ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪಿನ್ನರ್‌ಗಳೇ ಪ್ರಮುಖರು: ದೋನಿ

Last Updated 20 ಜುಲೈ 2016, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ‘ವೆಸ್ಟ್ ಇಂಡೀಸ್‌ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಸ್ಪಿನ್ನರ್‌ಗಳೇ ಪ್ರಮುಖ ಪಾತ್ರ ನಿಭಾಯಿಸಬೇಕಿದೆ ಎಂದು ಭಾರತ ಏಕದಿನ ತಂಡದ ನಾಯಕ ಮಹೇಂದ್ರ ಸಿಂಗ್ ದೋನಿ ಅಭಿಪ್ರಾಯ ಪಟ್ಟಿದ್ದಾರೆ.

‘ವಿಂಡೀಸ್‌ ನೆಲದಲ್ಲಿನ ಪಿಚ್‌ಗಳು ಸ್ಪಿನ್ನರ್‌ಗಳಿಗೆ ಸಹಾಯಕಾರಿ. ಆದರೆ ವೇಗಿಗಳು ನೆರವಾಗುವುದು ಕಷ್ಟ. ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದುಕೊಳ್ಳಲು ಈಗ ತುಂಬಾ ಪೈಪೋಟಿ ಇರುವ ಕಾರಣ ಆಟಗಾರರ ನಡುವಿನ ಪೈಪೋಟಿ ಕೂಡ ಹೆಚ್ಚಾಗುತ್ತದೆ’ ಎಂದು ಅವರು ನುಡಿದರು.

ಜೊತೆಗೆ ಭಾರತದ ಬ್ಯಾಟಿಂಗ್ ಕ್ರಮಾಂಕದ ಬಗ್ಗೆಯೂ ದೋನಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘ಆರಂಭದ ಆರು ಬ್ಯಾಟ್ಸ್‌ಮನ್‌ಗಳು ಉತ್ತಮ ಸಾಮರ್ಥ್ಯ ಹೊಂದಿದ್ದಾರೆ. ಅವರಲ್ಲಿ ಪ್ರತಿಭೆಯೂ ಇದೆ. ಆದರೆ ವಿದೇಶಿ ನೆಲದಲ್ಲಿ ಹೆಚ್ಚು ಪಂದ್ಯಗಳನ್ನು ಆಡಬೇಕು. ಆಗ ಮಾತ್ರ ಬಲಿಷ್ಠ ತಂಡ ಗಳ ಸವಾಲನ್ನು ಸುಲಭವಾಗಿ ಎದುರಿ ಸಲು ಸಾಧ್ಯವಾಗುತ್ತದೆ’ ಎಂದರು.

‘ಸುಮಾರು ಹತ್ತು ವರ್ಷಗಳಿಂದ ಸತತ ಪ್ರಯಾಣ ಮಾಡುತ್ತಲೇ ಇದ್ದೇನೆ.  ಒಂದಲ್ಲಾ ಒಂದು ಸರಣಿಯಲ್ಲಿ ಆಡಲು ತಿರುಗಾಡಿದ್ದೇನೆ. ಆದ್ದರಿಂದ ನನ್ನ ದೇಹ ಸಾಕಷ್ಟು ದಣಿದಿದೆ. ಇದರಿಂದ ಸಮಸ್ಯೆ ಶುರುವಾಗುತ್ತದೆ. ಈ ಕಾರಣದಿಂದ ದೇಹದ ಆರೋಗ್ಯವನ್ನು ಕಾಪಾಡಿ ಕೊಳ್ಳಲು ಹೆಚ್ಚು ಕಾಳಜಿ ವಹಿಸುತ್ತೇನೆ’ ಎಂದೂ ದೋನಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT