ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವರ್ಣಧಾರಾ ಕೋಳಿ

ಎಣಿಕೆ ಗಳಿಕೆ-8
Last Updated 13 ಜೂನ್ 2016, 19:30 IST
ಅಕ್ಷರ ಗಾತ್ರ

ಗಿರಿರಾಜ ತಳಿಯ ಕೋಳಿಗಳನ್ನು ಹೋಲುವ, ಹಿತ್ತಲಲ್ಲೇ ಸಾಕಬಹುದಾದ ಕೋಳಿ ಸ್ವರ್ಣಧಾರಾ. ಮಿಶ್ರವರ್ಣ ಸಂಯೋಜನೆ, ಆಕರ್ಷಕ, ಸುಂದರ ಪುಕ್ಕಗಳು ಈ ಕೋಳಿಗಳ ವಿಶೇಷ. ಗಿರಿರಾಜ ಮತ್ತು ಸ್ವರ್ಣಧಾರಾ ಎರಡೂ ಒಂದೇ ರೀತಿಯ ತಳಿಗಳಾಗಿದ್ದರೂ ಗಿರಿರಾಜಕ್ಕಿಂತ ಇದು ಅಧಿಕ ಮೊಟ್ಟೆ ನೀಡುತ್ತದೆ.

ಮನೆ ಸುತ್ತಲಿನ ಪರಿಸರದ ಗಿಡಗಂಟೆಗಳಲ್ಲಿ ಮರೆಯಾಗಿ ಶತ್ರುಗಳಿಂದ ರಕ್ಷಿಸಿಕೊಳ್ಳುವ ಸ್ವಭಾವ ಈ ಕೋಳಿಗಳಿಗೆ ಇರುವ ಕಾರಣ ವಿಶೇಷ ಮನೆಗಳ ಅಗತ್ಯವಿಲ್ಲ. ಹಿತ್ತಲಿನ ತಿಪ್ಪೆ ಮತ್ತು ನೆಲ ಕೆದಕಿ ತನ್ನ ಆಹಾರವನ್ನು ತಾನೇ ಹುಡುಕಿ ತಿಂದು ಬೆಳೆಯುತ್ತವೆ.

ಹಿತ್ತಲಲ್ಲಿ ಹಾಗೂ ತೋಟಗಳಲ್ಲಿ ಗೆದ್ದಲು, ಹುಳ ಹುಪ್ಪಟೆ ಹಾಗೂ ಹಸಿರು ಪದಾರ್ಥಗಳನ್ನು ಸೇವಿಸಿ ಹಾಗೂ ಮನೆಯ ಮುಂದೆ ರೈತರು ಎಸೆದ ಕೃಷಿಯಿಂದ ಸಿಗಬಹುದಾದ ಸಿಬುಕಲು ರಾಗಿ, ಅಕ್ಕಿ ನುಚ್ಚು, ಜೋಳ ಹಾಗೂ ಇತರೆ  ತ್ಯಾಜ್ಯವಸ್ತುಗಳನ್ನು ತಿಂದು ಬದುಕುತ್ತವೆ. 40 ವಾರಗಳಲ್ಲಿ ಮೊಟ್ಟೆ ಉತ್ಪಾದನೆ ಸಂಖ್ಯೆ180–190

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT