ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇನಾ ಮುಖ್ಯಸ್ಥರ ಜತೆ ಷರೀಫ್‌ ಚರ್ಚೆ

ಪಾಕಿಸ್ತಾನ ರಾಜಕೀಯ ಬಿಕ್ಕಟ್ಟು
Last Updated 26 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌ (ಪಿಟಿಐ): ಪಾಕಿ­ಸ್ತಾ­ನದ ಪ್ರಧಾನಿ ನವಾಜ್‌ ಷರೀಫ್‌ ಮತ್ತು ಪ್ರಭಾವಿ ಸೇನಾ ಮುಖ್ಯಸ್ಥ ಜನ­ರಲ್‌ ರಹೀಲ್‌ ಷರೀಫ್‌ ಮಂಗಳ­ವಾರ ಇಲ್ಲಿ ಭೇಟಿಯಾಗಿ ದೇಶದಲ್ಲಿನ ಪ್ರಸಕ್ತ ರಾಜ­ಕೀಯ ಬಿಕ್ಕಟ್ಟು ಬಗೆಹರಿಸಲು ಮಾತುಕತೆ ನಡೆಸಿದರು.

ಪಾಕಿಸ್ತಾನ್‌ ತೆಹ್ರೀಕ್‌–ಇ–ಇನ್ಸಾಫ್‌ (ಪಿಟಿಐ) ಪಕ್ಷದ ಮುಖ್ಯಸ್ಥ ಇಮ್ರಾನ್‌ ಖಾನ್‌ ಮತ್ತು ಕೆನಡಾ ವಾಸಿಯಾದ ಧಾರ್ಮಿಕ ನಾಯಕ, ಪಾಕಿಸ್ತಾನ್‌ ಅವಾಮಿ ತೆಹ್ರೀಕ್‌ (ಪಿಎಟಿ) ಪಕ್ಷದ ಮುಖ್ಯಸ್ಥ ತಹೀರುಲ್‌ ಖಾದ್ರಿ ಅವರ ನೇತೃತ್ವದಲ್ಲಿ ನಡೆಯುತ್ತಿ­ರುವ ಪ್ರಧಾನಿ ಪದಚ್ಯುತಿ ಪ್ರತಿಭಟನೆಯ ಕಾರಣ ಈ ಮಹತ್ವದ ಸಭೆ ನಡೆದಿದೆ.

ಈ ಪ್ರತಿಭಟನೆಯಿಂದ ದೇಶದಲ್ಲಿ ಉಂಟಾಗಿರುವ ರಾಜಕೀಯ ಅಸ್ಥಿರತೆ ಕೊನೆಗೊಳಿಸಲು ಸರ್ಕಾರವು ಮಾತುಕತೆಗೆ ಇಳಿದಿದೆ. ಇದರ ಭಾಗವಾಗಿ ಸೇನಾ ಮುಖ್ಯಸ್ಥರ ಜೊತೆ ಪ್ರಧಾನಿ ಚರ್ಚಿಸಿದ್ದಾರೆ. ಸಭೆಯಲ್ಲಿ ಪ್ರಸ್ತುತ ಪರಿಸ್ಥಿತಿ ಸೇರಿ­ದಂತೆ ಒಟ್ಟಾರೆ ಭದ್ರತಾ ವ್ಯವಸ್ಥೆಯ ಬಗ್ಗೆ ಚರ್ಚಿ­ಸ­ಲಾಗಿದೆ. ರಾಷ್ಟ್ರೀಯ ಹಿತಾಸಕ್ತಿ ದೃಷ್ಟಿ­ಯಿಂದ ಪ್ರಸಕ್ತ ರಾಜಕೀಯ ಬಿಕ್ಕ­ಟ್ಟನ್ನು ಬಗೆಹರಿಸುವ ನಿಟ್ಟಿನಲ್ಲಿ ಸಭೆ ಒಮ್ಮ­ತಾ­­­ಭಿ­ಪ್ರಾಯವನ್ನು ವ್ಯಕ್ತಪ-­ಡಿಸಿದೆ ಎಂದು ಪ್ರಧಾನಿ ಕಚೇರಿ ತಿಳಿಸಿದೆ.  ಸರ್ಕಾರ ಮಾತುಕತೆಯ ವಿವರಗಳನ್ನು ನೀಡಿಲ್ಲ. ಆದರೆ ಸೇನೆಯು ಈಗಾಗಲೇ ಮಾತುಕತೆ ಮೂಲಕ ಬಿಕ್ಕಟ್ಟು ಬಗೆಹರಿಸಿಕೊಳ್ಳು­ವಂತೆ ಎರಡೂ ಕಡೆ­ಯ­­ವರಿಗೆ ಕಿವಿಮಾತು ಹೇಳಿದೆ.

ಕಳೆದ ಸಾರ್ವತ್ರಿಕ ಚುನಾವಣೆ­ಯಲ್ಲಿ ಸಾಕಷ್ಟು ಅಕ್ರಮ ನಡೆಸಲಾಗಿದೆ ಮತ್ತು ಜೂನ್‌ 17ರಂದು 14 ಪಿಎಟಿ ಬೆಂಬಲಿಗರನ್ನು ಹತ್ಯೆ ಮಾಡ­ಲಾ­ಗಿದೆ ಎಂದು ಪ್ರಧಾನಿ ಷರೀಫ್‌ ರಾಜೀನಾಮೆಗೆ ಆಗ್ರಹಿಸಿ, 13 ದಿನದಿಂದ ಪ್ರತಿಭಟನೆ ನಡೆಯು­ತ್ತಿ­ರು­ವು­­ದ­ರಿಂದ ಪಾಕ್‌ನಲ್ಲಿ ರಾಜಕೀಯ ಅಸ್ಥಿರತೆ ಉಂಟಾ­ಗಿದೆ.

ಈ ಸಂಬಂಧ ಪ್ರಧಾನಿ ಷರೀಫ್‌ ರಾಜೀ­ನಾಮೆಗಾಗಿ ಎರಡೂ ಪಕ್ಷಗಳು ಗಡುವು ವಿಧಿಸಿವೆ. ಸೋಮವಾರ 48ಗಂಟೆಗಳ ಗಡುವು ವಿಧಿಸಿದ್ದ ಖಾದ್ರಿ, ಮಂಗಳ­ವಾರ 23 ಗಂಟೆಗಳಲ್ಲಿ ಷರೀಫ್‌ ರಾಜೀನಾಮೆ ನೀಡ­ದಿದ್ದರೆ ರಕ್ತಪಾತದ ಎಚ್ಚರಿಕೆ ನೀಡಿದ್ದಾರೆ.    ಸರ್ಕಾರ ಈ ಪಕ್ಷಗಳ ಎಲ್ಲ ಬೇಡಿಕೆ ಒಪ್ಪಿದ್ದು, ಆದರೆ ಪ್ರಧಾನಿ ರಾಜೀನಾ­ಮೆ ಬೇಡಿಕೆಯನ್ನು ನಿರಾಕರಿ­ಸಿದೆ. ಈ ಮಧ್ಯೆ, ಷರೀಫ್‌ ಸಹೋದರ ಶಹಬಾದ್‌ ಷರೀಫ್‌ ಚೀನಾಕ್ಕೆ ಭೇಟಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT