ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಯಂನಿವೃತ್ತಿ ಬಯಸಿದ ಸಿನ್ಹಾ

ಸೇವಾ ಹಿರಿತನ ಕಡೆಗಣಿಸಿ ನೇಮಕ
Last Updated 18 ಏಪ್ರಿಲ್ 2014, 19:53 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಸೇವಾ ಹಿರಿತನ ಕಡೆಗಣಿಸಿ ನೌಕಾಪಡೆಯ ಮುಖ್ಯಸ್ಥರ­ನ್ನಾಗಿ ಆರ್‌.ಕೆ. ಧವನ್‌ ಅವರನ್ನು ನೇಮಕ ಮಾಡಿರುವುದರಿಂದ ತೀವ್ರ ನೊಂದಿ­ರುವ ಪಶ್ಚಿಮ ಭಾಗದ ಕಮಾಂಡರ್‌ ವೈಸ್‌ ಅಡ್ಮಿರಲ್‌ ಶೇಖರ್‌ ಸಿನ್ಹಾ ಅವರು ಸ್ವಯಂ ನಿವೃತ್ತಿ ಪಡೆ­ಯಲು ನಿರ್ಧರಿಸಿದ್ದಾರೆ.

ನೌಕಾ ದಳದ ಮುಖ್ಯಸ್ಥರಾಗಿ ಆರ್‌.ಕೆ. ಧವನ್‌ ಅಧಿಕಾರವಹಿಸಿ­ಕೊಂಡಿ­ರುವ ಧವನ್‌ ಅವರಿಗಿಂತ ಸಿನ್ಹಾ ಸೇವೆ­ಯಲ್ಲಿ ಆರು ತಿಂಗಳು ಹಿರಿಯರು. ಇದೇ ಆಗಸ್ಟ್ 31ಕ್ಕೆ ಸಿನ್ಹಾ ನಿವೃತ್ತಿಯಾಗುತ್ತಿ­ದ್ದಾರೆ. ಸ್ವಯಂ ನಿವೃತ್ತಿ ಕೊಡಿ ಇಲ್ಲವೇ ನ್ಯಾಯ ಒದಗಿಸಿ ಎಂದು ಕೋರಿ ಸಿನ್ಹಾ
ಅವರು ರಕ್ಷಣಾ ಸಚಿವ ಎ.ಕೆ. ಆಂಟನಿ ಅವರಿಗೆ ಪತ್ರ ಬರೆದಿದ್ದು ಈ ಕೂಡಲೇ ಸೇವೆಯಿಂದ ಬಿಡುಗಡೆ ಮಾಡಲು ಕೋರಿದ್ದಾರೆ.

ನೌಕಾ ದಳದಲ್ಲಿ ನಿರಂತರವಾಗಿ ನಡೆದ ದುರಂತಗಳ ಹೊಣೆ ಹೊತ್ತು ಅಡ್ಮಿರಲ್‌ ಡಿ.ಕೆ. ಜೋಶಿ ರಾಜೀನಾಮೆ ನೀಡಿದ ಎರಡು ತಿಂಗಳ ನಂತರ ಸರ್ಕಾರ ಧವನ್‌ ಅವರನ್ನು ಈ ಹುದ್ದೆಗೆ ನೇಮಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT