ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈಕಲ್‌ ದಿನಾಚರಣೆ

Last Updated 14 ಸೆಪ್ಟೆಂಬರ್ 2014, 20:09 IST
ಅಕ್ಷರ ಗಾತ್ರ

ಯಲಹಂಕ: ರಸ್ತೆಯುದ್ದಕ್ಕೂ ಹಳ್ಳಿಯ ಸಾಂಪ್ರದಾಯಿಕ ಬೀದಿ ಆಟಗಳು, ಜಾಥಾ ಹೊರಟ ಸೈಕಲ್‌ಗಳು, ಡೊಳ್ಳು ಕುಣಿತ, ಟೇಕ್ವಾಂಡೊ, ಕರಾಟೆ ಸಾಹಸ ಪ್ರದರ್ಶನ, ಪಥಸಂಚಲನ, ಡ್ರಿಲ್‌ ಹಾಗೂ ಪಾಳೇಗಾರನ ವೇಷಧಾರಿಯನ್ನು ಕುತೂಹಲದಿಂದ ವೀಕ್ಷಿಸುತ್ತಿದ್ದ ಮಕ್ಕಳು.

ನಗರ ಭೂ ಸಾರಿಗೆ ಇಲಾಖೆ, ಬೆಂಗ-ಳೂರಿನ ಸಾರ್ವಜನಿಕ ಸ್ಥಳಗಳ ಒಕ್ಕೂಟ (ಬಿಸಿಒಎಸ್‌) ಹಾಗೂ ಯಲಹಂಕ ಯುನೈಟೆಡ್‌ ಎನ್ವಿರಾನ್‌ ಮೆಂಟ್‌ ಅಸೋ-ಸಿ-ಯೇಷನ್‌ ಜಂಟಿಯಾಗಿ ಅಳ್ಳಾಳ­ಸಂದ್ರದ ಕೆರೆಯ ಬಳಿ ಭಾನುವಾರ ಆಯೋಜಿಸಿದ್ದ 3ನೇ ಸೈಕಲ್‌ ದಿನಾ-ಚರಣೆಯಲ್ಲಿ ಕಂಡುಬಂದ ದೃಶ್ಯಗಳಿವು.

ಮಕ್ಕಳಿಂದ ಹಿಡಿದು ಎಲ್ಲ ವಯೋ­ಮಾ­ನದವರು ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಸೈಕಲ್‌ ತುಳಿದು ಸಂಭ್ರಮಿಸಿದರು. ಕೆಲ ಪೋಷಕರು ಮಕ್ಕಳನ್ನು ಸೈಕಲ್‌ ಮೇಲೆ ಕೂರಿಸಿ, ಜಾಥಾಗೆ ಶುಭಾಶಯ ಹೇಳು-ತ್ತಿದ್ದರೆ,  ಇನ್ನು ಕೆಲವರು ಮಕ್ಕಳೊಂದಿಗೆ ತಾವೂ ಸೈಕಲ್‌ ಏರಿ ಜಾಥಾ ಹೊರ-ಟರು. ಕೆರೆಯ ಅಕ್ಕಪಕ್ಕದ ರಸ್ತೆಗಳಲ್ಲಿ ಸೈಕಲ್‌ಗಳದ್ದೆ ಕಾರುಬಾರು.

ಶಾಲಾ– ಕಾಲೇಜುಗಳ ವಿದ್ಯಾರ್ಥಿ-ಗಳು ಸೇರಿದಂತೆ ಸೈಕಲ್‌ ಪ್ರೇಮಿಗಳು, ವಿವಿಧ ಸಂಘಟನೆಗಳ ಸದಸ್ಯರು ಹಾಗೂ ಸುತ್ತಮುತ್ತಲ ಬಡಾವಣೆಗಳ ಎಲ್ಲ ವಯೋಮಾನದವರು ಕೆರೆಯ ಸುತ್ತ ಹಾಗೂ ಯಲಹಂಕ ಉಪನಗರದ ಪ್ರಮುಖ ಬೀದಿಗಳಲ್ಲಿ ಸುಮಾರು 7 ಕಿ.ಮೀ. ದೂರದವರೆಗೆ ಸೈಕಲ್‌ ಜಾಥಾ ನಡೆಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರು, ‘ನಗರ ಪ್ರದೇಶದಲ್ಲಿ ನಾಲ್ಕು ಚಕ್ರ ವಾಹನಗಳ ಸಂಖ್ಯೆ ಹೆಚ್ಚಾಗಿರು-ವುದರಿಂದ ಸಂಚಾರದ ಒತ್ತಡ ಹೆಚ್ಚಾಗಿ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ಸೈಕಲ್‌ಗಳನ್ನು ಹೆಚ್ಚಾಗಿ ಬಳಸುವುದರಿಂದ ಸಂಚಾರದ ಒತ್ತಡವನ್ನು ಕಡಿಮೆ  ಮಾಡಲು ಸಾಧ್ಯ’ ಎಂದು ಸಲಹೆ ನೀಡಿದರು.

‘ಬೆಂಗಳೂರಿನಲ್ಲಿ ನೂರಾರು ವರ್ಷಗಳ ಇತಿಹಾಸ ಹೊಂದಿರುವ ಸಾಕಷ್ಟು ಕೆರೆಗಳಿವೆ. ಆದರೆ, ಹೆಚ್ಚಿನ ಕೆರೆಗಳು ದುಸ್ಥಿತಿಗೆ ತಲುಪಿದ್ದು, ಸರ್ಕಾರ ಕೆರೆ ಅಭಿವೃದ್ಧಿ ಪ್ರಾಧಿಕಾರವನ್ನು ರಚಿಸಿದ್ದರೂ, ಆಡಳಿತ ಯಂತ್ರದ ನಿರ್ಲಕ್ಷ್ಯದಿಂದಾಗಿ ಒತ್ತುವರಿಯಾಗಿರುವ ಪ್ರಕರಣಗಳು ನಡೆದಿವೆ’ ಎಂದು ವಿಷಾದ ವ್ಯಕ್ತಪಡಿಸಿದರು.

ಕೊಡುಗೆ: ಈಝೀ ಗ್ರೂಪ್‌ ಕಂಪೆನಿಯವರು ಯಲಹಂಕ ಸಂಚಾರ ಪೊಲೀಸ್‌ ಹಾಗೂ ಕಾನೂನು ಸುವ್ಯವಸ್ಥೆ ವಿಭಾಗಕ್ಕೆ ಕೊಡುಗೆಯಾಗಿ ನೀಡಿರುವ ತಲಾ 4 ಪೊಲೀಸ್‌ ಚೌಕಿಗಳನ್ನು ಕಂಪೆನಿಯ ಸೈಯದ್‌ ಇಶಾಂ ಅವರು, ವಿಧಾನಸಭಾಧ್ಯಕ್ಷರ ಮೂಲಕ ಪೊಲೀಸ್‌ ಅಧಿಕಾರಿ-ಗಳಿಗೆ ಹಸ್ತಾಂತರಿಸಿದರು.

ಶಾಸಕ ಎಸ್‌.ಆರ್‌.ವಿಶ್ವನಾಥ್‌, ಬಿಬಿಎಂಪಿ ತೋಟಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಮುನಿರಾಜು, ಇಲಾಖೆಯ ಸಾರಿಗೆ ಯೋಜನಾ ವ್ಯವಸ್ಥಾ ಪಕಿ ಸೋನಲ್‌ ಕುಲಕರ್ಣಿ, ಯಲಹಂಕ ಯುನೈಟೆಡ್‌ ಎನ್ವಿರಾನ್‌ಮೆಂಟ್‌ ಅಸೋಸಿಯೇಷನ್‌ ಅಧ್ಯಕ್ಷ ಡಾ.ಎಸ್‌.ಟಿ.ತಾಯಪ್ಪ, ಯಲಹಂಕ ನಾಗರಿಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಅ.ಬ.ಶಿವಕುಮಾರ್‌ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT