ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಕ್ವಾಷ್: ಎಂಟರ ಘಟ್ಟಕ್ಕೆ ಜೋಶ್ನಾ

Last Updated 30 ಜುಲೈ 2015, 19:34 IST
ಅಕ್ಷರ ಗಾತ್ರ

ಮೆಲ್ಬರ್ನ್‌ (ಪಿಟಿಐ):  ಭಾರತದ ಜೋಶ್ನಾ ಚಿಣ್ಣಪ್ಪ, ಕುಶ್‌ಕುಮಾರ್ ಮತ್ತು ಮಹೇಶ್ ಮನಗಾಂವ್ಕರ್ ಗುರುವಾರ   ವಿಕ್ಟೋರಿಯ ಓಪನ್ ಸ್ಕ್ವಾಷ್ ಟೂರ್ನಿಯ ಎಂಟರ ಘಟ್ಟಕ್ಕೆ ಪ್ರವೇಶಿಸಿದರು.

ಮೂರನೇ ಶ್ರೇಯಾಂಕದ ಆಟಗಾರ್ತಿ ಜೋಶ್ನಾ 11–5, 11–5, 11–2ರಿಂದ ಆಸ್ಟ್ರೇಲಿಯಾದ ಸೆಲೆನಾ ಶೇಖ್ ವಿರುದ್ಧ ಗೆದ್ದರು.  ಇದೇ ವಿಭಾಗದಲ್ಲಿ 12ನೇ ಶ್ರೇಯಾಂಕದ ಸಚೀಕಾ ಇಂಗಳೆ 7–11, 2–11, 2–11 ರಿಂದ ನ್ಯೂಜಿಲೆಂಡ್‌ ಆಟಗಾರ್ತಿ ಅಮಂಡಾ ಲ್ಯಾಂಡರ್ಸ್ ಮರ್ಫಿ ವಿರುದ್ಧ ಸೋಲನುಭವಿಸಿದರು.

ಪುರುಷರ ವಿಭಾಗದಲ್ಲಿ ಕುಶ್‌ ಕುಮಾರ್ 8–11, 11–3, 11–6, 11–3 ರಿಂದ ನ್ಯೂಜಿಲೆಂಡ್‌ನ ಕಾಶಿಫ್ ಶುಜಾ ವಿರುದ್ಧ ಜಯಿಸಿ ಕ್ವಾರ್ಟರ್‌ಫೈನಲ್ ಪ್ರವೇಶಿಸಿದರು.  ಇನ್ನೊಂದು ಪಂದ್ಯದಲ್ಲಿ ಮಹೇಶ್ 11-5 11-6 11-7ರಿಂದ ಆಸ್ಟ್ರೇಲಿಯಾದ  ಜೋಶುವಾ ಲಾರ್ಕಿನ್ಸ್‌  ವಿರುದ್ಧ ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT