ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈನಾ ದಾಖಲೆ

ಅಗ್ರಸ್ಥಾನಕ್ಕೇರಿದ ಭಾರತದ ಮೊದಲ ಆಟಗಾರ್ತಿ
Last Updated 28 ಮಾರ್ಚ್ 2015, 19:34 IST
ಅಕ್ಷರ ಗಾತ್ರ

ನವದೆಹಲಿ: ಸೈನಾ ನೆಹ್ವಾಲ್‌ ಪಾಲಿಗೆ ಶನಿವಾರ ಅವಿಸ್ಮರಣೀಯ ದಿನ. ಭಾರತದ ಬ್ಯಾಡ್ಮಿಂಟನ್‌ ಇತಿಹಾಸದಲ್ಲಿ ಅವರು ಹೊಸ ಭಾಷ್ಯ ಬರೆದರು. ಸೈನಾ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೆ ಏರುವ ಮೂಲಕ ಈ ಸಾಧನೆ ಮಾಡಿದ  ಭಾರತದ ಮೊದಲ ಆಟಗಾರ್ತಿ ಎಂಬ ಕೀರ್ತಿಗೆ ಪಾತ್ರರಾದರು.

ಶನಿವಾರ ನಡೆದ ಇಂಡಿಯಾ ಓಪನ್‌ ಸೂಪರ್‌ ಸರಣಿಯ ಸೆಮಿಫೈನಲ್‌ನಲ್ಲಿ ಹಾಲಿ ವಿಶ್ವ ಚಾಂಪಿಯನ್‌ ಸ್ಪೇನ್‌ನ ಕರೋಲಿನ್‌ ಮರಿನ್‌ ಅವರು ಥಾಯ್ಲೆಂಡ್‌ನ  ಇಂಟಾನೊನ್‌ ಎದುರು ಸೋತರು.  ಅವರ ಪಾಯಿಂಟ್‌ಗಳು ಕಡಿಮೆಯಾಗಿ ಅವರು ಎರಡನೇ ಸ್ಥಾನಕ್ಕೆ ಇಳಿದರು. ಎರಡನೇ ಸ್ಥಾನದಲ್ಲಿದ್ದ ಸೈನಾ ಅಗ್ರಪಟ್ಟಕ್ಕೆ ಏರಿದರು.    ಹೀಗಾಗಿ ಭಾರತದ ಆಟಗಾರ್ತಿಯ ಬಹುಕಾಲದ ಕನಸು ಸಾಕಾರಗೊಂಡಿತು.

25 ವರ್ಷದ ಸೈನಾ ಈ ವರ್ಷ ಮುಟ್ಟಿದ್ದೆಲ್ಲಾ ಬಂಗಾರವಾಗಿದೆ. ಅವರು ಆಲ್‌ ಇಂಗ್ಲೆಂಡ್‌ ಚಾಂಪಿಯನ್‌ಷಿಪ್‌ನಲ್ಲಿ ‘ರನ್ನರ್‌ ಅಪ್‌’ ಸ್ಥಾನ ಗಳಿಸಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT