ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋನಂಗೆ 70 ಲಕ್ಷ ಹಿಂಬಾಲಕರು!

ಪಂಚರಂಗಿ
Last Updated 31 ಜುಲೈ 2015, 19:45 IST
ಅಕ್ಷರ ಗಾತ್ರ

ಜನಪ್ರಿಯ ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ  ಬಾಲಿವುಡ್‌ ಯುವ ನಟಿ ಸೋನಂ ಕಪೂರ್‌ ಅಭಿ ಮಾನಿಗಳ ಸಂಖ್ಯೆ 70 ಲಕ್ಷಕ್ಕೆ ತಲುಪಿದೆ. ತಮ್ಮ ಹಿಂಬಾಲಕ ರೊಂದಿಗೆ ಪ್ರಶ್ನೋತ್ತರ ನಡೆಸು ವುದರ ಮೂಲಕ ಸೋನಂ ಈ ಸಂತೋಷ ವನ್ನು ಆಚರಿಸಿ ಕೊಂಡಿ ದ್ದಾರೆ.

‘ಯಾಹೂ... ಎಪ್ಪತ್ತು ಲಕ್ಷ ಹಿಂಬಾಲಕರು..!! ಪ್ರಶ್ನೋತ್ತರ ಅವಧಿಗೆ ಸಿದ್ಧರಾಗಿ..’ ಎಂದು ಅವರು ಅಭಿಮಾನಿ ಗಳನ್ನುದ್ದೇಶಿಸಿ ಟ್ವೀಟ್‌ ಮಾಡಿದ್ದಾರೆ. ತಮ್ಮ ವಿಶಿಷ್ಟ ಉಡುಗೆ ಶೈಲಿಯಿಂದಲೇ ಹೆಸರು ಗಳಿಸಿರುವ ಅನಿಲ್‌ ಕಪೂರ್‌ ಪುತ್ರಿ ಸೋನಂ, ಸಂಜಯ್‌ ಲೀಲಾ ಬನ್ಸಾಲಿ ಅವರ ಜತೆ ‘ಬ್ಲಾಕ್‌’ ಚಿತ್ರಕ್ಕೆ ಸಹಾಯಕ  ನಿರ್ದೇಶಕಿಯಾಗಿ ಕೆಲಸ ಮಾಡುವುದರ ಮೂಲಕ ವೃತ್ತಿಬದುಕನ್ನು ಆರಂಭಿಸಿದವರು.

2007ರಲ್ಲಿ ಬನ್ಸಾಲಿ ನಿರ್ದೇಶನದ ‘ಸಾವರಿಯಾ’ ಚಿತ್ರದ ಮೂಲಕ ನಟನೆಗೆ ಇಳಿದ ಇವರು, ‘ಡೆಲ್ಲಿ 6’ ಚಿತ್ರದ ಮೂಲಕವೂ ಗಮನ ಸೆಳೆದಿದ್ದರು. ಸದ್ಯ ಸಲ್ಮಾನ್‌ ಖಾನ್‌ ಅವರೊಂದಿಗೆ ‘ಪ್ರೇಮ್‌ ರತನ್‌ ಧನ್‌ ಪಾವೋ’ ಮತ್ತು ರಾಮ್‌ ಮಧ್ವಾನಿ ನಿರ್ದೇಶನದ ವ್ಯಕ್ತಿಕಥೆಯನ್ನು ಆಧರಿಸಿದ ಸಿನಿಮಾ ‘ನೀರ್ಜಾ ಭನೋಟ್‌’ನಲ್ಲಿ  ಬ್ಯುಸಿಯಾಗಿದ್ದಾರೆ.

 ‘ನೀರ್ಜಾ ಭನೋಟ್‌ ಚಿತ್ರದಲ್ಲಿ ಸೋನಂ ನೀರ್ಜಾ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು 1986ರಲ್ಲಿ ಭಯೋತ್ಪಾದಕರು ಅಪಹರಿಸಿದ ವಿಮಾನದಲ್ಲಿನ ಪ್ರಯಾಣಿಕರ ಜೀವ ಉಳಿಸುವ ಯತ್ನದಲ್ಲಿ ತಾವು ಪ್ರಾಣ ಕಳೆದುಕೊಂಡ ಧೀರ ಮಹಿಳೆಯ ಬದುಕನ್ನು ಆಧರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT