ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಕ್ವಾಷ್: ಎಟುಕದ ಬಂಗಾರ; ಬೆಳ್ಳಿಗೆ ತೃಪ್ತಿ

Last Updated 23 ಸೆಪ್ಟೆಂಬರ್ 2014, 9:44 IST
ಅಕ್ಷರ ಗಾತ್ರ

ಇಂಚೆನ್ (ಪಿಟಿಐ):  ಭಾರತದ ಸ್ಕ್ವಾಷ್ ಆಟಗಾರ ಸೌರವ್ ಘೋಷಾಲ್ ಇಲ್ಲಿ ನಡೆಯುತ್ತಿರುವ 17ನೇ ಏಷ್ಯನ್ ಕ್ರೀಡಾಕೂಟದ ಪುರುಷರ ಸಿಂಗಲ್ಸ್‌ ವಿಭಾಗದ ಪ್ರಶಸ್ತಿ ಸುತ್ತಿನಲ್ಲಿ ನಿರೀಕ್ಷೆಯಂತೆ ಪದಕವನ್ನು ಗೆದ್ದರು. ಆದರೆ ಕೊನೆಯ ಕ್ಷಣದ ರೋಚಕ ಹೋರಾಟದಲ್ಲಿ ಬಂಗಾರ ಗೆಲ್ಲುವಲ್ಲಿ ವಿಫಲರಾಗಿ ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟರು.

ಮಂಗಳವಾರ ಫೈನಲ್ ಪಂದ್ಯದಲ್ಲಿ ಘೋಷಾಲ್ ಮೊದಲ 2-3ರಲ್ಲಿ ಕುವೈತ್‌ ಅಬ್ದುಲ್ಲಾ ಅಲ್‌ ಮುಜಾಯೆನ್‌ ಎದುರು ಸೋಲು ಕಂಡರು. ಈ ಹೋರಾಟ 88 ನಿಮಿಷಗಳ ಕಾಲ ನಡೆಯಿತು.

ವಿಶ್ವ 16ನೇ ಕ್ರಮಾಂಕದಲ್ಲಿರುವ ಭಾರತದ ಘೋಷಾಲ್‌, ಆರಂಭದಲ್ಲಿ 2-0 ಮುನ್ನಡೆಯಲ್ಲಿದ್ದರು. ನೇರ ಸೆಟ್‌ಗಳಿಂದ ಗೆಲುವು ನಿರೀಕ್ಷಿಸಲಾಗಿತ್ತು. ಆದರೆ ಹಾಗಾಗಲಿಲ್ಲ. ಮೂರನೇ ಗೇಮ್‌ ವೇಳೆಗೆ ಅಬ್ದುಲ್ಲಾ ಚೇತರಿಸಿಕೊಂಡು  ಅಮೋಘ ತಿರುಗೇಟು ನೀಡಿದರು. ಘೋಷಾಲ್‌ ಅವರನ್ನು ಬಂಗಾರದ ಪದಕದ ಸನ್ನಿಹ ಬರದಂತೆ ತಡೆಯುವಲ್ಲಿ ಯಶಸ್ವಿಯಾದರು.

ವಿಶ್ವ 46ನೇ ಕ್ರಮಾಂಕದಲ್ಲಿರುವ ಅಬ್ದುಲ್ಲಾ 10–12, 2–11, 14–12, 11–8, 11–9ರಲ್ಲಿ  ಟೂರ್ನಿಯ ಅಗ್ರ ಶ್ರೇಯಾಂಕದ ಘೋಷಲ್‌ ಅವರನ್ನು ಮಣಿಸಿದರು.

ಮೊದಲ ಎರಡು ಗೇಮ್‌ಗಳಲ್ಲಿ ಹಿನ್ನಡೆ ಹೊಂದಿದ್ದ ಅಬ್ದುಲ್ಲಾ ಬಳಿಕ ಮೂರು ಗೇಮ್‌ಗಳಲ್ಲಿ ಅದ್ಭುತ ಪ್ರದರ್ಶನ ತೋರಿದರು. ಭಾರತದ ಆಟಗಾರ ಒಡ್ಡಿದ ಸವಾಲನ್ನು ಮೆಟ್ಟಿನಿಂತು ಬಂಗಾರಕ್ಕೆ ಮುತ್ತಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT