ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಯಾಂಕಿ ಕೆರೆಯಲ್ಲೂ ಭೂಮಿ ಒತ್ತುವರಿ!

Last Updated 30 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ಅತಿಕ್ರಮಣಕ್ಕೆ ಒಳಗಾಗಿ­ರುವ ನಗರದ 36 ಕೆರೆಗಳ ಸಮೀಕ್ಷೆ ನಡೆಸುವಂತೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಗಳು, ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ಕೇಳಿಕೊಂಡಿದ್ದು, ಸದಾಶಿವನಗರದ ಸ್ಯಾಂಕಿ ಕೆರೆ ಸಹ ಒತ್ತುವರಿ ಸಮಸ್ಯೆಯಿಂದ ಹೊರತಾ­ಗಿಲ್ಲ ಎಂಬ ಮಾಹಿತಿ ಬೆಳಕಿಗೆ ಬಂದಿದೆ.

ಬಿಬಿಎಂಪಿ ಕೆರೆ ವಿಭಾಗದಿಂದ ಆ. 25ರಂದು ಬೆಂಗಳೂರು ನಗರ ಜಿಲ್ಲಾ­ಧಿಕಾರಿ­ಗಳಿಗೆ ಪತ್ರ ಬರೆಯಲಾಗಿದ್ದು, ಒತ್ತುವರಿಗೆ ಒಳಗಾದ 36 ಕೆರೆಗಳ ಸಮೀಕ್ಷೆ ನಡೆಸಲು ಕೋರಲಾಗಿದೆ. ಕೆರೆಗಳ ಸರಹದ್ದು ಗುರುತಿಸುವ ಜತೆಗೆ ಒತ್ತುವರಿ ತೆರವುಗೊಳಿಸಲು ನೆರವು ನೀಡಬೇಕು ಎಂಬ ಮನವಿಯನ್ನೂ ಮಾಡಲಾಗಿದೆ.

ಬಿಬಿಎಂಪಿ ಸುಪರ್ದಿಯಲ್ಲಿ 63 ಕೆರೆ­ಗಳಿವೆ. ಅದರಲ್ಲಿ ಹತ್ತು ಕೆರೆಗಳು ಸಂಪೂರ್ಣ­ವಾಗಿ ಅತಿಕ್ರಮಣಗೊಂಡಿವೆ. ಕಾಗದದಲ್ಲಿ ಮಾತ್ರ ಅವುಗಳ ದಾಖಲೆ ಇದ್ದು, ಭೌತಿಕ ಅಸ್ತಿತ್ವವನ್ನು ಸಂಪೂರ್ಣ­ವಾಗಿ ಕಳೆದುಕೊಂಡಿವೆ. 35 ಎಕರೆ ವಿಸ್ತೀರ್ಣದಲ್ಲಿ ವ್ಯಾಪಿಸಿರುವ ಸ್ಯಾಂಕಿ ಕೆರೆ ಸಹ ಒತ್ತುವರಿಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಸ್ಯಾಂಕಿ ಕೆರೆಯ 1 ಎಕರೆ, 6 ಗುಂಟೆ ಪ್ರದೇಶವನ್ನು ಅತಿಕ್ರಮಿಸ­ಲಾ­ಗಿದೆ ಎಂದು ದಾಖಲೆಗಳೇ ಹೇಳುತ್ತಿವೆ.

ಕೌದೇನಹಳ್ಳಿ ಕೆರೆಯ 32 ಎಕರೆ, ಕೆಂಪಾಂಬುಧಿ ಕೆರೆಯ 4 ಎಕರೆ, ಹಲಗೆ ವಡೇರಹಳ್ಳಿ ಕೆರೆಯ 6 ಎಕರೆ, 9 ಗುಂಟೆ ಪ್ರದೇಶವನ್ನೂ ಅತಿಕ್ರಮಿ­ಸಲಾಗಿದೆ.

ಚಿಕ್ಕ ಕಲ್ಲಸಂದ್ರ, ಇಟ್ಟಮಡು, ಬ್ಯಾಟ­ಗುಂಟೆ ಪಾಳ್ಯ, ಲಿಂಗರಾಜಪುರ, ಕೋನೇನ ಅಗ್ರಹಾರ, ಗೆದ್ದಲಹಳ್ಳಿ, ವಿಜಿನಾ­ಪುರ, ಬಸಾಪುರ, ಶ್ರೀನಿವಾಗಿಲು ಮತ್ತು ಬಿನ್ನಮಂಗಲ ಕೆರೆಗಳು ಈಗಾಗಲೇ ತಮ್ಮ ಅಸ್ತಿತ್ವವನ್ನು ಕಳೆದು­ಕೊಂಡಿವೆ ಎಂಬ ಮಾಹಿತಿಯೂ ಪತ್ರದಲ್ಲಿದೆ.

ಈ ಬಗೆಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ ಬೆಂಗಳೂರು ನಗರ ಜಿಲ್ಲಾ­ಧಿಕಾರಿ ವಿ.ಶಂಕರ್‌, ‘ಕೆರೆಗಳ ಒತ್ತುವರಿ ಕುರಿತಂತೆ ಸಂಪೂರ್ಣ ಅರಿ­ವಿದ್ದು, ಕೆರೆ­ಗಳೂ ಸೇರಿದಂತೆ ಸಾರ್ವ­ಜನಿಕ ಪ್ರದೇಶ­ಗಳ ಒತ್ತುವರಿ ತೆರವು­ಗೊಳಿಸಲು ಕ್ರಿಯಾ ಯೋಜನೆ ಸಿದ್ಧಪಡಿ­ಸಲಾಗುತ್ತಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT