ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂಸರಾಜ್‌ ಭಾರದ್ವಾಜ್‌ ನಾಳೆ ನಿವೃತ್ತಿ

Last Updated 27 ಜೂನ್ 2014, 8:58 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಕರ್ನಾಟಕ ರಾಜ್ಯಪಾಲ ಹಂಸರಾಜ್‌ ಭಾರದ್ವಾಜ್‌ ಮತ್ತು ತ್ರಿಪುರಾ ರಾಜ್ಯಪಾಲ ದೇವಾ­ನಂದ ಕೊನ್ವರ್‌ ಅವರು ಶನಿವಾರ (ಜೂನ್‌. 28) ಸೇವೆಯಿಂದ ನಿವೃತ್ತ­ರಾಗಲಿದ್ದಾರೆ.  ತಮಿಳುನಾಡು ಮತ್ತು ಮಿಜೋರಾಂ ರಾಜ್ಯಪಾಲರಿಗೆ ಈ ಎರಡೂ ರಾಜ್ಯಗಳ ಹೆಚ್ಚುವರಿ ಜವಾ­ಬ್ದಾರಿ ನೀಡಲಾಗಿದೆ.

77 ವರ್ಷದ ಹಂಸರಾಜ್‌ ಯುಪಿಎ–1 ಸರ್ಕಾರದಲ್ಲಿ ಕಾನೂನು ಸಚಿವರಾ­ಗಿದ್ದರು. 2009ರ ಜೂನ್‌ 29ರಂದು ಅವರು ಕರ್ನಾಟಕ ರಾಜ್ಯಪಾ­ಲರಾಗಿ ಅಧಿಕಾರ ಸ್ವೀಕರಿಸಿದ್ದರು. 71 ವರ್ಷದ ಕೊನ್ವರ್  ಅವರು  ಈ ಹಿಂದೆ ಅಸ್ಸಾಂನಲ್ಲಿ ಕಾಂಗ್ರೆಸ್‌ ಸರ್ಕಾರದಲ್ಲಿ ಸಚಿ­ವರಾಗಿದ್ದರು.  ಬಿಹಾರದ ರಾಜ್ಯ­ಪಾಲರಾಗಿ ಅವರು 2009ರ ಜೂನ್‌ 29ರಂದು ಅಧಿಕಾರ ಸ್ವೀಕರಿಸಿದರು. 2013ರ ಮಾರ್ಚ್‌ 29ರಂದು ಅವ­ರನ್ನು ತ್ರಿಪುರಾದ ರಾಜ್ಯಪಾಲರಾಗಿ ನೇಮಿಸಲಾಗಿತ್ತು.

ಹೊಸ ರಾಜ್ಯಪಾಲರನ್ನು ನೇಮಿಸುವ­ವರೆಗೆ ತಮಿಳು­ನಾಡು ರಾಜ್ಯಪಾಲ ಕೆ. ರೋಸಯ್ಯ ಅವರಿಗೆ ಹೆಚ್ಚುವರಿಯಾಗಿ ಕರ್ನಾಟಕ  ರಾಜ್ಯಪಾ­ಲರ ಜವಾಬ್ದಾರಿ ನೀಡ­ಲಾಗಿದೆ ಎಂದು ರಾಷ್ಟ್ರಪತಿ ಭವನದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT