ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋನಿಯಾ ಕಪ್ಪಗಿದ್ದರೆ ನಾಯಕತ್ವ ಸಿಗುತ್ತಿತ್ತೇ?

Last Updated 1 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಹಾಜಿಪುರ (ಬಿಹಾರ): ‘ರಾಜೀವ್‌ ಗಾಂಧಿ ಅವರು ನೈಜೀರಿಯಾದ (ಕಪ್ಪು) ಯುವತಿಯನ್ನು ಮದುವೆಯಾಗಿದ್ದಿದ್ದರೆ ಕಾಂಗ್ರೆಸ್‌ನವರು ಆಕೆಗೆ ಅಧ್ಯಕ್ಷ ಪಟ್ಟ ನೀಡುತ್ತಿದ್ದರೇ’ ಎಂದು ಕೇಳುವ ಮೂಲಕ ಕೇಂದ್ರ ಸಚಿವ ಗಿರಿರಾಜ್‌ ಸಿಂಗ್‌ ಮತ್ತೊಂದು ವಿವಾದ ಸೃಷ್ಟಿಸಿದ್ದಾರೆ.

ಇದು ಜನಾಂಗೀಯ ನಿಂದನೆಯ ಹೇಳಿಕೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್‌, ಇದಕ್ಕೆ ಗಿರಿರಾಜ್‌ ಅವರು ಕ್ಷಮೆ ಕೇಳಬೇಕು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಗಿರಿರಾಜ್‌ ಅವರನ್ನು ಪಕ್ಷದಿಂದ ಕೂಡಲೇ ವಜಾ ಮಾಡಬೇಕು ಎಂದು ಪಟ್ಟುಹಿಡಿದಿದೆ.

ಸೋನಿಯಾ ಗಾಂಧಿ ಬೆಳ್ಳಗಿರದಿದ್ದರೆ ಕಾಂಗ್ರೆಸ್‌ ಪಕ್ಷವು ಅವರ ನಾಯಕತ್ವವನ್ನು ಒಪ್ಪಿಕೊಳ್ಳುತ್ತಿತ್ತೇ ಎಂದು ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಸಚಿವ ಗಿರಿರಾಜ್‌ ಸಿಂಗ್‌  ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡುತ್ತ ಪ್ರಶ್ನಿಸಿದ್ದರು.
ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ದೀರ್ಘಕಾಲ ರಜೆಯ ಮೇಲೆ ತೆರಳಿರುವುದನ್ನೂ ಅವರು ಟೀಕಿಸಿದ್ದರು.
ರಾಹುಲ್‌ ಅನುಪಸ್ಥಿತಿಯನ್ನು ನಾಪತ್ತೆಯಾದ ಮಲೇಷ್ಯಾ ವಿಮಾನಕ್ಕೆ ಹೋಲಿಸಿದ್ದರು.

‘ನಮ್ಮ ಬದಲು ಕಾಂಗ್ರೆಸ್‌ ಅಧಿಕಾರದಲ್ಲಿದ್ದಿದ್ದರೆ, ರಾಹುಲ್‌ ಗಾಂಧಿ ಪ್ರಧಾನಿಯಾಗಿದ್ದಿದ್ದರೆ, ಯಾವುದೋ ಕಾರಣಕ್ಕೆ ಪ್ರಧಾನಿ 47

ಸಚಿವರೊಬ್ಬರು ಇಂತಹ ಹೇಳಿಕೆ ನೀಡಿರುವುದು ದುರದೃಷ್ಟಕರ. ಭಾರತ ಹಾಗೂ ನೈಜೀರಿಯಾ ಮಧ್ಯೆ ಉತ್ತಮ ಬಾಂಧ್ಯವ ಇದೆ. ಹೀಗಿರುವಾಗ ಇಂಥ ಹೇಳಿಕೆಯನ್ನು ನಿರೀಕ್ಷಿಸಿರಲಿಲ್ಲ
ಒ.ಬಿ.ಒಕೊಂಗೊರ್‌
ನೈಜೀರಿಯಾ ರಾಯಭಾರಿ

ಇದು ನಾಚಿಕೆಗೇಡಿನ ಹೇಳಿಕೆ. ಮೋದಿ ಅವರು ಇಂಥ ವ್ಯಕ್ತಿಗಳನ್ನೆಲ್ಲ ತಮ್ಮ ಸರ್ಕಾರದಲ್ಲಿ ಇಟ್ಟುಕೊಂಡಿದ್ದಾರೆ
ಮಲ್ಲಿಕಾರ್ಜುನ ಖರ್ಗೆ
ಕಾಂಗ್ರೆಸ್ ನಾಯಕ

ಸ್ತ್ರೀಯರನ್ನು ದ್ವೇಷಿಸುವ  ಹಾಗೂ ಪುರುಷ ಪ್ರಧಾನ ಮನಸ್ಥಿತಿಯ ಹೇಳಿಕೆ
ಕವಿತಾ ಕೃಷ್ಣನ್‌
ಅಖಿಲ ಭಾರತ ಪ್ರಗತಿಪರ ಮಹಿಳೆಯರ ಒಕ್ಕೂಟದ ಕಾರ್ಯದರ್ಶಿ

ದಿನಗಳಿಗೂ ಹೆಚ್ಚು ಕಾಲ ಕಣ್ಮರೆಯಾಗಿದ್ದಿದ್ದರೆ ಏನಾಗುತ್ತಿತ್ತು ಎನ್ನುವುದನ್ನು ಊಹಿಸಿಕೊಳ್ಳಿ’ ಎಂದು ಲೇವಡಿ ಮಾಡಿದ್ದರು.

‘ನಾಪತ್ತೆಯಾದ ಮಲೇಷ್ಯಾ ವಿಮಾನ ಈಗಲೂ ಸಿಕ್ಕಿಲ್ಲ. ಅದೇ ರೀತಿ ರಾಹುಲ್‌ ಸುಳಿವು ಇಲ್ಲ. ಅವರು ಬಜೆಟ್‌ ಅಧಿವೇಶನದಲ್ಲಿ ಭಾಗವಹಿಸಲಿಲ್ಲ. ಕಾಂಗ್ರೆಸ್‌ನಲ್ಲಿ ಯಾರೂ ಈ ಬಗ್ಗೆ ಬಾಯಿ ಬಿಡುತ್ತಿಲ್ಲ. ನಿಜಕ್ಕೂ ಇದು ಕಾಂಗ್ರೆಸ್‌ ದುರಾದೃಷ್ಟ. ದೇಶಕ್ಕೆ ಒಂದು ತಮಾಷೆ’ ಎಂದಿದ್ದರು.

ತಮ್ಮ ಹೇಳಿಕೆ ವಿವಾದ ಸೃಷ್ಟಿಸುತ್ತಿದ್ದಂತೆಯೇ ಎಚ್ಚೆತ್ತುಕೊಂಡ  ಗಿರಿರಾಜ್‌ ಸಿಂಗ್‌, ‘ನನ್ನ ಮಾತಿನಿಂದ ಸೋನಿಯಾ ಹಾಗೂ ರಾಹುಲ್‌ ಅವರಿಗೆ ನೋವಾಗಿದ್ದರೆ ಅದಕ್ಕಾಗಿ ವಿಷಾದಿಸುತ್ತೇನೆ’ ಎಂದಿದ್ದಾರೆ.

‘ನಾನು ಖಾಸಗಿಯಾಗಿ ಮಾತನಾಡಿದ್ದನ್ನು (ಆಫ್‌ ದಿ ರೆಕಾರ್ಡ್‌) ಮಾಧ್ಯಮಗಳು ದೊಡ್ಡದು ಮಾಡಿವೆ’ ಎಂದೂ ಅವರು ದೂರಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಕೂಡ ಗಿರಿರಾಜ್‌ ಸಿಂಗ್‌ ವಿವಾದಿತ ಹೇಳಿಕೆ ನೀಡಿದ್ದರು.  ನರೇಂದ್ರ ಮೋದಿ ಅವರನ್ನು  ವಿರೋಧಿಸುವವರು ಪಾಕಿಸ್ತಾನಕ್ಕೆ ತೊಲಗಬೇಕು ಎಂದಿದ್ದರು.

‘ಕೀಳು ಅಭಿರುಚಿಯ ಹೇಳಿಕೆ’
ನವದೆಹಲಿ ವರದಿ
: ಗಿರಿರಾಜ್‌ ಸಿಂಗ್‌ ಹೇಳಿಕೆಗೆ ಕಾಂಗ್ರೆಸ್‌ ಹಾಗೂ ವಿವಿಧ ಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.  ನರೇಂದ್ರ ಮೋದಿ ಅವರು ಸಿಂಗ್‌ ಅವರನ್ನು ವಜಾ ಮಾಡಬೇಕು ಎಂದು ಎಐಸಿಸಿ ಹೇಳಿಕೆಯಲ್ಲಿ ಒತ್ತಾಯಿಸಲಾಗಿದೆ.
 

ಸಿಂಗ್ ಹೇಳಿಕೆಯನ್ನು ಒಪ್ಪುವುದಕ್ಕೆ ಸಾಧ್ಯವೇ ಇಲ್ಲ. ಅತಿರೇಕದ ಹಾಗೂ ಕೀಳು ಅಭಿರುಚಿಯ ಈ ಮಾತನ್ನು ನಾವು ಖಂಡಿಸುತ್ತೇವೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

‘ನರೇಂದ್ರ ಮೋದಿ ಅವರನ್ನು ಓಲೈಸುವ ಭರದಲ್ಲಿ ಗಿರಿರಾಜ್‌ ಸಿಂಗ್‌ ಲಂಗುಲಗಾಮಿಲ್ಲದೇ ಮಾತನಾಡುತ್ತಿದ್ದಾರೆ. ಬಿಜೆಪಿಯಲ್ಲಿ ನೈತಿಕತೆ ಕುಸಿದಿದೆ ಎನ್ನುವುದನ್ನು ಇದು ತೋರಿಸುತ್ತದೆ. ಇಂಥ ಹೇಳಿಕೆಗಳನ್ನು ನೀಡುವುದಕ್ಕಾಗಿಯೇ ಮೋದಿ ಅವರು ತಮ್ಮ ಸಂಪುಟದಲ್ಲಿ ಗಿರಿರಾಜ್‌ ಅವರನ್ನು ಇರಿಸಿಕೊಂಡಿದ್ದಾರೆ. ಬಿಜೆಪಿಗೆ ಬಿಹಾರದಲ್ಲಿ  ಇವರಿಗಿಂತ ಉತ್ತಮ ಮುಖಂಡರು ಸಿಗುತ್ತಿಲ್ಲವೇನೋ’ ಎಂದು ಕಾಂಗ್ರೆಸ್‌ ಹಿರಿಯ ಮುಖಂಡ ದಿಗ್ವಿಜಯ್‌ ಸಿಂಗ್‌ ಹೇಳಿದ್ದಾರೆ.

ಮೋದಿ ಸರ್ಕಾರದಲ್ಲಿ ಯಾವ ರೀತಿಯ ವಿಚಿತ್ರ ಪ್ರಾಣಿಗಳು ಇವೆ ಎನ್ನುವುದಕ್ಕೆ ಈ ಹೇಳಿಕೆಯೇ ಸಾಕ್ಷಿ ಎಂದು ಮುಖಂಡ  ಮನೀಷ್‌ ತಿವಾರಿ ಲೇವಡಿ ಮಾಡಿದ್ದಾರೆ.

ಈ ಹೇಳಿಕೆ ಕುರಿತಂತೆ ಮೋದಿ ಅವರ ಮೌನವನ್ನು ಪ್ರಶ್ನಿಸಿರುವ ಸಿಪಿಎಂ ನಾಯಕಿ ಬೃಂದಾ ಕಾರಟ್‌,  ಮೋದಿ ಅವರ ನಾಯಕತ್ವದಲ್ಲಿ ಈ ರೀತಿ ಕೆಟ್ಟ ಹೇಳಿಕೆ ಹೊರಬೀಳುವುದು ಅಚ್ಚರಿ ತರುತ್ತದೆ ಎಂದಿದ್ದಾರೆ.

ನಿಜಕ್ಕೂ ಮೋದಿ ಅವರು ಇದನ್ನೆಲ್ಲ ಯಾವ ರೀತಿ ನಿಭಾಯಿಸುತ್ತಾರೆ ಎನ್ನುವುದು ಕಳವಳದ ಸಂಗತಿಯಾಗಿದೆ.  ಇದನ್ನು ಅವರಿಗೇ ಬಿಟ್ಟುಬಿಡೋಣ ಎಂದು ಬಿಜೆಪಿ ನಾಯಕಿ ಕಿರಣ್‌ ಬೇಡಿ ಹೇಳಿದ್ದಾರೆ.

‘ಈ ರೀತಿ ಹೇಳಿಕೆ ನೀಡುವುದು  ಕೀಳು ರಾಜಕೀಯ’ ಎಂದು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಅವರು ಕಟುವಾಗಿ ಟೀಕಿಸಿದ್ದಾರೆ.

ಪ್ರತಿಭಟನೆ
ಪಟ್ನಾ (ಪಿಟಿಐ):
ಗಿರಿರಾಜ್‌ ಸಿಂಗ್‌ ಅವರ ಹೇಳಿಕೆಯನ್ನು ಖಂಡಿಸಿ ಯುವ ಕಾಂಗ್ರೆಸ್‌ ಕಾರ್ಯಕರ್ತರು ಅವರ ಮನೆ ಮೇಲೆ ಮೊಟ್ಟೆ ಹಾಗೂ ಟೊಮೆಟೊ ಎಸೆದು ಪ್ರತಿಭಟನೆ ನಡೆಸಿದರು.

‘ಇದು ಪ್ರತಿಭಟನೆಯ ಪೂರ್ವಭಾವಿ ಪ್ರದರ್ಶನ ಅಷ್ಟೆ. ಸಚಿವರು ಪಟ್ನಾಗೆ ಬಂದಾಗ ನಾವು  ಇಡೀ ಸಿನಿಮಾ ತೋರಿಸುತ್ತೇವೆ’ ಎಂದು  ಬಿಹಾರ ಯುವ ಕಾಂಗ್ರೆಸ್‌ ಅಧ್ಯಕ್ಷ ಕುಮಾರ್‌ ಆಶಿಷ್‌ ಎಚ್ಚರಿಕೆ ನೀಡಿದ್ದಾರೆ. ಪ್ರತಿಭಟನೆಯ ಕಾರಣ ಗಿರಿರಾಜ್‌ ಸಿಂಗ್‌ ಮನೆಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT