ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮಾರಕಕ್ಕೂ ಮುನ್ನ ಸ್ಮರಣೆ ಆಳವಾಗಲಿ

Last Updated 28 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

‘ಡಾ. ಅನಂತಮೂರ್ತಿಯವರಂತೆ  ನಾನೂ ಸಮಾಜವಾದಿ ಚಿಂತನೆಯ ಪ್ರಭಾವಕ್ಕೆ ಒಳಗಾಗಿದ್ದೇನೆ’ ಎಂದಿದ್ದಾರೆ ಮುಖ್ಯಮಂತ್ರಿ  ಸಿದ್ದರಾಮಯ್ಯನವರು. (ಪ್ರ.ವಾ. ಆ. 23)

ಅನಂತಮೂರ್ತಿಯವರು ಟಿ.ವಿ. ಸಂದರ್ಶನ­ವೊಂದರಲ್ಲಿ ‘ಶ್ರಮದಲ್ಲಿ ನಂಬಿಕೆ ಇರುವ ಬಡವರಿಗೆ  ಈ ರೀತಿ ಕೊಡುಗೆಗಳನ್ನು ನೀಡುವ ಬದಲು ಅವಕಾಶಗಳನ್ನು ಕಲ್ಪಿಸಬೇಕಾಗಿತ್ತು’ ಎಂದಿರು­ವುದು ಅವರ ಗಮನಕ್ಕೆ ಬಂದಿದೆಯೆ? ಮೂಲ ರೂಪದ ಸಮಾಜವಾದ ‘ಉತ್ಪಾದನೆ­ಗಳನ್ನು ರಾಜ್ಯ ವ್ಯವಸ್ಥೆ ಹಂಚಬೇಕು. ಮಕ್ಕಳಿಗೆ ಉಚಿತ­ವಾಗಿ ಆಹಾರ ಮತ್ತು ಶಿಕ್ಷಣ ಕೊಡಬೇಕು’ ಎಂದಿತ್ತು.

ಕಾಂಗ್ರೆಸ್‌ ಸೋಷಲಿಸ್ಟ್ ಪಕ್ಷ ಸ್ಥಾಪಿ­­ಸಿದ್ದ ಕೆಲವರು ಕಾಂಗ್ರೆಸ್ಸಿನಿಂದ ಬೇರ್ಪ­ಟ್ಟಿದ್ದಲ್ಲದೆ ಮುಂದೆ ನೆಹರೂ, ಇಂದಿರಾ ಗಾಂಧಿ ನೀತಿಗಳನ್ನು ವಿರೋಧಿಸಿದ್ದೂ  ಚಾರಿತ್ರಿಕ ಸತ್ಯ. ಅದೆಲ್ಲ ಇರಲಿ, ‘ಅನ್ಯಭಾಗ್ಯ’ಕ್ಕೆ ಬರೋಣ. ನುಚ್ಚು ಅಕ್ಕಿಯನ್ನು, ಹುಳು ಹಿಡಿದುದನ್ನು ಮತ್ತು ಅದು ಪತ್ತೆಯಾಗಿ ಹೊಗೆ ಹಾಕಿಸಿಕೊಂಡು ವಿತರಣೆಯಾಗುವ  ಅಕ್ಕಿಯನ್ನು ಪಡೆಯುವವರು ಭಾಗ್ಯವಂತರೆ?

ನ್ಯಾಯಾಲಯಕ್ಕೆ ಹೋದ ಪ್ರಕರಣ ದೀರ್ಘ­ಕಾಲ ತೆಗೆದುಕೊಳ್ಳಬಹುದು. ಆದರೆ ಇಲಾಖಾ ವಿಚಾರಣೆಯನ್ನು ತ್ವರಿತವಾಗಿ ಮಾಡಬಹು­ದಲ್ಲ? ದಾಸ್ತಾನು ಬೇರೆಡೆ ಹೋದ, ಕಾರ್ಡುಗ­ಳನ್ನು ಅರ್ಹರಲ್ಲದವರಿಗೆ ನೀಡಿದ, ಶೇಖರಣೆ­ಯಲ್ಲಿ ಅಜಾಗರೂಕತೆ ತೋರಿದ ಎಷ್ಟು ಕೇಸು­ಗ­ಳಲ್ಲಿ ರಾಜ್ಯ ಸರ್ಕಾರ ತೀವ್ರ ಕ್ರಮ ಕೈಗೊಂಡಿದೆ?

ಜೆ.ಎಚ್‌. ಪಟೇಲರು, ಒಮ್ಮೆ ‘ಈಗ ಯಾರೂ ಸಮಾಜವಾದಿಗಳಿಲ್ಲ, ಮಜಾವಾದಿ­ಗಳಿ­ರ­ಬಹುದು’ ಎಂದಿದ್ದರು. ಆಡಳಿತಯಂತ್ರ ಸರಿ ಇಲ್ಲದಿದ್ದರೆ ಬಡವರ ಪರ ಎಂದು ಹೇಳಿ­ಕೊಳ್ಳುವ ಇಂತಹ ಯೋಜನೆಗಳು ಕೆಲವರ ಮಜಾಕ್ಕೆ ಅನುವು ಮಾಡಿಕೊಡಬಹುದಷ್ಟೆ. ಅನಂತ­ಮೂರ್ತಿಯವರಿಗೆ ಸ್ಮಾರಕ ನಿರ್ಮಿಸುವ ಬದಲು ಮೊದಲು ಅವರ ಮಾತುಗಳ ಸ್ಮರಣೆಯನ್ನು ಆಳಗೊಳಿಸಿಕೊಳ್ಳುವುದು ಅಗತ್ಯ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT