ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮಿತ್‌ ಶತಕ : ಆಸ್ಟ್ರೇಲಿಯ 97 ರನ್‌ಗಳ ಮುನ್ನಡೆ

ಭಾರತ 2ನೇ ಇನಿಂಗ್ಸ್‌ 1 ವಿಕೆಟ್‌ಗೆ 71ರನ್‌
Last Updated 19 ಡಿಸೆಂಬರ್ 2014, 12:52 IST
ಅಕ್ಷರ ಗಾತ್ರ

ಬ್ರಿಸ್ಬೇನ್‌ (ಪಿಟಿಐ) : ಭಾರತದ ವಿರುದ್ಧ ನಡೆಯುತ್ತಿರುವ ಎರಡನೆಯ ಟೆಸ್ಟ್‌ನ  ಮೊದಲ ಇನಿಂಗ್ಸ್‌ನಲ್ಲಿ ಆಸ್ಟ್ರೇಲಿಯ 97 ರನ್‌ಗಳ  ಮುನ್ನಡೆ ಸಾಧಿಸಿದೆ.

ನಾಯಕ ಸ್ಟೀವನ್‌ ಸ್ಮಿತ್‌ ಅವರ ಶತಕ  (133) ಮತ್ತು ಕೊನೆಯಲ್ಲಿ ಬಂದ ಬೌಲರ್‌ಗಳ ಉತ್ತಮ ಜೊತೆಯಾಟದ ನೆರವಿನಿಂದ ಉತ್ತಮ ಮುನ್ನಡೆ ಕಾಯ್ದುಕೊಳ್ಳಲು ಸಾಧ್ಯವಾಯಿತು.

ಸ್ಮಿತ್‌  ಭಾರತದ ವಿರುದ್ಧ 2ನೇ ಶತಕ ದಾಖಲಿಸಿದರು. ನಾಯಕನಾಗಿ ಮೊದಲ ಪಂದ್ಯದಲ್ಲೇ ಶತಕದ ಸಾಧನೆಗೈದ ಆಸ್ಟ್ರೇಲಿಯದ 9ನೇ ಆಟಗಾರ ಎಂಬ ಹೆಗ್ಗಳಿಕೆ  ಅವರದ್ದು.

  ಒಂದು ಹಂತದಲ್ಲಿ ಆಸ್ಟ್ರೇಲಿಯ 247 ರನ್‌ಗಳಿಗೆ 6 ವಿಕೆಟ್‌ಗಳನ್ನು ಕಳೆದುಕೊಂಡಿತ್ತು.  ಆದರೆ 7ನೇ ವಿಕೆಟ್‌ಗೆ ಜೊತೆಯಾದ ಮಿಷೆಲ್‌ ಜಾನ್ಸನ್‌ (88) ಹಾಗೂ  ಮಿಷೆಲ್‌ ಸ್ಟಾರ್ಕ್‌ (52)  ಜೋಡಿ ಮೊದಲ ಇನಿಂಗ್ಸ್‌ನಲ್ಲಿ 505 ರನ್‌ಗಳನ್ನು ಗಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.  ಕೊನೆಯ ಹಂತದಲ್ಲಿ ಬ್ಯಾಂಟಿಂಗ್‌ ಇಳಿದ ನಾಲ್ವರು ಬೌಲರ್‌ಗಳು 258ರನ್‌ ಕಲೆ ಹಾಕಿದರು.

  ಭಾರತ ತನ್ನ ಎರಡನೇ ಇನಿಂಗ್ಸ್ ಆರಂಭಿಸಿದ ಶಿಖರ್‌ ಧವನ್‌ ಹಾಗೂ ಮುರಳಿ ವಿಜಯ್ ವೇಗವಾಗಿ ರನ್‌ ಗಳಿಸಲು ಯತ್ನಿಸಿದರು. ಮೊದಲ ಇನಿಂಗ್ಸ್‌ನಲ್ಲಿ ಶತಕಗಳಿಸಿದ್ದ ಮುರಳಿ  ವಿಜಯ್ (27)  ಬೇಗನೆ ಮಿಷೆಲ್‌ ಸ್ಟಾರ್ಕ್‌ ಎಸೆತದಲ್ಲಿ ಔಟಾದರು. ದಿನದ ಆಟದ ಅಂತ್ಯಕ್ಕೆ ಭಾರತವು 71ರನ್‌ಗಳಿಗೆ ಒಂದು ವಿಕೆಟ್ ಕಳೆದುಕೊಂಡಿದೆ. ಶಿಖರ್‌ ಧವನ್‌ ಹಾಗೂ ಚೇತೇಶ್ವರ ಪೂಜಾರ ಕ್ರೀಸ್‌ನಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT