ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಟಿಕ್ಕರ್‌ ಸ್ಪರ್ಶಿಸಿದರೆ ಸಂಗೀತದ ಅಲೆ

Last Updated 17 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ರ್ಮದ ಮೇಲೆ ಹಾಕಿಕೊಳ್ಳಬಹುದಾದ, ಸ್ಪರ್ಶಿಸಬಹುದಾದಂತಹ ಸೂಕ್ಷ್ಮ ಸ್ಟಿಕ್ಕರನ್ನು ತಂತ್ರಜ್ಞರು ಅಭಿವೃದ್ಧಿಪಡಿಸಿದ್ದಾರೆ. ಇದರ ಸಹಾಯದಿಂದ ಮೊಬೈಲ್‌, ಮ್ಯೂಸಿಕ್‌ ಪ್ಲೇಯರ್‌್ಸಗಳಂತಹ ಸಾಧನಗಳನ್ನು ನಿಯಂತ್ರಿಸಬಹುದಾಗಿದೆ.

ಯಾವ ತರಹದ ಚರ್ಮದ ಸ್ಟಿಕ್ಕರ್ ಉಪಯೋಗಿಸುತ್ತೇವೆಯೋ ಅದಕ್ಕೆ ಅನುಗುಣವಾಗಿ ಅದರ ಮೇಲೆ ಒತ್ತಡ ಹಾಕುವ ಮೂಲಕ ಗ್ಯಾಜೆಟ್‌ಗಳನ್ನು, ಸಂಗೀತ ಆಲಿಸುವ ಸಾಧನಗಳನ್ನು ನಿಯಂತ್ರಿಸಬಹುದಾಗಿದೆ. ಉದಾಹರಣೆಗೆ ಒಳಬರುವ ಕರೆ ಸ್ವೀಕರಿಸುವುದು ಅಥವಾ ಮ್ಯೂಸಿಕ್‌ ಪ್ಲೇಯರ್‌ನ ಶಬ್ದವನ್ನು ಹೆಚ್ಚು, ಕಡಿಮೆ ಮಾಡುವುದು.

ಇನ್‌ಪುಟ್‌ ಸ್ಪೇಸ್‌ನಂತೆ ಕಾರ್ಯನಿರ್ವಹಿಸುವ ಸ್ಟಿಕರ್, ನಾವು ನೀಡುವ ಆದೇಶಗಳನ್ನು ಕಾರ್ಯರೂಪಕ್ಕೆ ತಂದು ಮೊಬೈಲ್‌ನಂತಹ ಸಾಧನಗಳನ್ನು ನಿಯಂತ್ರಿಸುವ ಕೆಲಸ ಮಾಡುತ್ತದೆ.

‘ಸ್ಟಿಕ್ಕರ್ ಇನ್‌ಪುಟ್‌ ಸ್ಪೇಸನ್ನು ವಿಸ್ತರಿಸಿಕೊಳ್ಳಲು ಬಳಕೆದಾರರಿಗೆ ಅವಕಾಶ ಮಾಡಿಕೊಡುತ್ತದೆ. ಅವರು ಪ್ರಾಯೋಗಿಕವಾಗಿ ದೇಹದ ಯಾವುದಾದರೂ ಭಾಗದಲ್ಲಿ ಅಂಟಿಸಿಕೊಳ್ಳಬಹುದು ಅಥವಾ ಲೇಪಿಸಿಕೊಳ್ಳಬಹುದು’ ಎಂದು ಸಾರಲ್ಯಾಂಡ್‌ ವಿಶ್ವವಿದ್ಯಾಲಯದ ಸಂಶೋಧಕ ಮಾರ್ಟಿನ್‌ ವೇಗೆಲ್‌ ಹೇಳಿದ್ದಾರೆ.

‘ಐಸ್ಕಿನ್‌’ ತಂತ್ರಜ್ಞಾನ ಈ ರೀತಿ ಕೆಲಸ ನಿರ್ವಹಿಸುವ ಮೂಲಕ ಮಾನವನ ಶರೀರವನ್ನು ತಂತ್ರಜ್ಞಾನದ ನಿಕಟಕ್ಕೆ ತರಲಿದೆ.
ಅವರವರ ಅಭಿರುಚಿಗೆ ತಕ್ಕಂತೆ ಬಳಕೆದಾರರು ಅವರ ಚರ್ಮಕ್ಕೂ ಮೊದಲು ಕಂಪ್ಯೂಟರ್‌ಗಳ ಮೇಲೆ ‘ಐಸ್ಕಿನ್‌’ ಗುರುತು ವಿನ್ಯಾಸ ಮಾಡಿಕೊಳ್ಳಬೇಕು. ಇದಕ್ಕಾಗಿ ಪ್ರತಿಯೊಬ್ಬರು ಸಾಧಾರಣವಾದ ಗ್ರಾಫಿಕ್ಸ್‌ ಪ್ರೊಗ್ರಾಮ್‌ ಹೊಂದುವುದು ಅಗತ್ಯ ಎಂದಿದ್ದಾರೆ ವೇಗೆಲ್‌.

ಉದಾಹರಣೆಗೆ, ಒಂದು ಸ್ಟಿಕ್ಕರ್ ಸಂಗೀತವನ್ನು ಆಲಿಸುವುದಕ್ಕಾಗಿಯೇ ರೂಪಿಸಲಾಗಿದ್ದರೆ, ಇನ್ನೊಂದನ್ನು ದೀರ್ಘಕಾಲದವರೆಗೆ ಸಂಗೀತವನ್ನು ರೆಕಾರ್ಡ್‌ ಮಾಡುವುದಕ್ಕಾಗಿ ವಿನ್ಯಾಸಗೊಳಿಸಲಾಗಿರುತ್ತದೆ.

ಸಂವೇದಕ ಪ್ಯಾಚೆಸ್‌ಗಳನ್ನು ಬಹಳ ಸರಳವಾಗಿ ಉಪಯೋಗಿಸಲು ಮತ್ತು ಹಿಗ್ಗಿಸಲು ಅದರಲ್ಲಿ ಸಿಲಿಕಾನ್‌ ಎಂಬ ವಸ್ತುವನ್ನು ಬಳಸಬಹುದು. ಇದರಿಂದ ಮ್ಯೂಸಿಕ್‌ ಪ್ಲೇಯರನ್ನು ಸರಳವಾಗಿ ಸುತ್ತಿಟ್ಟುಕೊಳ್ಳಬಹುದು ಮತ್ತು ಅದನ್ನು ಕಿಸೆಯಲ್ಲಿ ಇಟ್ಟುಕೊಳ್ಳಬಹುದು ಎನ್ನುತ್ತಾರೆ ಈ ಕುರಿತು ಸಂಶೋಧನೆ ನಡೆಸುತ್ತಿರುವ ತಂಡದ ಮುಖ್ಯಸ್ಥ ಜರ್ಜೆನ್‌ ಸ್ಟೆಮಲ್‌.

‘ಸ್ಟಿಕ್ಕರ್‌ ಮೈಚರ್ಮಕ್ಕೆ ಯಾವುದೇ ಹಾನಿ ಮಾಡದಂತಹ ಸಾಧನವಾಗಿದೆ. ತೊಗಲಿಗೆ ಹೊಂದಿಕೊಂಡು ಹಾಗೆ ಉಳಿದುಕೊಳ್ಳುವ ಅಥವಾ ಅಂಟಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಆದಕಾರಣ ಬಳಕೆದಾರರು ದೇಹದ ಯಾವ ಭಾಗದಲ್ಲಿ ಅದನ್ನು ಅಂಟಿಸಿಕೊಳ್ಳಬೇಕು ಮತ್ತು ಎಷ್ಟು ಅವಧಿವರೆಗೆ ಅದನ್ನು ಹಾಗೆ ಉಳಿಸಿಕೊಳ್ಳಬೇಕು ಎಂಬುದನ್ನು ಮೊದಲೇ ನಿರ್ಧರಿಸಬೇಕು ಎಂಬುದು ಸ್ಟೆಮಲ್‌ ಸಲಹೆ.

ಮ್ಯೂಸಿಕ್‌ ಪ್ಲೇಯರ್‌, ದೂರವಾಣಿ ಕರೆಗಳ ಜೊತೆಗೇ ‘ಐಸ್ಕಿನ್‌’ ತಂತ್ರಜ್ಞಾನವನ್ನು ಇತರೆ ಅಪ್ಲಿಕೇಶನ್‌ಗಳಲ್ಲೂ ಬಳಸಬಹುದಾಗಿದೆ. ಉದಾಹರಣೆಗೆ ಕೀಬೋರ್ಡ್‌ ಸ್ಟಿಕ್ಕರನ್ನು ಯಾವ ಪ್ರಕಾರ ಬಳಸಿ ಅದರಿಂದ ಸಂದೇಶಗಳನ್ನು ಕಳುಹಿಸಬಹುದು.

ಸದ್ಯ ಸಂವೇದಕ ಸ್ಟಿಕ್ಕರ್‌ಗಳನ್ನು ಕೇಬಲ್‌ ಮೂಲಕ ಕಂಪ್ಯೂಟರ್‌ ಜೊತೆಗೆ ಸಂಪರ್ಕ ಕಲ್ಪಿಸಬಹುದು. ಭವಿಷ್ಯದಲ್ಲಿ ಮೈಕ್ರೊಚಿಪ್‌ ಅಭಿವೃದ್ಧಿಪಡಿಸಿ ಅವುಗಳನ್ನು ಚರ್ಮದ ಮೇಲೆ ಲೇಪಿಸಿ ಕೇಬಲ್‌ ಇಲ್ಲದೆಯೇ ಮೊಬೈಲ್‌ ಸೇರಿದಂತೆ ಇತರೆ ಸಾಧನಗಳನ್ನು ಬಳಸಬಹುದು ಎನ್ನುತ್ತಾರೆ ಸ್ಟೆಮಲ್‌.

ಸಂಶೋಧಕರ ತಂಡ ಈ ಮಹತ್ವಕಾಂಕ್ಷಿ ಯೋಜನೆಯನ್ನು ಬರುವ ಏಪ್ರಿಲ್‌ನಲ್ಲಿ ದಕ್ಷಿಣ ಕೊರಿಯಾದ ರಾಜಧಾನಿ ಸೋಲ್‌ನಲ್ಲಿ ನಡೆಯಲಿರುವ ‘ಕಂಪ್ಯೂಟರ್‌ ಹ್ಯೂಮನ್‌ ಇಂಟರ್‍ಯಾಕ್ಷನ್‌’ ಕಾನ್ಫರೆನ್ಸ್‌ನಲ್ಲಿ ಮಂಡಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT