ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ನೂಕರ್‌: ಚಿತ್ರಾಗೆ ಪ್ರಶಸ್ತಿ

Last Updated 22 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಲೀಡ್ಸ್‌ (ಪಿಟಿಐ): ಬೆಂಗಳೂರಿನ ಚಿತ್ರಾ ಮಗಿಮೈರಾಜ್‌ ಇಲ್ಲಿ ನಡೆ ಯುತ್ತಿರುವ ವಿಶ್ವ ಸ್ನೂಕರ್‌ ಚಾಂಪಿ ಯನ್‌ಷಿಪ್‌ನ ಹಿರಿಯರ ವಿಭಾಗ ದಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

ಬಿಲಿಯರ್ಡ್ಸ್‌ನಲ್ಲಿ ನಿರಾಸೆ ಅನುಭವಿಸಿದ್ದ ಚಿತ್ರಾ ಸ್ನೂಕರ್‌ನಲ್ಲಿ ಉತ್ತಮ ಪ್ರದರ್ಶನ ತೋರಿದರು. ಫೈನಲ್‌ ಪಂದ್ಯದಲ್ಲಿ ಅವರು 57-32, 76-16, 42-9 ಫ್ರೇಮುಗಳಿಂದ ಬೆಲಾರಸ್‌ನ ಅಲೆನಾ ಅಸ್ಮೋಲೊವಾ ಎದುರು ಗೆಲುವು ಸಾಧಿಸಿದರು.

ಸೆಮಿಫೈನಲ್‌ ಪಂದ್ಯದಲ್ಲಿ ಚಿತ್ರಾ 58-12, 45-33ರಲ್ಲಿ ಬೆಂಗಳೂರಿನವರೇ ಆದ ಉಮಾದೇವಿ ನಾಗರಾಜ್‌ ವಿರುದ್ಧ ಜಯ ಪಡೆದು ಪ್ರಶಸ್ತಿ ಘಟ್ಟಕ್ಕೆ ಲಗ್ಗೆ ಇಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT