಕೊಡದ ರೋಜರ್ 6–2ರಿಂದ ಗೆದ್ದು ಸೆಮಿಗೆ ಲಗ್ಗೆ ಹಾಕಿದರು.

ಮರ್ರೆ ವಿಜಯ: ಇನ್ನೊಂದು ಕ್ವಾರ್ಟರ್‌ಫೈನಲ್‌ನಲ್ಲಿ ಆ್ಯಂಡಿ ಮರ್ರೆ 6–4, 7–5, 6–4ರಿಂದ ಕೆನಡಾದ ಶ್ರೇಯಾಂಕರಹಿತ ಆಟಗಾರ ವಾಸೆಕ್ ಪಾಸ್ಪಿಸಿಲ್ ಅವರನ್ನು ಮಣಿಸಿದರು.

ಮೋಡ ಮುಸುಕಿದ ವಾತಾವರಣದಲ್ಲಿ ನಡೆದ ಪಂದ್ಯದಲ್ಲಿ ಮೂರನೇ ಶ್ರೇಯಾಂಕದ ಆಟಗಾರ ಮರ್ರೆ ಯ ಫೋರ್‌ಹ್ಯಾಂಡ್ ಮತ್ತು ಶಕ್ತಿಯುತ ಸರ್ವ್‌ಗಳ ಮುಂದೆ ಎದುರಾಳಿ ನಿರುತ್ತರರಾದರು.

ಪ್ರೇಕ್ಷಕರು ಕಿಕ್ಕಿರಿದು ಸೇರಿದ್ದ  ಸೆಂಟರ್‌ಕೋರ್ಟ್‌ನಲ್ಲಿ ನಡೆದ ಪಂದ್ಯದಲ್ಲಿ  ಮರ್ರೆ ಆಕರ್ಷಕ ರ್‌್ಯಾಲಿಗಳನ್ನು ಆಡಿದರು.    ಮೊದಲ ಸೆಟ್‌ ಅನ್ನು ಸುಲಭವಾಗಿ  ಗೆದ್ದ ಮರ್ರೆ ಎರಡನೇ ಸೆಟ್‌ನಲ್ಲಿ 4–3ರ ಮುನ್ನಡೆ ಸಾಧಿಸಿದ್ದಾಗ ಮಳೆ ಆರಂಭವಾಯಿತು.   ಪಂದ್ಯ ಮರಳಿ ಆರಂಭವಾದಾಗ ಸರ್ವೀಸ್ ಬ್ರೇಕ್ ಮಾಡಿದ ಫ್ರೆಂಚ್ ಆಟಗಾರ 5–5ರ ಸಮಬಲ ಸಾಧಿಸಿದರು.

ಆದರೆ, ತಿರುಗೇಟು ನೀಡಿದ ಮರ್ರೆ ಸೆಟ್‌ನಲ್ಲಿ 7–5ರಿಂದ ಜಯಗಳಿಸಿದರು. ಮೂರನೇ ಸೆಟ್‌ನಲ್ಲಿ ಎದುರಾಳಿಗೆ ಹೆಚ್ಚು ಅವಕಾಶ ಕೊಡದೇ ಗೆಲುವು ಸಾಧಿಸಿದರು.

ರಾಜಕುಮಾರ ವೀಕ್ಷಣೆ: ಆ್ಯಂಡಿ ಮರ್ರೆ ಮತ್ತು ವಸೇಕ್ ಅವರ ಪಂದ್ಯವನ್ನು ವೀಕ್ಷಿಸಲು ಬ್ರಿಟನ್‌ ರಾಜಕುಮಾರ ವಿಲಿಯಮ್ಸ್‌ ಮತ್ತು ಫುಟ್‌ಬಾಲ್ ಆಟಗಾರ ಡೇವಿಡ್ ಬೆಕಮ್ ಬಂದಿದ್ದರು. ಸೆಂಟರ್‌ಕೋರ್ಟ್‌ನ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತು ಅವರು ಪಂದ್ಯ ವೀಕ್ಷಿಸಿದರು.

ಸೆರೆನಾ–ಶರಪೋವಾ ಸೆಮಿ ಇಂದು: ಅಮೆರಿಕದ ಸೆರೆನಾ ವಿಲಿಯಮ್ಸ್ ಮತ್ತು ಮರಿಯಾ ಶರಪೋವಾ ಅವರ ನಡುವೆ ಮಹಿಳೆಯರ ಸಿಂಗಲ್ಸ್‌ ವಿಭಾಗದ ಸೆಮಿಫೈನಲ್  ಹಣಾಹಣಿಯು ಗುರುವಾರ ನಡೆಯಲಿದೆ.

ಮಂಗಳವಾರ ನಡೆದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ರಷ್ಯಾದ ಶರಪೋವಾ  ಅಮೆರಿಕದ ಕೊಕೊ ವಾಂಡೆವೆಗೆ ವಿರುದ್ಧ ಜಯಗಳಿಸಿದ್ದರು.

ಎಂಟರ ಘಟ್ಟದ ಪಂದ್ಯದಲ್ಲಿ  ಸೆರೆನಾ ವಿಲಿಯಮ್ಸ್‌ ಅವರು ಬೆಲಾರಸ್‌ನ ವಿಕ್ಟೋರಿಯಾ ಅಜರೆಂಕಾ ವಿರುದ್ಧ ಗೆದ್ದಿದ್ದರು.
2004ರ ವಿಂಬಲ್ಡನ್ ಫೈನಲ್‌ನಲ್ಲಿ ಶರಪೋವಾ ಅವರು ಸೆರೆನಾ ವಿಲಿಯಮ್ಸ್ ಅವರನ್ನು
ಸೋಲಿಸಿದ್ದರು.  

‘ಮರಿಯಾ ವಿರುದ್ಧ ಆಡುವುದು ನನಗೆ ಇಷ್ಟ.  ಸವಾಲು ಎದುರಿಸಲು ನಾನು ಸಿದ್ಧಳಾಗಿದ್ದೇನೆ. ಬಹಳ ದಿನಗಳಿಂದ ವಿಂಬಲ್ಡನ್ ಟ್ರೋಫಿಯ ಮೇಲೆ ನನ್ನ ಹೆಸರು ನೋಡಿಲ್ಲ.

ಅದನ್ನು ಈ ಬಾರಿ ನೋಡಲು ಇಷ್ಟಪಡುತ್ತೇನೆ’ ಎಂದು 33 ವರ್ಷದ ಸೆರೆನಾ ವಿಲಿಯಮ್ಸ್‌  ತಮ್ಮ ಪ್ರಶಸ್ತಿ ಗೆಲ್ಲುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT