ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆ.8ಕ್ಕೆ ಉಚಿತ ಕೃತಕ ಕಾಲು ಜೋಡಣೆ ಶಿಬಿರ

Last Updated 28 ಆಗಸ್ಟ್ 2014, 20:07 IST
ಅಕ್ಷರ ಗಾತ್ರ

ಬೆಂಗಳೂರು: ‘ಕಾಲುಗಳನ್ನು ಕಳೆದು­ಕೊಂಡು ನಡೆಯಲಾಗದವರಿಗೆ ಉಚಿತ ಕಾಲು (ಜೈಪುರ ಕಾಲು), ಪೋಲಿಯೊ ಬಾಧಿತರಿಗೆ ಕ್ಯಾಲಿಪರ್ಸ್‌ ಹಾಗೂ ಅಂಗವಿಕಲರಿಗೆ ಕ್ರಚಸ್‌ಗಳನ್ನು ಉಚಿತವಾಗಿ ನೀಡುವ ಶಿಬಿರವನ್ನು ಸಂಸ್ಥೆಯ ವತಿಯಿಂದ ಹಮ್ಮಿಕೊಳ್ಳಲಾಗಿದೆ’ ಎಂದು ಕರ್ನಾಟಕ ಮಾರವಾರಿ ಸಮಾಜದ ಕಾರ್ಯಕಾರಿ ನಿರ್ದೇಶಕ ಬಿಮಲ್ ಕುಮಾರ್ ಸರೋಗಿ ಹೇಳಿದರು.

‘ಸಂಸ್ಥೆಯು ಕೃತಕ ಕಾಲುಗಳ ತಯಾರಿಕೆಯಲ್ಲಿ ಜೈಪುರದ ವಿಶೇಷ ತಂತ್ರಜ್ಞಾನ ಬಳಸುತ್ತದೆ. ಜೈಪುರ ಕಾಲುಗಳು ಅತ್ಯಂತ ಸಮರ್ಥವಾಗಿದ್ದು ಈ ಕಾಲು ಜೋಡಿಸಿದ ನಂತರ ವ್ಯಕ್ತಿ ಸಾಮಾನ್ಯ ವ್ಯಕ್ತಿಗಳಂತೆಯೇ ಕೋಲಿನ ಸಹಾಯವಿಲ್ಲದೆ ನಡೆದಾಡಬಹುದು, ಓಡಬಹುದು ಮತ್ತು ಸೈಕಲ್ ತುಳಿಯಬಹುದು’ ಎಂದು ಹೇಳಿದರು. 

ಬಹಳಷ್ಟು ರೋಗಿಗಳು ಜೈಪುರ ಕಾಲು ಜೋಡಿಸಿದ ನಂತರ ಜಮೀನು, ಫ್ಯಾಕ್ಟರಿ, ಅಂಗಡಿ ಮತ್ತು ಕಚೇರಿ ಕೆಲಸಗಳಿಗೆ ಮರಳಿದ್ದಾರೆ. ಕಾಲುಗಳ
ಅಳತೆ ಶಿಬಿರವನ್ನು ಸೆ.8 ರ ಬೆಳಿಗ್ಗೆ 9 ರಿಂದ 3ರ ವರೆಗೆ ಜಯನಗರ ಅಶೋಕ ಪಿಲ್ಲರ್ ಬಳಿಯಿರುವ ಮಹಾರಾಜಾ ಅಗ್ರಸೇನ ಭವನದಲ್ಲಿ ಏರ್ಪಡಿಸಲಾಗಿದ್ದು, ಹೆಸರುಗಳನ್ನು ಸೆ.5ರ ಒಳಗೆ ನೋಂದಾಯಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು. ಹೆಚ್ಚಿನ ಮಾಹಿತಿಗಾಗಿ ೯೮೮೦೪ ೬೮೪೬೧ ಸಂಪರ್ಕಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT