ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪರ್ಧಾತ್ಮಕ ಪರೀಕ್ಷೆಗೆ ಇಂಗ್ಲಿಷ್

ಕಲಿಯೋಣ ಬನ್ನಿ –15
Last Updated 21 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ನಮ್ಮ ಇಂಗ್ಲಿಷ್ ಕಲಿಕೆಯಲ್ಲಿ, ಉತ್ತಮ ಸಂಭಾಷಣೆಯನ್ನೂ ಒಳ್ಳೆಯ ಬರವಣಿಗೆಯನ್ನೂ ಗುರಿಯಾಗಿಟ್ಟುಕೊಂಡು ಅಭ್ಯಾಸ ಮಾಡುವ ಹಿನ್ನೆಲೆಯಲ್ಲೇ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೂ (competitive exams) ನಾವು ಉತ್ತಮವಾದ ಫಲಿತಾಂಶ ಪಡೆಯಲು ಕೆಲವು ಸರಳ ಸೂತ್ರಗಳು ನಮಗೆ ನೆರವಾಗುತ್ತವೆ.

ಸಾಮಾನ್ಯವಾಗಿ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಇಂಗ್ಲಿಷ್ ಭಾಷೆಗೆ ಸಂಬಂಧಿಸಿದಂತೆ ಕೇಳಬಹುದಾದ ಕೆಲವು ಪ್ರಮುಖ ಪ್ರಶ್ನಾ ಪ್ರಕಾರಗಳೆಂದರೆ (question types)
1. Error detection
2. Word analogies
3. Data transformation
4. Comprehension passage and questions related to it
5. Vocabulary related questionss
ಇಂದು Error detectionಗೆ ಸಂಬಂಧಿಸಿದ ಕೆಲವು ಪ್ರಶ್ನೆಗಳು ಹಾಗೂ ಅದರ ವಿಶ್ಲೇಷಣೆಯನ್ನು ತಿಳಿದುಕೊಳ್ಳೋಣ.

Error detectionಗೆ ಸಂಬಂಧಿಸಿದಂತೆ, ಪರೀಕ್ಷೆಯಲ್ಲಿ ಪ್ರಶ್ನೆಗಳನ್ನು ಕೇಳುವ ರೀತಿಯೆಂದರೆ, ಇಂಗ್ಲಿಷ್‌ನಲ್ಲಿ ವಾಕ್ಯವನ್ನು ಕೊಟ್ಟು, ವಾಕ್ಯದ ಯಾವ ಭಾಗದಲ್ಲಿ ತಪ್ಪಿದೆ ಎಂದು ಗುರುತಿಸಬೇಕಾಗಿರುತ್ತದೆ. ಆ ತಪ್ಪುಗಳು ಸಾಮಾನ್ಯವಾಗಿ ವಾಕ್ಯದಲ್ಲಿರುವ articles, prepositions, subject-verb agreement, spelling, question tag gಅಥವಾ degrees of comparisonಗೆ ಸಂಬಂಧಪಟ್ಟದ್ದಾಗಿರುತ್ತವೆ.

ಇಲ್ಲಿನ ಕೆಲವು ಉದಾಹರಣೆಗಳಲ್ಲಿ, articlesಗೆ ಸಂಬಂಧಪಟ್ಟ ತಪ್ಪುಗಳನ್ನು ಹಾಗೂ ಅವುಗಳ ವಿಶ್ಲೇಷಣೆಯನ್ನು ಗಮನಿಸಿ:
1. He is a tallest boy in the class.
     a b      c
ಈ ವಾಕ್ಯದಲ್ಲಿ ಮೂರು ಭಾಗಗಳು  (a, b, c) ಕಂಡುಬರುತ್ತವೆ. ತಪ್ಪಿರುವುದು b ಭಾಗದಲ್ಲಿ. ಇಲ್ಲಿ a tallest boyಗೆ ಬದಲಾಗಿ the tallest boy ಎಂದಿರಬೇಕಿತ್ತು. ಏಕೆಂದರೆ, tallest ಎಂಬ ಪದ shortest, strongest, fastest... ಎಂಬ ಪದಗಳಂತೆ superlative degree adjective ಆಗಿದೆ. ಇಂಗ್ಲಿಷ್ ವ್ಯಾಕರಣ ನಿಯಮದ ಪ್ರಕಾರ, ಯಾವುದೇ superlative degree adjectiveeನ ಹಿಂದೆ the ಎಂಬ article ಮಾತ್ರ ಉಪಯೋಗಿಸಬೇಕು.

2. I met an European the last week.
     a b      c
ಈ ವಾಕ್ಯದ b ಭಾಗದಲ್ಲಿ ತಪ್ಪಿದೆ. ಇಲ್ಲಿ an Europeanಗೆ ಬದಲಾಗಿ a European ಎಂದು ಇರಬೇಕು. ಏಕೆಂದರೆ, European ಎಂಬ ಪದ ಪ್ರಾರಂಭವಾಗುವುದು ಯು(Eu) ಎಂಬ consonant soundನಿಂದ. ಹಾಗಾಗಿ, consonant soundನಿಂದ ಪ್ರಾರಂಭವಾಗುವ ಯಾವುದೇ ಪದದ ಹಿಂದೆ a ಎಂಬ article ಇರಬೇಕೇ ಹೊರತು an ಅಲ್ಲ.

3. He is a honest man
    a      b    
ಈ ವಾಕ್ಯದಲ್ಲಿನ b ಭಾಗದಲ್ಲಿ ತಪ್ಪಿದೆ. Honest ಪದದ ಹಿಂದೆ a ಗೆ ಬದಲಾಗಿ an ಎಂಬ article ಇರಬೇಕು. ಏಕೆಂದರೆ, honest ನಲ್ಲಿನ h ಅಕ್ಷರವು silent ಆಗುರುವುದರಿಂದ, ಅದರ ಉಚ್ಚಾರಣೆ ಆನೆಸ್ಟ್ ಎಂದೇ ಹೊರತು ಹಾನೆಸ್ಟ್ ಅಲ್ಲ. ಹಾಗಾಗಿ, ಅ, ಆ, ಇ, ಈ, ಉ, ಊ, ಎ, ಏ, ಐ, ಒ, ಓ, ಜೌ.. ಎಂಬಂತಹ vowel soundನಿಂದ ಪ್ರಾರಂಭವಾಗುವ ಯಾವುದೇ ಪದದ ಹಿಂದೆ, an ಎಂಬ articleನ ಬಳಕೆ ಸರಿಯಾದುದು.

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ, usage ಮತ್ತು spelling errorsಗೆ ಸಂಬಂಧಿಸಿದಂತೆ ಇಂಗ್ಲಿಷ್ ವಾಕ್ಯಗಳ ವಿಶ್ಲೇಷಣೆಯನ್ನು ತಿಳಿದುಕೊಳ್ಳೋಣ.
1. I met my cousin brother last week.
     a                    b                   c
ಈ ವಾಕ್ಯದ b ಭಾಗದಲ್ಲಿ ತಪ್ಪು ಕಂಡುಬರುತ್ತದೆ. Cousin brotherಗೆ ಬದಲಾಗಿ cousinಎಂದಷ್ಟೇ ಇರಬೇಕು. ಸಂಬಂಧಗಳ ಬಗ್ಗೆ ಮಾತನಾಡುವಾಗ, ಅತ್ತೆಯ ಮಗ ಅಥವಾ ದೊಡ್ಡಪ್ಪ, ಚಿಕ್ಕಪ್ಪನ ಮಗನನ್ನು cousin brother  ಎಂದೂ, ಅತ್ತೆಯ ಮಗಳು, ದೊಡ್ಡಪ್ಪ, ಚಿಕ್ಕಪ್ಪನ ಮಗಳನ್ನು cousin sisterಎಂದೂ, ಸಾಧಾರಣವಾಗಿ ನಾವು ನಮ್ಮ ಆಡುಭಾಷೆಯಲ್ಲಿ ಉಪಯೋಗಿಸುತ್ತೇವೆ. ಆದರೆ, ಶಿಷ್ಟ ಇಂಗ್ಲಿಷ್‌ನ ಪ್ರಕಾರ, ಸರಿಯಾದ ಉಪಯೋಗ (usage) ವೆಂದರೆ, ಅತ್ತೆಯ ಮಗನಾಗಲೀ, ಮಗಳಾಗಲೀ, cousin ಎಂದಷ್ಟೇ ಹೇಳಬೇಕು.

2. The porter carried the luggages.
      a         b         c
ಈ ವಾಕ್ಯದ c ಭಾಗದಲ್ಲಿ ಲೋಪವನ್ನು ಕಾಣಬಹುದು. Luggages ಎಂಬುದರ ಬದಲು luggage ಎಂದಿರಬೇಕು. Suiticase, bag, kitನಂತಹ ಎಷ್ಟೇ ವಸ್ತುಗಳಿದ್ದರೂ, ಎಲ್ಲವನ್ನೂ ಸೇರಿಸಿ liggageeಎಂದು ಬಳಸಬೇಕೇ ಹೊರತು luggages ಎಂದಲ್ಲ. ಈ ನಿಟ್ಟಿನಲ್ಲಿ, ಇದೇ ತರಹದ ಇನ್ನೂ ಕೆಲವು ಪದಗಳ ಬಗ್ಗೆ ಎಚ್ಚರ ವಹಿಸಬೇಕು
– furnitures, informations, peoples, publics ಮುಂತಾದವುಗಳು. ಇವುಗಳ ಬದಲಾಗಿ furniture, information, people, public ಎಂಬ ಪದಗಳು ಸರಿಯಾದ ಬಳಕೆ.

3. By the time I reached the college the principal left.
         a  b                  c
ಈ ವಾಕ್ಯದ c  ಭಾಗದಲ್ಲಿ ತಪ್ಪು ಕಂಡುಬರುತ್ತದೆ. The principal leftಗೆ ಬದಲಾಗಿ the principal had left ಎಂದಿರಬೇಕು. ಭೂತಕಾಲದಲ್ಲಿ ಎರಡು ಕ್ರಿಯೆಗಳು ನಡೆದಿದ್ದರೆ, ಮೊದಲನೆಯ ಕ್ರಿಯೆಗೆ past perfect tense ಅನ್ನೂ ಹಾಗೂ ಎರಡನೆಯ ಕ್ರಿಯೆಗೆ simple past tense ಅನ್ನೂ ಬಳಸಬೇಕು. ಹಾಗಾಗಿ ಮೊದಲೇ ನಡೆದ ಕ್ರಿಯೆಯಾದ the principal had left (past perfect tense) ಸರಿಯಾದ ಬಳಕೆ.

4.He seems week today
     a        b       c
ಈ ವಾಕ್ಯದ b ಭಾಗದಲ್ಲಿ ತಪ್ಪಿದೆ. ಇಲ್ಲಿ weekಗೆ ಬದಲಾಗಿ weakಎಂಬ spelling ಇರಬೇಕು. ‘ವಾರ’ ಎಂಬ ಅರ್ಥವನ್ನು ಕೊಡುವ weekನ ಬದಲಾಗಿ, ‘ನಿಶ್ಶಕ್ತಿ’ ಎಂಬ ಅರ್ಥವನ್ನು ಕೊಡುವ weak ಎಂಬ ಪದ ಇಲ್ಲಿ ಸೂಕ್ತ.

5. I recieved the cheque yesterday.
     a                  b                  c
ಈ ವಾಕ್ಯದ a ಭಾಗದಲ್ಲಿ ತಪ್ಪಿದೆ. recieved ಎಂಬ ಪದದsspelling ತಪ್ಪಾಗಿದೆ ಅದು received ಎಂದಿರಬೇಕು.
6. Our efforts must not go in vein.

      a          b            c
ಈ ವಾಕ್ಯದಲ್ಲಿ  c ಭಾಗದಲ್ಲಿ, vein ಪದದ spelling ತಪ್ಪಿದೆ. ‘ರಕ್ತನಾಳ’ ಎಂಬ ಅರ್ಥವನ್ನು ಕೊಡುವ veinಗೆ ಬದಲಾಗಿ, ‘ವ್ಯರ್ಥ’ ಎಂಬ ಅರ್ಥವನ್ನು ಕೊಡುವ vain ಇಲ್ಲಿ ಸೂಕ್ತವಾದ ಪದ.

ಮಾಹಿತಿಗೆ: 98452 13417 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT