ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಚ್ಛ ಭಾರತ ಆಂದೋಲನ: ಅ. 2ರಂದು ಪ್ರಮಾಣವಚನ

Last Updated 25 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ: ಮಹಾತ್ಮಾ ಗಾಂಧಿ ಜನ್ಮದಿನವಾದ ಅಕ್ಟೋಬರ್‌ 2 ರಂದು ಕೇಂದ್ರ ಸರ್ಕಾರ ಸ್ವಚ್ಛ ಭಾರತ ಆಂದೋ­ಲ­ನಕ್ಕೆ ಚಾಲನೆ ನೀಡಲಿದೆ. ಅಂದು ಕೇಂದ್ರ ಸರ್ಕಾರಿ ನೌಕರರು ತಮ್ಮ ಕಚೇರಿ­ಗಳಿಗೆ ಹಾಜರಾಗಿ ಸ್ವಚ್ಛತಾ ಪ್ರಮಾಣ ವಚನ  ಸ್ವೀಕರಿಸಬೇಕು ಎಂದು ಸೂಚಿಸಲಾಗಿದೆ.

ಅಕ್ಟೋಬರ್‌ 2 ರಾಷ್ಟ್ರೀಯ ರಜಾ ದಿನವಾಗಿದ್ದರೂ ಎಲ್ಲಾ ನೌಕರರು ಕಚೇರಿಗೆ ಬರಬೇಕು. ವಿಭಾಗದ ಮುಖ್ಯಸ್ಥರು ಅವರಿಗೆ ‘ಸ್ವಚ್ಛತಾ ಶಪಥ’ ಬೋಧಿಸಬೇಕು. ಸ್ವಾತಂತ್ರ್ಯ ದಿನ­ದಂತೆಯೇ ಕಾರ್ಯಕ್ರಮ ಮುಗಿದ ಬಳಿಕ ಅವರು ಮನೆಗೆ ತೆರಳಬಹುದು ಎಂದು ಕೇಂದ್ರ ನಗರಾಭಿವೃದ್ಧಿ ಸಚಿವ ಎಂ.ವೆಂಕಯ್ಯ ನಾಯ್ಡು ಗುರುವಾರ ತಿಳಿಸಿದರು. ‘ಸ್ವಚ್ಛ ಭಾರತ ಮಿಷನ್‌’ ಲಾಂಛನ ಬಿಡುಗಡೆ ಮಾಡಿದ ಬಳಿಕ ಮಾತನಾ­ಡಿ,  ಆಂದೋಲನ­ದಲ್ಲಿ ರಾಜ್ಯ ಸರ್ಕಾರಗಳು ಸಹಾ ಕೈ ಜೋಡಿಸಬೇಕು ಎಂದು  ಮನವಿ ಮಾಡಿದರು.

2019ರ ವೇಳೆಗೆ ಭಾರತ ಸಂಪೂರ್ಣ ಸ್ವಚ್ಛಗೊಳ್ಳಬೇಕು ಎಂಬ ಆಶಯ ಹೊಂದಿರುವ ಕೇಂದ್ರ ಸರ್ಕಾರ ಐದು ವರ್ಷಗಳಲ್ಲಿ ಸುಮಾರು ₨ 2 ಲಕ್ಷ ಕೋಟಿ  ವಿನಿಯೋಗಿಸಲಿದೆ ಎಂದು ನಾಯ್ಡು ತಿಳಿಸಿದರು. ಅಲ್ಲದೇ ಎಲ್ಲಾ ಧಾರ್ಮಿಕ ಕೇಂದ್ರಗಳು ಹಾಗೂ ವಿವಿಧ ಸಂಸ್ಥೆಗಳು ಈ ಕಾರ್ಯಕ್ರಮಕ್ಕೆ ಕೈ ಜೋಡಿಸಬೇಕು ಎಂದು ಹೇಳಿದರು.

ಈ ಕಾರ್ಯಕ್ರಮಕ್ಕೆ ನಗರ ಅಭಿವೃದ್ಧಿ ಸಚಿವಾಲಯ ₨ 62ಸಾವಿರ ಕೋಟಿ  ಹಾಗೂ ಕುಡಿಯುವ ನೀರು ಸಚಿ­ವಾ­ಲಯ ₨1.34 ಕೋಟಿ ಲಕ್ಷ ಅನುದಾನ ನೀಡಲಿದೆ ಎಂದು  ಸಚಿವ ನಿತಿನ್‌ ಗಡ್ಕರಿ ಹೇಳಿದರು. 

ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ,  ಶಾಲೆಗಳಲ್ಲಿ ಸ್ವಚ್ಛತಾ ಆಂದೋಲನಕ್ಕೆ ಚಾಲನೆ ನೀಡಿ, ಎಲ್ಲಾ ಶೈಕ್ಷಣಿಕ ಸಂಸ್ಥೆಗಳು ಸ್ವಚ್ಛತೆ­ಯನ್ನು ಕಾಪಾಡಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT