ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಟಾಸರ್‌, ಫೆರರ್‌ ಹೋರಾಟ ಅಂತ್ಯ

ವಿಂಬಲ್ಡನ್‌ ಟೆನಿಸ್‌ ಟೂರ್ನಿ: ಮೂರನೇ ಸುತ್ತಿಗೆ ನಿಕೊಲಸ್‌
Last Updated 30 ಜೂನ್ 2016, 19:40 IST
ಅಕ್ಷರ ಗಾತ್ರ

ಲಂಡನ್‌ (ಎಎಫ್‌ಪಿ/ರಾಯಿಟರ್ಸ್‌): ಪ್ರಮುಖ ಸ್ಪರ್ಧಿಗಳೆನಿಸಿದ್ದ ಸ್ಪೇನ್‌ನ ಡೇವಿಡ್‌ ಫೆರರ್‌ ಮತ್ತು ಮತ್ತು ಸಮಂತಾ ಸ್ಟಾಸರ್‌ ವಿಂಬಲ್ಡನ್‌ ಟೆನಿಸ್‌ ಟೂರ್ನಿಯ ಸಿಂಗಲ್ಸ್‌ನ ಎರಡನೇ ಸುತ್ತಿನ ಪಂದ್ಯದಲ್ಲಿಯೇ ಸೋಲು ಕಂಡಿ ದ್ದಾರೆ. ಇದರಿಂದಾಗಿ ಟೂರ್ನಿಯಲ್ಲಿ ಇವರ ಹೋರಾಟ ಅಂತ್ಯ ಕಂಡಿದೆ.

34 ವರ್ಷದ ಫೆರರ್‌ ಫ್ರೆಂಚ್ ಓಪನ್‌ ಟೂರ್ನಿಯಲ್ಲಿ ಫೈನಲ್ ತಲುಪಿದ್ದರು. ಇದು ಗ್ರ್ಯಾಂಡ್‌ ಸ್ಲಾಮ್‌ ಟೂರ್ನಿಯಲ್ಲಿ ಅವರ ಉತ್ತಮ ಸಾಧನೆ ಎನಿಸಿದೆ. ವಿಂಬ ಲ್ಡನ್‌ನಲ್ಲಿ 2012 ಮತ್ತು 2013ರ ಟೂರ್ನಿಯಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇ ಶಿಸಿದ್ದು ಹಿಂದಿನ ಶ್ರೇಷ್ಠ ಸಾಧನೆಯಾಗಿದೆ. ಇಲ್ಲಿ ಗುರುವಾರ ನಡೆದ ಪುರುಷರ ವಿಭಾಗದ ಎರಡನೇ ಸುತ್ತಿನ ಪಂದ್ಯದಲ್ಲಿ ಫೆರರ್‌ 1–6, 4–6, 3–6ರಲ್ಲಿ ಫ್ರಾನ್ಸ್‌ನ ನಿಕೊಲಸ್‌ ಮಹುತ್‌ ವಿರುದ್ಧ ಮಣಿದರು.

ಪುರುಷರ ವಿಭಾಗದ ಇನ್ನಷ್ಟು ಎರಡನೇ ಸುತ್ತಿನ ಪಂದ್ಯಗಳಲ್ಲಿ ಕೆನಡಾದ  ಮಿಲೊಸ್‌ ರಾಯೊನಿಕ್‌ 7–6, 6–4, 6–2ರಲ್ಲಿ ಇಟಲಿಯ ಆ್ಯಂಡ್ರೆಸ್‌ ಸೆಪ್ಪಿ ಮೇಲೂ, ಅಮೆರಿಕದ ಸ್ಟೀವ್‌ ಜಾನ್ಸನ್‌ 6–1, 6–7, 6–3ರಲ್ಲಿ ಫ್ರಾನ್ಸ್‌ನ ಜೆರ್ಮಿ ಚಾರ್ಡಿ ವಿರುದ್ಧವೂ, ಅಮೆರಿ ಕದ ಜಾಕ್‌ ಸಾಕ್‌ 6–1, 6–3, 6–7ರಲ್ಲಿ ನೆದರ್ಲೆಂಡ್ಸ್‌ನ ರಾಬಿನ್‌ ಹಾಸೆ ಮೇಲೂ, ಸ್ಲೋವಾಕಿಯಾದ ಲೂಕಸ್‌ ಲ್ಯಾಕೊ 6–3, 3–6, 7–6ರಲ್ಲಿ ಕ್ರೊವೇ ಷ್ಯಾದ ಇವಾ ಕಾರ್ಲೊವಿಕ್‌ ವಿರುದ್ಧವೂ, ರಷ್ಯಾದ ಆ್ಯಂಡ್ರೆ ಕುಜ್ನೋತ್ಸವಾ 6–3, 6–4, 6–4ರಲ್ಲಿ ಲುಕ್ಸೆಂಬರ್ಗ್‌ನ ಗಿಲ್ಲೆಸ್‌ ಮುಲ್ಲೆರ್ ಮೇಲೂ, ಫ್ರಾನ್ಸ್‌ನ ಹ್ಯೂಗಸ್‌ ಹರ್ಬರ್ಟ್‌  3–6, 7–6, 7–6, 6–2ರಲ್ಲಿ  ದಾಮಿರ್‌ ಜುಮಾಹರ್‌ ವಿರುದ್ಧವೂ, ಉಜ್‌ಬೇಕಿಸ್ತಾನದ ಡೆನಿಸ್‌ ಇಸ್ತಾಮಿನ್‌ 6–4, 7–6, 6–2ರಲ್ಲಿ ಸ್ಪೇನ್‌ನ ನಿಕೊ ಲಸ್‌ ಅಲ್ಮಾರ್ಗೊ ಮೇಲೂ ಗೆದ್ದು ಮೂರನೇ ಸುತ್ತು ಪ್ರವೇಶಿಸಿದರು.

ಇದೇ ವಿಭಾಗದ ಇನ್ನಷ್ಟು ಸಿಂಗಲ್ಸ್  ಹಣಾಹಣಿಗಳಲ್ಲಿ ಬೆಲ್ಜಿಯಂನ ಡೇವಿಡ್‌ ಗೋಫಿನ್‌ 6–4, 6–0, 6–3ರಲ್ಲಿ ಫ್ರಾನ್ಸ್‌ನ ಎಡ್ವರ್ಡ್‌ ರೋಜರ್‌ ವೆಸ್ಸೆಲಿನ್‌ ಮೇಲೂ, ಡೇನಿಯಲ್‌ ಎವನ್ಸ್‌ 7–6, 6–4, 6–1ರಲ್ಲಿ ಅಲೆಕ್ಸಾಂಡರ್‌ ಡೊಗೊ ಪೊಲೊವ್‌ ವಿರುದ್ಧವೂ, ಅಮೆರಿಕದ ಸ್ಯಾಮ್‌ ಕ್ವಾರಿ 6–4, 6–3, 6–2ರಲ್ಲಿ ಥಾಮಜ್‌ ಬೆಲುಕಿ ಮೇಲೂ ಗೆದ್ದರು.

ಸ್ಟಾಸರ್‌ಗೂ ನಿರಾಸೆ: ಒಂದು ಸಲ ಗ್ರ್ಯಾಂಡ್ ಸ್ಲಾಮ್‌ ಟೂರ್ನಿಯ ಸಿಂಗಲ್ಸ್‌ ನಲ್ಲಿ ಪ್ರಶಸ್ತಿ ಜಯಿಸಿರುವ ಆಸ್ಟ್ರೇಲಿಯಾದ ಸಮಂತಾ ಸ್ಟಾಸರ್‌ ಕೂಡ ಎರಡನೇ ಸುತ್ತಿನ ಹಣಾಹಣಿಯಲ್ಲಿ ನಿರಾಸೆ ಕಂಡರು.

ಹದಿನಾಲ್ಕನೇ ಶ್ರೇಯಾಂಕ ಹೊಂದಿರುವ ಈ ಆಟಗಾರ್ತಿ 4–6, 2–6ರಲ್ಲಿ ಜರ್ಮನಿಯ ಸಬಿನಿ ಲಿಸಿಕಿ ಎದುರು ಸೋತರು. ಸ್ಟಾಸರ್‌ 2009, 2013 ಮತ್ತು 2015ರ ವಿಂಬಲ್ಡನ್‌ ಟೂರ್ನಿಯಲ್ಲಿ ಮೂರನೇ ಸುತ್ತಿನಲ್ಲಿಯೇ ನಿರಾಸೆ ಕಂಡರು.

ಮೂರನೇ ಸುತ್ತಿಗೆ ಹಲೆಪ್‌: ಎರಡು ವರ್ಷಗಳ ಹಿಂದೆ ವಿಂಬಲ್ಡನ್‌ ಟೂರ್ನಿ ಯಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದ  ಸಿಮೊನಾ ಹಲೆಪ್‌ ಗುರುವಾರ ಮೂರನೇ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ. ಎರ ಡನೇ ಸುತ್ತಿನ ಹಣಾಹಣಿಯಲ್ಲಿ  ರುಮೇ ನಿಯಾದ ಆಟಗಾರ್ತಿ 6–1, 6–1ರಲ್ಲಿ ಇಟಲಿಯ ಫ್ರಾನ್ಸಿಸ್ಕಾ ಸಯಿವೊನಾ  ವಿರುದ್ಧ ಗೆಲುವು ಪಡೆದರು.

ಹಲೆಪ್‌ ಗ್ರ್ಯಾಂಡ್‌ ಸ್ಲಾಮ್‌ ಟೂರ್ನಿ ಯಲ್ಲಿ ಒಮ್ಮೆಯೂ ಪ್ರಶಸ್ತಿ ಗೆದ್ದಿಲ್ಲ. 2014ರಲ್ಲಿ ಫ್ರೆಂಚ್‌ ಓಪನ್‌ ಟೂರ್ನಿ ಯಲ್ಲಿ ಪ್ರಶಸ್ತಿ ಸುತ್ತು ಪ್ರವೇಶಿಸಿದ್ದೇ ಅವರ ಇದುವರೆಗಿನ ಉತ್ತಮ ಸಾಧನೆಯೆ ನಿಸಿದೆ.  ಈ ಆಟಗಾರ್ತಿ ಹಿಂದಿನ ವರ್ಷ ಅಮೆರಿಕ ಟೂರ್ನಿಯಲ್ಲಿಯೂ ನಾಲ್ಕರ ಘಟ್ಟ ತಲುಪಿದ್ದರು.

ಮಹಿಳಾ ವಿಭಾಗದ ಸಿಂಗಲ್ಸ್‌ನ ಇನ್ನಷ್ಟು ಎರಡನೇ ಸುತ್ತಿನ ಪಂದ್ಯಗಳಲ್ಲಿ ಜಪಾನ್‌ನ ಮಿಸಾಕಿ ಡೊಯಿ 7–6, 5–3ರಲ್ಲಿ ಜೆಕ್‌ ಗಣರಾಜ್ಯದ ಕರೊಲಿನಾ ಪ್ಲಿಸ್ಕೋವಾ ಮೇಲೂ, ಅಮೆರಿಕದ ಮ್ಯಾಡಿಸನ್‌ ಕೀಸ್‌ 6–4, 4–6, 6–3ರಲ್ಲಿ ಬೆಲ್ಜಿಯಂನ ಕ್ರಿಸ್ಟಿಯನ್‌ ಫ್ಲಿಪ್‌ಕಿನ್ಸ್‌ ವಿರು ದ್ಧವೂ, ನೆದರ್ಲೆಂಡ್ಸ್‌ನ ಕಿಕಿ ಬೆರ್ಥನ್ಸ್‌ 6–4, 6–4ರಲ್ಲಿ ಜರ್ಮನಿಯ ಮೊನಾ ಬಾರ್ಥೆಲ್‌ ಮೇಲೂ, ಅನ್ನಾ ಲಿನಾ ಫ್ರೀಡ್ಸಮ್ 6–4, 7–6ರಲ್ಲಿ ರಷ್ಯಾದ ಎಕ್ತರಿನಾ ಅಲೆಕ್ಸಾಂಡ್ರೊವಾ ವಿರುದ್ಧವೂ ಗೆಲುವು ಸಾಧಿಸಿದರು.

ಇನ್ನಷ್ಟು ಪ್ರಮುಖ ಪಂದ್ಯಗಳಲ್ಲಿ ಕಜಕಸ್ತಾನದ ಯರಸ್ಲೋವಾ ಶ್ವಡೋವಾ 6–2, 3–6, 6–4ರಲ್ಲಿ ಉಕ್ರೇನ್‌ನ ಎಲಿನಾ ಸ್ವಟಿಲೋನಾ ಮೇಲೂ, ಜರ್ಮ ನಿಯ ಏಂಜಲಿಕ್‌ ಕೆರ್ಬರ್‌ 6–1, 6–4 ರಲ್ಲಿ  ವಾರ್ವಾರಾ ಲೊಪ್ಕೆ ಹಕೊ ವಿರುದ್ಧವೂ ಗೆಲುವು ಸಾಧಿಸಿದರು.

ಮೂರನೇ ಸುತ್ತಿಗೆ ವೀನಸ್‌
ಜಯದ ಓಟದಲ್ಲಿ ಸಾಗಿರುವ ವೀನಸ್‌ ವಿಲಿಯಮ್ಸ್ ಸಿಂಗಲ್ಸ್ ವಿಭಾಗದಲ್ಲಿ ಮೂರನೇ ಸುತ್ತು ಪ್ರವೇಶಿಸಿದ್ದಾರೆ.

ಈ ಆಟಗಾರ್ತಿ 7–5, 4–6, 6–ರಲ್ಲಿ  ಮಾರಿಯಾ ಸಕ್ಕಾರ ವಿರುದ್ಧ ಜಯ ಪಡೆದರು. ಮಾರಿಯಾ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಗೆಲುವು ಪಡೆದು ಮುಖ್ಯ ಸುತ್ತು ಪ್ರವೇಶಿಸಿದ್ದರು.

36 ವರ್ಷದ ವೀನಸ್‌ ಒಟ್ಟು ಏಳು ಸಲ ಗ್ರ್ಯಾಂಡ್ ಸ್ಲಾಮ್‌ ಟೂರ್ನಿಗಳಲ್ಲಿ ಪ್ರಶಸ್ತಿ ಜಯಿಸಿದ್ದಾರೆ. ಐದು ಸಲ ವಿಂಬಲ್ಡನ್‌ ಅಂಗಳದಲ್ಲಿಯೇ ಚಾಂಪಿಯನ್‌ ಆಗಿದ್ದಾರೆ.

2000ರಲ್ಲಿ ಇಲ್ಲಿ ಮೊದಲ ಸಲ ಪ್ರಶಸ್ತಿ ಗೆದ್ದಿದ್ದ ಅವರು ನಂತರ 2001, 2005, 2007 ಮತ್ತು 2008ರಲ್ಲಿ ಟ್ರೋಫಿಗೆ ಮುತ್ತಿಕ್ಕಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ಇವರಿಂದ ಸಿಂಗಲ್ಸ್ ವಿಭಾಗದಲ್ಲಿ ಉತ್ತಮ ಪ್ರದರ್ಶನ ಮೂಡಿ ಬಂದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT