ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಚ್ಛ ಅಭಿಯಾನಕ್ಕೆ ಸಿದ್ಧತೆ: ಕೇಂದ್ರ ಸೂಚನೆ

Last Updated 22 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಮಹಾತ್ಮಾ ಗಾಂಧೀಜಿ­ಯವರ 150ನೇ ವರ್ಷಾ­ಚ­ರಣೆ ಸಂದರ್ಭದಲ್ಲಿ ಭಾರತವನ್ನು ಸಂಪೂರ್ಣ ಸ್ವಚ್ಛ­­ಗೊಳಿಸುವ ‘ಸ್ವಚ್ಛ ಭಾರತ‘ ರಾಷ್ಟ್ರೀಯ ನೈರ್ಮಲ್ಯ ಅಭಿ­ಯಾನ ಈ 25ರಿಂದ ಪ್ರಾರಂ­ಭ­­ವಾ­ಗ­ಲಿದ್ದು ಈ ನಿಟ್ಟಿ­ನಲ್ಲಿ ಸಿದ್ಧತೆ­­ಗಳನ್ನು ಮಾಡಿ­ಕೊ­ಳ್ಳಬೇಕು ಎಂದು ಕೇಂದ್ರ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ.

2019ರ ವೇಳೆ ಭಾರತವನ್ನು ಸಂಪೂ­­­ರ್ಣವಾಗಿ ಸ್ವಚ್ಛಗೊಳಿಸುವ ಗುರಿ­ಯನ್ನು ಈ ಅಭಿಯಾನ ಹೊಂದಿದೆ. ಈ ಅಭಿಯಾನ ಯಶಸ್ವಿಗೊಳಿಸಲು ಯಾವ ಕ್ರಮ­ಗಳನ್ನು ಕೈಗೊಳ್ಳಬೇಕು ಎನ್ನುವ ವಿವರವಾದ ಮಾಹಿತಿ ಇರುವ ಪತ್ರವನ್ನು  ಸಂಪುಟ ಕಾರ್ಯ­ದರ್ಶಿ ಅಜಿತ್‌ ಸೇಠ್‌ ಎಲ್ಲ ರಾಜ್ಯಗಳ ಮುಖ್ಯ ಕಾರ್ಯ­ದರ್ಶಿಗಳಿಗೆ ಕಳುಹಿ­ಸಿದ್ದಾರೆ.

‘ಅಭಿಯಾನ ಯಶಸ್ವಿಗೊಳಿಸಲು ಸಾರ್ವ­­­ಜನಿಕರಲ್ಲಿ ಅರಿವು ಮೂಡಿ­­­ಸುವ ಅಗತ್ಯವಿದೆ. ಮನೆ, ಸರ್ಕಾರಿ ಕಚೇರಿ, ಶಾಲೆ, ಆಸ್ಪತ್ರೆ, ಬೀದಿ, ರಸ್ತೆ, ಮಾರುಕಟ್ಟೆ, ರೈಲು, ಬಸ್‌ ನಿಲ್ದಾಣ, ಟ್ರಕ್‌ ಟರ್ಮಿ­ನಲ್‌, ನದಿ, ಉದ್ಯಾನ ಮತ್ತು ಇತರ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛ­ಗೊಳಿ­ಸುವ ಬಗ್ಗೆ ಸಾರ್ವಜನಿ­ಕರಲ್ಲಿ ಜಾಗೃತಿ ಮೂಡಿಸ­ಬೇಕು ಎನ್ನುವ ವಿವರಗಳೂ ಪತ್ರದಲ್ಲಿವೆ.

ಸರ್ಕಾರಿ ಮತ್ತು ಸರ್ಕಾರೇತರ ಅಧಿ­ಕಾ­ರಿಗಳು, ಎನ್‌ಜಿಒ, ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆಗಳು, ನಗರ ಮತ್ತು ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳನ್ನು ಈ ಅಭಿಯಾನದಲ್ಲಿ ಸೇರಿಸಿ­ಕೊಳ್ಳ­ಬೇಕು ಎಂದು ಸೇಠ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT