ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಕ್ಕಿ ಜ್ವರ: ಕೇರಳ ಕೋಳಿಗೆ ತಡೆ

Last Updated 26 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಚೆನ್ನೈ (ಪಿಟಿಐ): ಕೇರಳದಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿರುವ ಕಾರಣ ಆ ರಾಜ್ಯದಿಂದ ಕೋಳಿ ಮತ್ತು ಕೋಳಿ ಮೊಟ್ಟೆ ಸಾಗಣೆಯನ್ನು ತಮಿಳು­ನಾಡು ಸರ್ಕಾರ ನಿರ್ಬಂಧಿಸಿದೆ.

ರಾಜ್ಯದಲ್ಲಿ ಹಕ್ಕಿ ಜ್ವರ ಹರಡದಂತೆ ತಡೆಯಲು ಕ್ರಮ ಕೈಗೊಂಡಿರುವ ಸರ್ಕಾರ, ಕೋಳಿ ಸಾಕಾಣಿಕೆಗಾಗಿ ಕೇರಳ­ದಿಂದ ಸಾಗಣೆಯಾಗಿರುವ ಮೊಟ್ಟೆಗಳನ್ನೂ ನಾಶ ಮಾಡುವಂತೆ ಸೂಚಿಸಿದೆ.

ಸರ್ಕಾರದಿಂದ ಈ ಆದೇಶ ಹೊರ­ಬೀಳುತ್ತಿದ್ದಂತೆಯೇ ಗಡಿಯ ಚೌಕಿಗ­ಳಲ್ಲಿ ತಪಾಸಣೆ ತೀವ್ರಗೊಂಡಿದ್ದು, ಕೋಳಿ ಮತ್ತು ಮೊಟ್ಟೆಯನ್ನು ಸಾಗಿಸುತ್ತಿದ್ದ ವಾಹನಗಳನ್ನು ವಾಪಸು ಕಳುಹಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT