ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾತಿ ಹತ್ಯೆ: ಶಂಕಿತನ ಚಿತ್ರ ಬಿಡುಗಡೆ

Last Updated 30 ಜೂನ್ 2016, 19:30 IST
ಅಕ್ಷರ ಗಾತ್ರ

ಚೆನ್ನೈ (ಪಿಟಿಐ): ಇನ್ಫೋಸಿಸ್‌ ಉದ್ಯೋಗಿ ಎಸ್‌.ಸ್ವಾತಿ ಹತ್ಯೆ ಪ್ರಕರಣದ ಶಂಕಿತ ಆರೋಪಿಯ ಚಿತ್ರವನ್ನು ನಗರ ಪೊಲೀಸರು ಗುರುವಾರ ಬಿಡುಗಡೆ ಮಾಡಿದ್ದಾರೆ.

ಇಲ್ಲಿನ ನುಗಂಬಾಕಂ ರೈಲು ನಿಲ್ದಾಣದಲ್ಲಿ ಕಳೆದ ಶುಕ್ರವಾರ  ಬೆಳಿಗ್ಗೆ ಸ್ವಾತಿ (24) ಅವರು ರೈಲಿಗಾಗಿ ಕಾಯುತ್ತಿದ್ದಾಗ ದುಷ್ಕರ್ಮಿ ಅವರನ್ನು ಇರಿದು ಹತ್ಯೆ ಮಾಡಿದ್ದರು. ನಾಲ್ಕು ದಿನಗಳ ಹಿಂದೆಯಷ್ಟೇ ಪೊಲೀಸರು ಈ ಘಟನೆಯ ಸಿಸಿಟಿವಿ ದೃಶ್ಯಾವಳಿ ಬಿಡುಗಡೆ ಮಾಡಿದ್ದರು. ಚಿತ್ರದಲ್ಲಿ ಶಂಕಿತ ವ್ಯಕ್ತಿ  ನೀಲಿ ಬಣ್ಣದ ಶರ್ಟ್‌ ಹಾಗೂ ಕಪ್ಪು ಪ್ಯಾಂಟ್‌ ಧರಿಸಿದ್ದಾನೆ. 

ಸ್ವಾತಿ ಹತ್ಯೆ ಪ್ರಕರಣ ಭೇದಿಸುವಲ್ಲಿ ವಿಳಂಬವಾಗಿರುವುದರಿಂದ ಜನರು ಮತ್ತು ರಾಜಕೀಯ ಪಕ್ಷಗಳಿಂದ ಪೊಲೀಸರು ಟೀಕೆ ಎದುರಿಸಬೇಕಾಗಿ ಬಂದಿದೆ. ಹತ್ಯೆಯ ತನಿಖೆಯಲ್ಲಿ ವಿಳಂಬವಾದರೆ ಮಧ್ಯಪ್ರವೇಶ ಮಾಡುವುದಾಗಿ ಈಗಾಗಲೇ ಮದ್ರಾಸ್‌ ಹೈಕೋರ್ಟ್ ಎಚ್ಚರಿಕೆ ನೀಡಿದೆ. ರೈಲ್ವೆ ಪೊಲೀಸರು ಹತ್ಯೆಯ ತನಿಖೆ ಆರಂಭಿಸಿದ್ದರು. ಈಗ ಪ್ರಕರಣವನ್ನು ನಗರ ಪೊಲೀಸರಿಗೆ ವಹಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT