ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋತು ಹೊರಬಿದ್ದ ಭಾರತ

ಕ್ರಿಕೆಟ್‌: ಮಿಂಚಿದ ಟೇಲರ್‌, ಬಟ್ಲರ್‌; ಫೈನಲ್‌ಗೆ ಇಂಗ್ಲೆಂಡ್‌
Last Updated 30 ಜನವರಿ 2015, 19:49 IST
ಅಕ್ಷರ ಗಾತ್ರ

ಪರ್ತ್‌: ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಉತ್ತಮ ಆರಂಭ ಲಭಿಸಿದರೂ ಅದನ್ನು ಸದುಪಯೋಗ ಪಡಿಸುವಲ್ಲಿ ಎಡವಿದ ಭಾರತ ತಂಡ ತ್ರಿಕೋನ ಏಕದಿನ ಕ್ರಿಕೆಟ್‌ ಸರಣಿಯ ಫೈನಲ್‌ ಪ್ರವೇಶಿಸಲು ವಿಫಲವಾಯಿತು. ವಾಕಾ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಮಹೇಂದ್ರ ಸಿಂಗ್‌ ದೋನಿ ಬಳಗ ಇಂಗ್ಲೆಂಡ್‌ ಎದುರು ಮೂರು ವಿಕೆಟ್‌ಗಳ ಸೋಲು ಅನುಭವಿಸಿತು. ‘ಮಾಡು ಇಲ್ಲವೇ ಮಡಿ’ ಪಂದ್ಯದಲ್ಲಿ ಭಾರತ ತಂಡದಿಂದ ಚೇತರಿಕೆಯ ಪ್ರದರ್ಶನ ಕಂಡುಬರಲಿಲ್ಲ.

ಮೊದಲು ಬ್ಯಾಟ್‌ ಮಾಡಿದ ‘ಮಹಿ’ ಬಳಗ 48.1 ಓವರ್‌ಗಳಲ್ಲಿ 200 ರನ್‌ಗಳಿಗೆ ಆಲೌಟಾಯಿತು. ಎಯೊನ್ ಮಾರ್ಗನ್‌ ನೇತೃತ್ವದ ಇಂಗ್ಲೆಂಡ್‌ 46.5 ಓವರ್‌ಗಳಲ್ಲಿ 7 ವಿಕೆಟ್‌ಗೆ 201 ರನ್‌ ಗಳಿಸಿ ಜಯ ಸಾಧಿಸಿತು. ಜೇಮ್ಸ್‌ ಟೇಲರ್‌ (82) ಮತ್ತು ಜಾಸ್‌ ಬಟ್ಲರ್‌ (67) ಇಂಗ್ಲೆಂಡ್‌ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು.  ಭಾನುವಾರ ನಡೆಯಲಿರುವ ಫೈನಲ್‌ನಲ್ಲಿ ಇಂಗ್ಲೆಂಡ್‌ ಮತ್ತು ಆಸ್ಟ್ರೇಲಿಯಾ ತಂಡಗಳು ಎದುರಾಗಲಿವೆ.

ಉತ್ತಮ ಆರಂಭ, ಹಠಾತ್‌ ಕುಸಿತ: ಟಾಸ್‌ ಗೆದ್ದ ಇಂಗ್ಲೆಂಡ್‌ ಫೀಲ್ಡಿಂಗ್‌ ಆಯ್ದುಕೊಂಡಿತು. ಅಜಿಂಕ್ಯ ರಹಾನೆ (73, 101 ಎಸೆತ, 3 ಬೌಂ, 1 ಸಿ) ಮತ್ತು ಶಿಖರ್‌ ಧವನ್‌ (38, 65 ಎಸೆತ, 4 ಬೌಂ) ಭಾರತಕ್ಕೆ ಉತ್ತಮ ಆರಂಭ ನೀಡಿದರು. ಇವರು ಮೊದಲ ವಿಕೆಟ್‌ಗೆ 20.1 ಓವರ್‌ಗಳಲ್ಲಿ 83 ರನ್‌ ಸೇರಿಸಿದರು.

ಒಂದು ವಿಕೆಟ್‌ಗೆ 103 ರನ್‌ ಗಳಿಸಿ ಉತ್ತಮ ಮೊತ್ತದ ಸೂಚನೆ ನೀಡಿದ್ದ ಭಾರತ ಬಳಿಕ ಕುಸಿತದ ಹಾದಿ ಹಿಡಿಯಿತು. 97 ರನ್‌ ಗಳಿಸುವಷ್ಟರಲ್ಲಿ ಮುಂದಿನ ಒಂಬತ್ತು ವಿಕೆಟ್‌ಗಳನ್ನು ಕಳೆದುಕೊಂಡಿತು. ಸ್ಟೀವನ್‌ ಫಿನ್‌ (36ಕ್ಕೆ 3) ಮತ್ತು ಮೊಯೀನ್‌ ಅಲಿ (35ಕ್ಕೆ 2) ಅವರ ಪ್ರಭಾವಿ ಬೌಲಿಂಗ್‌ ಭಾರತದ ಕುಸಿತಕ್ಕೆ ಕಾರಣ.

ವಿರಾಟ್‌ ಕೊಹ್ಲಿ (8) ಮತ್ತು ಸುರೇಶ್‌ ರೈನಾ (1) ಅವರನ್ನು ಬೆನ್ನುಬೆನ್ನಿಗೆ ಔಟ್‌ ಮಾಡಿದ ಮೊಯೀನ್‌ ಇಂಗ್ಲೆಂಡ್‌ಗೆ ಮೇಲುಗೈ ತಂದಿತ್ತರು. ಆ ಬಳಿಕ ಭಾರತ ಆಗಿಂದಾಗ್ಗೆ ವಿಕೆಟ್‌ಗಳನ್ನು ಕಳೆದುಕೊಂಡಿತು.

‘ಬ್ಯಾಟಿಂಗ್‌ ವೈಫಲ್ಯ ನಮ್ಮ ಸೋಲಿಗೆ ಕಾರಣವಾಯಿತು‘ ಎಂದು ನಾಯಕ ಮಹೇಂದ್ರ ಸಿಂಗ್‌ ದೋನಿ ಹೇಳಿದ್ದಾರೆ

ಸಾಧಾರಣ ಗುರಿ ಬೆನ್ನಟ್ಟಿದ ಇಂಗ್ಲೆಂಡ್‌ಗೆ ಆರಂಭದಲ್ಲಿ ಆಘಾತ ಕಾದಿತ್ತು. 66 ರನ್‌ ಗಳಿಸುವಷ್ಟರಲ್ಲಿ ಅಗ್ರ ಐವರು ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್‌ ಸೇರಿದರು. ಸ್ಟುವರ್ಟ್‌್ ಬಿನ್ನಿ (33ಕ್ಕೆ 3) ಶಿಸ್ತಿನ ಬೌಲಿಂಗ್‌ ದಾಳಿ ನಡೆಸಿ ಎದುರಾಳಿಗಳ ಮೇಲೆ ಒತ್ತಡ ಹೇರಿದರು. ಆ ಬಳಿಕ ಭಾರತ ಪಂದ್ಯದ ಮೇಲಿನ ಹಿಡಿತ ಕೈಬಿಟ್ಟಿತು.

ಜಯ ಕಸಿದ ಟೇಲರ್‌, ಬಟ್ಲರ್‌: ದೋನಿ ಬಳಗದ ಗೆಲುವಿನ ಕನಸಿಗೆ ಅಡ್ಡಿಯಾದದ್ದು ಟೇಲರ್‌ ಮತ್ತು ಬಟ್ಲರ್‌. ಆರನೇ ವಿಕೆಟ್‌ಗೆ ಜತೆಯಾದ ಇವರು 125 ರನ್‌ಗಳನ್ನು ಸೇರಿಸಿ ತಮ್ಮ ತಂಡವನ್ನು ಜಯದತ್ತ ಕೊಂಡೊಯ್ದರು. ಭಾರತದ ವೇಗಿಗಳು ಮತ್ತು ಸ್ಪಿನ್ನರ್‌ಗಳನ್ನು ಸಮರ್ಥವಾಗಿ ಎದುರಿಸಿದ ಟೇಲರ್‌ 122 ಎಸೆತಗಳನ್ನು ಎದುರಿಸಿ ನಾಲ್ಕು ಬೌಂಡರಿ ಗಳಿಸಿದರು. ಬಟ್ಲರ್‌ 78 ಎಸೆತಗಳನ್ನು ಎದುರಿಸಿ ಏಳು ಬೌಂಡರಿ ಗಳಿಸಿದರು.

ಸಂಕ್ಷಿಪ್ತ ಸ್ಕೋರ್‌
ಭಾರತ: 48.1 ಓವರ್‌ಗಳಲ್ಲಿ 200
ಅಜಿಂಕ್ಯ ರಹಾನೆ ಸಿ ಬಟ್ಲರ್‌ ಬಿ ಸ್ಟೀವನ್‌ ಫಿನ್‌  73
ಶಿಖರ್‌ ಧವನ್‌ ಸಿ ಬಟ್ಲರ್‌ ಬಿ ಕ್ರಿಸ್‌ ವೋಕ್ಸ್‌  38
ವಿರಾಟ್‌ ಕೊಹ್ಲಿ ಸಿ ರೂಟ್‌ ಬಿ ಮೊಯೀನ್‌ ಅಲಿ  08
ಸುರೇಶ್‌ ರೈನಾ ಸಿ ವೋಕ್ಸ್‌ ಬಿ ಮೊಯೀನ್‌ ಅಲಿ  01
ಅಂಬಟಿ ರಾಯುಡು ಸಿ ಬಟ್ಲರ್ ಬಿ ಸ್ಟುವರ್ಟ್‌ ಬ್ರಾಡ್‌  12
ಎಂ.ಎಸ್‌. ದೋನಿ ಎಲ್‌ಬಿಡಬ್ಲ್ಯು ಬಿ ಜೇಮ್ಸ್‌ ಆ್ಯಂಡರ್‌ಸನ್‌  17
ಸ್ಟುವರ್ಟ್‌ ಬಿನ್ನಿ ಸಿ ಬೆಲ್‌ ಬಿ ಸ್ಟೀವನ್‌ ಫಿನ್‌  07
ರವೀಂದ್ರ ಜಡೇಜ ಸಿ ಫಿನ್‌ ಬಿ ಸ್ಟುವರ್ಟ್‌ ಬ್ರಾಡ್‌  05
ಅಕ್ಷರ್‌ ಪಟೇಲ್‌ ಸಿ ಬೆಲ್‌ ಬಿ ಸ್ಟೀವನ್‌ ಫಿನ್‌  01
ಮೋಹಿತ್‌ ಶರ್ಮ ಔಟಾಗದೆ  07
ಮೊಹಮ್ಮದ್‌ ಶಮಿ ಸಿ ಬಟ್ಲರ್‌ ಬಿ ಕ್ರಿಸ್‌ ವೋಕ್ಸ್‌  25
ಇತರೆ: (ಲೆಗ್‌ಬೈ–2, ವೈಡ್‌–4)  06
ವಿಕೆಟ್‌ ಪತನ: 1–83 (ಧವನ್‌; 20.1), 2–103 (ಕೊಹ್ಲಿ; 27.1), 3–107 (ರೈನಾ; 29.2), 4–134 (ರಾಯುಡು; 34.1), 5–136 (ರಹಾನೆ; 35.3), 6–152 (ಬಿನ್ನಿ; 39.2), 7–164 (ದೋನಿ; 42.6), 8–164 (ಜಡೇಜ; 43.2), 9–165 (ಪಟೇಲ್‌; 44.2), 10–200 (ಶಮಿ; 48.1)
ಬೌಲಿಂಗ್‌: ಜೇಮ್ಸ್‌ ಆ್ಯಂಡರ್‌ಸನ್‌ 9–1–24–1, ಕ್ರಿಸ್‌ ವೋಕ್ಸ್‌ 9.1–1–47–2, ಸ್ಟುವರ್ಟ್‌ ಬ್ರಾಡ್‌ 10–1–56–2, ಸ್ಟೀವನ್‌ ಫಿನ್‌ 10–0–36–3, ಮೊಯೀನ್‌ ಅಲಿ 10–0–35–2
ಇಂಗ್ಲೆಂಡ್‌: 46.5 ಓವರ್‌ಗಳಲ್ಲಿ 7 ವಿಕೆಟ್‌ಗೆ 201
ಇಯಾನ್‌ ಬೆಲ್‌ ಎಲ್‌ಬಿಡಬ್ಲ್ಯು ಬಿ ಮೋಹಿತ್ ಶರ್ಮ 10
ಮೊಯೀನ್‌ ಅಲಿ ಸಿ ರಾಯುಡು ಬಿ ಅಕ್ಷರ್‌ ಪಟೇಲ್‌ 17
ಜೇಮ್ಸ್‌ ಟೇಲರ್‌ ಸಿ ಬಿನ್ನಿ ಬಿ ಮೋಹಿತ್‌ ಶರ್ಮ 82
ಜೋ ರೂಟ್‌ ಸಿ ಮತ್ತು ಬಿ ಸ್ಟುವರ್ಟ್‌ ಬಿನ್ನಿ 03
ಎಯೊನ್ ಮಾರ್ಗನ್‌ ಸಿ ಧವನ್‌ ಬಿ ಸ್ಟುವರ್ಟ್‌ ಬಿನ್ನಿ 02
ರವಿ ಬೋಪಾರ ಸಿ ಜಡೇಜ ಬಿ ಸ್ಟುವರ್ಟ್‌ ಬಿನ್ನಿ 04
ಜಾಸ್‌ ಬಟ್ಲರ್‌ ಸಿ ರಾಯುಡು ಬಿ ಮೊಹಮ್ಮದ್‌ ಶಮಿ 67
ಕ್ರಿಸ್‌ ವೋಕ್ಸ್‌ ಔಟಾಗದೆ 04
ಸ್ಟುವರ್ಟ್‌ ಬ್ರಾಡ್‌ ಔಟಾಗದೆ 03
ಇತರೆ: (ವೈಡ್‌–7, ನೋಬಾಲ್‌–2) 09
ವಿಕೆಟ್‌ ಪತನ: 1–14 (ಬೆಲ್‌; 3.5), 2–40 (ಅಲಿ; 12.1), 3–44 (ರೂಟ್‌; 13.6), 4–54 (ಮಾರ್ಗನ್‌; 17.6), 5–66 (ಬೋಪಾರ; 19.6), 6–191 (ಟೇಲರ್‌; 43.2), 7–193 (ಬಟ್ಲರ್‌; 45.2)
ಬೌಲಿಂಗ್: ಸ್ಟುವರ್ಟ್‌ ಬಿನ್ನಿ 8–0–33–3, ಮೋಹಿತ್‌ ಶರ್ಮ 10–1–36–2, ಮೊಹಮ್ಮದ್‌ ಶಮಿ 9–0–31–1, ಅಕ್ಷರ್‌ ಪಟೇಲ್‌ 10–1–39–1, ರವೀಂದ್ರ ಜಡೇಜ 9.5–0–62–0
ಫಲಿತಾಂಶ; ಇಂಗ್ಲೆಂಡ್‌ಗೆ 3 ವಿಕೆಟ್‌ ಜಯ ಹಾಗೂ 4 ಪಾಯಿಂಟ್‌
ಪಂದ್ಯಶ್ರೇಷ್ಠ: ಜೇಮ್ಸ್‌ ಟೇಲರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT