ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ನಾನದ ಕೋಣೆ ಅಲಂಕಾರಕ್ಕೂ ಆ್ಯಪ್‌

Last Updated 25 ಫೆಬ್ರುವರಿ 2014, 19:30 IST
ಅಕ್ಷರ ಗಾತ್ರ

‘ಮನೆ’ ಎಂದರೆ ಅದೊಂದು ಕೇವಲ ಸೂರಷ್ಟೇ ಅಲ್ಲ. ಚಳಿ, ಮಳೆ, ಗಾಳಿಯಿಂದ ರಕ್ಷಣೆ ಪಡೆಯಲೆಂದು ಕಟ್ಟಿಕೊಂಡ ಗೂಡಲ್ಲ. ಅದೊಂದು ಬಗೆಯ ಕಲಾತ್ಮಕ ಕಾವ್ಯ. ಗೀಜಗ ಹಕ್ಕಿಯೂ ಕೂಡ ಸುಂದರವಾಗಿ ಗೂಡನ್ನು ಹೆಣೆಯುತ್ತದೆ. ಅದರಲ್ಲಿನ ಕಲಾತ್ಮಕತೆ ಬಲ್ಲವನೇ ಬಲ್ಲ ಬೆಲ್ಲದ ಸವಿಯ ಎಂಬಂತೆ ಕಲಾ ರಸಿಕರಿಗಷ್ಟೇ ಗೊತ್ತು.

ಹಾಗೆಯೇ, ಮನುಷ್ಯನ ಮನಸ್ಸೂ ಕೂಡ ಸದಾ ಕಲಾತ್ಮಕತೆ ಎಡೆಗೆ ತುಡಿಯುತ್ತಿರುತ್ತದೆ. ಏನಾದರೂ ಹೊಸದು, ಬೇರೆಯವರಿಗಿಂತ ವಿಶಿಷ್ಟವಾದುದು ನಮ್ಮಲ್ಲಿರುಬೇಕು ಎಂದೆನಿಸುತ್ತಿರುತ್ತದೆ. ಇದು ಮನೆಯ ಒಳಾಂಗಣ ವಿನ್ಯಾಸದ ವಿಷಯದಲ್ಲಂತೂ ಕೆಲವರು ಕಲಾ ಸೊಬಗನ್ನೇ ಮೆರೆಯುತ್ತಾರೆ.

ಇದು ಮಲಗುವ ಕೋಣೆ, ಓದುವ ಕೋಣೆ, ಹಜಾರಕ್ಕಷ್ಟೇ ಸೀಮಿತವಲ್ಲ. ಸ್ನಾನದ ಮನೆಯೂ ಚೆಂದವಾಗಿ ಕಾಣಬೇಕು ಎಂದು ಬಹಳಷ್ಟು ಜನರು ಬಯಸುತ್ತಾರೆ. ಇದಕ್ಕೆ ಕೆಲವೊಂದು ಮೊಬೈಲ್ ತಂತ್ರಾಂಶಗಳೂ ಸಾಥ್ ನೀಡುತ್ತವೆ.

ಇವುಗಳಲ್ಲಿ ಮನೆಯೊಳಗೆ ಸ್ನಾನದ ಮನೆ ಎಲ್ಲಿರಬೇಕು? ಅದು ಹೇಗಿರಬೇಕು ? ಎಂಬ ಅಂಶಗಳಿಂದ ಹಿಡಿದು ಅದರೊಳಗಿನ ಪರಿಕರಗಳು ಎಲ್ಲಿ ಮತ್ತು ಹೇಗೆ ಒಪ್ಪ ಓರಣವಾಗಿ ಜೋಡಿಸಿರಬೇಕು ಎಂಬುದರ ಬಗ್ಗೆ ಮಾಹಿತಿ ನೀಡುತ್ತವೆ.

ಅದರಲ್ಲೂ ಸ್ನಾನದ ಮನೆಯೊಳಗಿನ ಕೊಳಾಯಿ, ನೀರಿನ ತೊಟ್ಟಿ, ಬಾತ್ ಟಬ್, ಟವಲ್ ಇಡುವ ಜಾಗ... ಒಂದೇ ಎರಡೇ. ಇವುಗಳಲ್ಲಿ ಇಲ್ಲದ ವಿಚಾರವೇ ಇಲ್ಲ. ಗೋಡೆಗಳಿಗೆ ಯಾವ ಬಣ್ಣ ಇದ್ದರೆ ಚೆನ್ನ, ಅವುಗಳ ಮೇಲಿನ ಚಿತ್ರಗಳ ವಿವಿಧ ವಿನ್ಯಾಸಗಳು, ಅಲ್ಲಿ ತೂಗು ಹಾಕಿಕೊಳ್ಳಬಹುದಾದ ಚಿತ್ರ ಪಟಗಳು ಮೊದಲಾದ ಒಳಾಂಗಣ ಅಲಂಕಾರಕ್ಕೆ ಮಾರ್ಗದರ್ಶನ ಮಾಡುವ ಸಂಕ್ಷಿಪ್ತ ಮಾಹಿತಿಗೆ ಜತೆಗೆ ಅಂತಹ ಚಿತ್ರಗಳನ್ನು ಒದಗಿಸುತ್ತದೆ.

‘ಕಾವ್ಯಂ ಗ್ರಾಹ್ಯತ್ ಅಲಂಕಾರತ್’... ಎಂಬಂತೆ ಕೇವಲ ಕಾವ್ಯ ಮಾತ್ರ ಅಲಂಕಾರಗಳಿಂದ ಗ್ರಾಹ್ಯವಾಗುವುದಿಲ್ಲ. ಬದಲಿಗೆ, ಜಗತ್ತಿನ ಸರ್ವಸ್ವವೂ ಅಲಂಕಾರಗಳಿಂದ ಕಣ್ಮನ ಸೆಳೆಯುತ್ತವೆ. ನಿರಾಂಡಂಭರ ಸುಂದರಿ ಎಂಬ ಪರಿಕಲ್ಪನೆ ನಿಜ. ಆದರೆ, ಎಲ್ಲರೂ ನಿರಾಂಡಂಭರವಾಗಿದ್ದರೆ ಚೆನ್ನವೇ? ಅಲಂಕಾರ ಮಾಡಿಕೊಂಡವರ ಮಧ್ಯೆ ಏನೂ ಆಡಂಬರದ ಅಲಂಕಾರಗಳಿಲ್ಲದ ಮಹಿಳೆ ಗಮನ ಸೆಳೆಯುವುದು ಸಹಜ. ಹಾಗೆಯೇ ಜಗತ್ತಿನ ಎಲ್ಲವೂ ಒಂದಲ್ಲ ಒಂದು ವಿಧದಲ್ಲಿ ಗಮನ ಸೆಳೆಯುತ್ತವೆ. ಅದಕ್ಕೊಂದು ಅದರದೇ ಆದ ಅಲಂಕಾರ, ಚೆಲುವು ಇದ್ದೇ ಇರುತ್ತದೆ. ಗುರುತಿಸುವ ಒಳಗಣ್ಣು ತೆರೆದಿರಬೇಕಷ್ಟೆ.

ಹಾಗೆಯೇ, ಮನೆಯೊಳಗಿನ ಎಲ್ಲಾ ಕೋಣೆಗಳಂತೆ ಸ್ನಾನದ ಕೋಣೆಯೂ ಅತ್ಯಂತ ಮಹತ್ವ. ಬಹುತೇಕ ಸಾಧಕರು ಯೋಚನೆ ಮಾಡುವುದೇ ಈ ವಿಚಾರದಲ್ಲಿ. ಇಲ್ಲಿ ಸಿಗುವ ಏಕಾಂತ ಬಹುಶಃ ಎಲ್ಲೂ ಸಿಗಲಾರದು.

ಸ್ನಾನದ ತೊಟ್ಟಿಯೊಳಕ್ಕೆ ಇಳಿದಾಗ ಅದರಿಂದ ಹೊರಬಿದ್ದ ಹೆಚ್ಚುವರಿ ನೀರನ್ನು ಕಂಡಾಗಲೇ ಆರ್ಕಿಮಿಡೀಸನಿಗೆ ದ್ರವ್ಯರಾಶಿಯ ಸಿದ್ಧಾಂತ ಹೊಳೆದದ್ದು. ಆತ ಅಲ್ಲಿಂದೆದ್ದು ಹುಟ್ಟುಡುಗೆಯಲ್ಲಿ ಹೊರಬಿದ್ದವನೇ ‘ಯುರೇಕಾ.. ಯುರೇಕಾ’ ಎಂದರಚುತ್ತಾ ರಸ್ತೆಗಿಳಿದು ಓಡಿದ್ದು...

ಹೀಗೆ ಸಮಚಿತ್ತತೆ, ಮನಸ್ಸಿಗೆ ನೆಮ್ಮದಿ, ಮೈಗೆ ಬಿಸಿನೀರಿನ ಮುದ ಸಿಗಬೇಕೆಂದರೆ ದಿನದಲ್ಲಿ ಕನಿಷ್ಠ ಒಂದು ಗಂಟೆ ಕಾಲವಾದರೂ ಸ್ನಾನದ ತೊಟ್ಟಿಯೊಳಗೆ ಇಡೀ ಮೈಯನ್ನದ್ದಿ ನಿರಾತಂಕವಾಗಿ ಇದ್ದುಬಿಡಬೇಕು. ಈ ಏಕಾಂತದಲ್ಲಿ ಜೀವನದ ಸಂಕಷ್ಟದ ಬಗೆಗೆ ಆತ ಚಿಂತಿಸಬೇಕು.

ಅದಕ್ಕಾಗಿಯೇ ಸ್ನಾನದ ಮನೆಯ ಸೊಬಗಿನ ಬಗೆಗೆ ಮನುಷ್ಯ ಅತ್ಯಂತ ಹೆಚ್ಚು ತಲೆಕೆಡಿಸಿಕೊಳ್ಳುವುದು. ಇದಕ್ಕೆಂದೇ ಅನೇಕ ವಿನ್ಯಾಸಗಳು ಲಭ್ಯವಿವೆ. ಈ ಬಗ್ಗೆ ಮೊಬೈಲ್ ತಂತ್ರಾಂಶದಿಂದಲೂ ಮಾಹಿತಿ, ಮಾರ್ಗದರ್ಶನ ಲಭ್ಯವಿರುವುದು ಇಂದಿನ ತಂತ್ರಜ್ಞಾನ ಯುಗದ ಬಳುವಳಿ.

Bathroom Decorating Ideas ಎಂಬ ತಂತ್ರಾಂಶವು ನವ ನಾವೀಣ್ಯದ ಸ್ನಾನದ ಮನೆಯ ವಿನ್ಯಾಸದ ಮಾಹಿತಿ ನೀಡುತ್ತದೆ. ಬಹು ಸುಂದರ ವಿನ್ಯಾಸದ ಹಲವು ಬಗೆಯ ಚಿತ್ರಗಳು ಇಲ್ಲಿವೆ. ಮಕ್ಕಳಿಗಾಗಿ, ವಯಸ್ಕರಿಗಾಗಿ, ಆಧುನಿಕ ವಿನ್ಯಾಸಗಳು ಹೀಗೆ ಇದರಲ್ಲಿ ನೂರಾರು ಬಗೆಯ ವಿನ್ಯಾಸಗಳಿವೆ. ಒಟ್ಟು ನೂರು ಬಗೆಯ ವಿನ್ಯಾಸದ ಟಿಪ್ಸ್‌ಗಳು ಇಲ್ಲಿವೆ ಎಂದು ತಂತ್ರಾಂಶ ಹೇಳಿಕೊಂಡಿದೆ. ಇವುಗಳನ್ನು ಬೇರೆಯವರಿಗೆ ಕಳುಹಿಸಬಹುದು, ಸುಲಭವಾಗಿ ಡೌನ್ ಲೋಡ್ ಮಾಡಿಕೊಳ್ಳಬಹುದು.
https://play.google.com/store/apps/details?id=com.zalebox.bathroom.decorating.ideas.s1&hl=en

Bathroom Design 170 Bathrooms:
ಈ ತಂತ್ರಾಂಶವು 170 ಬಗೆಯ ವಿನ್ಯಾಸಗಳ ಮಾಹಿತಿಯನ್ನು ಹೊಂದಿದೆ. ಒಂದೇ ಚಿತ್ರದಲ್ಲಿ ಥಂಬ್‌ನೇಲ್ ಚಿತ್ರದ ನೂರಾರು ತುಣುಕುಗಳು ಇಲ್ಲಿ ಲಭ್ಯವಿದೆ. ವಿನ್ಯಾಸಗಳನ್ನು ಹೆಣೆಯುವ ಮಾಹಿತಿಯೂ ಇಲ್ಲುಂಟು.
https://play.google.com/store/apps/details?id=com.picroapps.book.AOUFHEEFZMTAIXJAZ&hl=en

Best Bathroom Tile Designs:
ಈ ಮೊಬೈಲ್‌ ಆ್ಯಪ್‌ನಲ್ಲಿ ಮೇಲಿನ ತಂತ್ರಾಂಶದಲ್ಲಿ ಇರುವಂತೆ ನೂರಾರು ಬಗೆಯ ಚಿತ್ರಗಳು, ಟಿಪ್ಸ್‌ ಇರುವುದರ ಜತೆಗೇ ಹೆಚ್ಚಿನ ರೆಸ್ಯುಲೇಷನ್ ಚಿತ್ರಗಳೂ ಇರುವುದು ವಿಶೇಷ.ಗ್ಯಾಲರಿಯಲ್ಲಿ ಬೇಕಾದ ಚಿತ್ರಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳಬಹುದಾದ ಸೌಲಭ್ಯವೂ ಇಲ್ಲಿದೆ.
https://play.google.com/store/apps/details?id=droids1.prasad.des.bathtiles&hl=en

-Interior Bathroom Design
https://play.google.com/store/apps/details?id=com.appmk.magazine.AOUHRCSCNUEDXQBX&hl=en
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT