ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವತಃ ಚಿತೆಯೇರಿ ವೃದ್ಧೆ ಆತ್ಮಾಹುತಿ

Last Updated 23 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಮದ್ದೂರು: ಜೀವನದಲ್ಲಿ ಬೇಸತ್ತ ವೃದ್ಧೆಯೊಬ್ಬರು ಸ್ವತಃ ಚಿತೆ ಸಿದ್ಧಪಡಿಸಿ, ಬೆಂಕಿ ಹಚ್ಚಿಕೊಂಡು ಆತ್ಮಾ­­­ಹುತಿ ಮಾಡಿಕೊಂಡ ಘಟನೆ ಇಲ್ಲಿಗೆ ಸಮೀಪದ ತೈಲೂರು ಗ್ರಾಮ­ದಲ್ಲಿ ಮಂಗಳವಾರ ರಾತ್ರಿ ನಡೆದಿದೆ.

ಗ್ರಾಮದ ನಿವೃತ್ತ ರೈಲ್ವೆ ಸ್ಟೇಷನ್ ಮಾಸ್ಟರ್ ಸಿದ್ದಪ್ಪ ಪತ್ನಿ ಚಿಕ್ಕ­ತಾಯಮ್ಮ (70) ಸಜೀವ ದಹನವಾದ ವೃದ್ಧೆ.

ಮಂಗಳವಾರ ರಾತ್ರಿ ಮನೆಯ ಹಿತ್ತ­ಲಿ­ನಲ್ಲಿ ತಾವೇ ಸೌದೆಗಳಿಂದ ಚಿತೆ ಸಿದ್ಧ­ಪಡಿಸಿ­ಕೊಂಡಿದ್ದರು. ಬಳಿಕ ಅಂತ್ಯ­ಸಂಸ್ಕಾ­ರಕ್ಕೆ ಬೇಕಾದ ಹೂವು, ಗಂಧದ­ಕಡ್ಡಿ ಇತರ ಪೂಜಾ ಸಾಮಗ್ರಿಗಳನ್ನು ಚಿತೆಯ ಬದಿಯಲ್ಲಿರಿಸಿ ಚಿತೆ ಏರಿ ಸೀಮೆಎಣ್ಣೆ ಸುರಿದುಕೊಂಡ ತಕ್ಷಣ ಬೆಂಕಿ ಹಚ್ಚಿ­ಕೊಂಡು ಸಜೀವ ದಹನವಾ­ಗಿದ್ದಾರೆ. ಈ ವೇಳೆ ಮನೆಯಲ್ಲಿ ಯಾರೂ ಇರಲಿಲ್ಲ ಎಂದು ತಿಳಿದು ಬಂದಿದೆ.

ಮನೆಯ ಹಿಂಭಾಗದಲ್ಲಿ ಬೆಂಕಿ ಉರಿಯುತ್ತಿರುವುದನ್ನು ಮಧ್ಯರಾತ್ರಿ ವೇಳೆಗೆ ನೋಡಿದ ನೆರೆಹೊರೆಯವರು ಸ್ಥಳಕ್ಕೆ ಹೋದಾಗ ಚಿಕ್ಕತಾಯಮ್ಮ ಸಜೀವ ದಹನವಾಗಿದ್ದರು ಎಂದು ಹೇಳಲಾಗಿದೆ.

ಗ್ರಾಮಸ್ಥರು ಚಿಕ್ಕತಾಯಮ್ಮ ಅವರ ಆತ್ಮಾಹುತಿ ಸುದ್ದಿಯನ್ನು ಅವರ ಮಕ್ಕಳು ಹಾಗೂ ಸಂಬಂಧಿಕರಿಗೆ ತಿಳಿಸಿದರು. ಈ ಸಂಬಂಧ ಮೃತರ ಪುತ್ರ ರಂಗನಾಥ್ ಅವರು ‘ನಮ್ಮ ತಾಯಿ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮ­ಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಪಟ್ಟಣ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT