ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂದಿಜ್ವರಕ್ಕೆ ಮಹಿಳೆ ಬಲಿ

Last Updated 26 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಹಂದಿಜ್ವರದಿಂದ ಬಳಲುತ್ತಿದ್ದ ಗಾಜಿಯಾಬಾದ್‌ನ ಮಹಿಳೆ­ಯೊಬ್ಬರು  ಬುಧವಾರ ದೆಹಲಿ ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಎಚ್‌1ಎನ್‌1 ವೈರಾಣು ಸೋಂಕು ತಗುಲಿದ್ದ ಗಾಜಿಯಾ­ಬಾದ್‌ನ 51 ವರ್ಷದ ಶೀಲಾ ಗೋಯಲ್‌ ಎಂಬುವವರು ಡಿ.21ರಂದು ಇಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಗೆ ದಾಖಲಾಗುವಾಗಲೇ ರೋಗಿಯ ಸ್ಥಿತಿ ಗಂಭೀರವಾಗಿತ್ತು ಎಂದು ವೈದ್ಯರು ತಿಳಿಸಿದ್ದಾರೆ. 

ಇದು ಈ ವರ್ಷ ದೆಹಲಿ ಸುತ್ತಮುತ್ತ ಹಂದಿಜ್ವರಕ್ಕೆ ಬಲಿಯಾದ ಮೊದಲ ಪ್ರಕರಣ. ದೆಹಲಿ ಹಾಗೂ ಸುತ್ತಮುತ್ತ ಜನವರಿಯಿಂದ ಇದುವರೆಗೆ  ಒಟ್ಟು 32 ಜನರಲ್ಲಿ ಎಚ್‌1ಎನ್‌1 ವೈರಾಣು ಸೋಂಕು ಪತ್ತೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT