ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಸ್ಥ ಭಾರತ

Last Updated 27 ನವೆಂಬರ್ 2015, 19:30 IST
ಅಕ್ಷರ ಗಾತ್ರ

ಸ್ವಚ್ಛ ಭಾರತ ಅಭಿಯಾನ ಎಂದರೆ ಭಾರತದಲ್ಲಿನ ಕಸವನ್ನು ಸ್ವಚ್ಛಗೊಳಿಸುವುದು ಎಂದಷ್ಟೇ ಏಕೆ ಭಾವಿಸಬೇಕು? ಮೊದಲು ನಮ್ಮ ನಮ್ಮ ಮನಸ್ಸುಗಳನ್ನು ಸ್ವಚ್ಛಗೊಳಿಸಿಕೊಂಡರೆ, ಅದು ಸ್ವಚ್ಛ ಭಾರತದ ಜೊತೆಗೆ ಸ್ವಸ್ಥ ಭಾರತವೂ ಆಗುತ್ತದೆ.

‘ಪ್ರತಿಯೊಬ್ಬರೂ ತಮ್ಮ ಮನೆಯ ಕಸವನ್ನು ಹೊರಗೆ ಬಿಸಾಡುವುದಿಲ್ಲ ಎಂಬ ಪ್ರತಿಜ್ಞೆ ಮಾಡಿದ್ದೇ ಆದಲ್ಲಿ, ಪ್ರಪಂಚದ ಯಾವುದೇ ಶಕ್ತಿ ನಮ್ಮ ದೇಶವನ್ನು ಕಸಯುಕ್ತ ಮಾಡಲು ಅಸಾಧ್ಯ’ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಮಾತಿನಲ್ಲಿ ತಪ್ಪೇನಿದೆ?

ಸ್ವಚ್ಛ ಭಾರತ ಕಾರ್ಯಕ್ರಮ ಮೋದಿಯವರದಲ್ಲ, ಅದು ಮಹಾತ್ಮ ಗಾಂಧಿಯವರ ಕರೆ. ಇದನ್ನು ಹಿಂದಿನ ಸರ್ಕಾರಗಳು ತೀವ್ರವಾಗಿ ತೆಗೆದುಕೊಂಡಿರಲಿಲ್ಲ. ಈಗ ಮೋದಿ ಈ ಕರೆ ಕೊಟ್ಟ ಮಾತ್ರಕ್ಕೆ, ಅದು ಅವರ ಕಾರ್ಯಕ್ರಮ, ಅವರ ಜವಾಬ್ದಾರಿ ಎಂದು ಅವರ ಕೊರಳಿಗೇ ಕಟ್ಟುವುದು ಎಷ್ಟು ಸರಿ?

ರೋಧ ಪಕ್ಷ ಎಂದ ಮಾತ್ರಕ್ಕೆ ಆಡಳಿತ ಪಕ್ಷದವರ ಎಲ್ಲ ಕಾರ್ಯಕ್ರಮಗಳನ್ನೂ ವಿರೋಧಿಸಲೇ ಬೇಕೆಂಬ ಹಟ ಸರಿಯಲ್ಲ. ಯಾವುದೇ ಕಾರ್ಯಕ್ರಮ  ಸಫಲವಾಗಬೇಕಾದಲ್ಲಿ ಮೊದಲು ನಮ್ಮೆಲ್ಲರ ಮನಸ್ಸುಗಳು ಸ್ವಸ್ಥವಾಗಬೇಕು. ಆಗ ಅಸಹಿಷ್ಣುತೆ, ವಿರೋಧ ಎಲ್ಲ ತನ್ನಿಂದ ತಾನೇ ಮಾಯವಾಗುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT