ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾಮೀಜಿ ಪ್ರವೇಶ

Last Updated 6 ಮೇ 2016, 19:40 IST
ಅಕ್ಷರ ಗಾತ್ರ

ಗಂಗಾವತಿ (ಕೊಪ್ಪಳ ಜಿಲ್ಲೆ):  ತಾಲ್ಲೂಕಿನ ಆನೆಗೊಂದಿ ಗ್ರಾಮದ ಬಳಿ ಇರುವ ನವವೃಂದಾವನ ಗಡ್ಡೆಗೆ ತೆರಳಿದ ಮಂತ್ರಾಲಯದ ಪೀಠಾಧಿಪತಿ ಸುಬುಧೇಂದ್ರತೀರ್ಥರು ಗುರುವಾರ  ನವ ವೃಂದಾವನಕ್ಕೆ ಪೂಜೆ ನೆರವೇರಿಸಿ ಮಳೆ, ರಾಜ್ಯಕ್ಕೆ ಆವರಿಸಿರುವ ಕ್ಷಾಮ ಪರಿಹಾರಕ್ಕೆ ಪ್ರಾರ್ಥನೆ ಸಲ್ಲಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿ ಗಡ್ಡೆಯ ಧಾರ್ಮಿಕ, ಪೂಜೆ ಮೊದಲಾದ ಹಕ್ಕುಗಳ ಬಗ್ಗೆ ಉತ್ತರಾದಿ ಮತ್ತು ರಾಯರ ಮಠದ ನಡುವಿನ ವಿವಾದ ನ್ಯಾಯಾಲಯದಲ್ಲಿ ಇದೆ. ಯಾವುದೇ ತೀರ್ಪಿಗೂ ಬದ್ಧರಾಗಿದ್ದೇವೆ ಎಂದರು.

ವೃಂದಾವನ ದರ್ಶನಕ್ಕೆ ಆಗಮಿಸಿದ್ದೇನೆ. ನಾಡಿನಲ್ಲಿ ಭೀಕರ ಬರಗಾಲ ಆವರಿಸಿದೆ. ಬರ ಪರಿಹಾರವಾಗಿ, ಸಮೃದ್ಧ ಮಳೆ-–ಬೆಳೆಯಾಗಲಿ ಎಂದು ಗುರುಗಳಲ್ಲಿ ಪ್ರಾರ್ಥಿಸಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT