ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಕ್ಕಿ ಜ್ವರ: ರಾಜ್ಯದಲ್ಲಿ ಕಟ್ಟೆಚ್ಚರ

Last Updated 25 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕೇರಳದ ಕೊಟ್ಟಾಯಂನಲ್ಲಿ ಕಂಡು ಬಂದಿ­ರುವ ಹಕ್ಕಿ ಜ್ವರ ರಾಜ್ಯದಲ್ಲಿ ಹರಡದಂತೆ ತಡೆ­ಯಲು ಮುಂಜಾಗ್ರತೆ ವಹಿಸಲಾಗಿದೆ ಎಂದು ಪಶು ಸಂಗೋ­­ಪನಾ ಸಚಿವ ಟಿ.ಬಿ. ಜಯಚಂದ್ರ ತಿಳಿಸಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಇದುವರೆಗೆ ರಾಜ್ಯ­ದಲ್ಲೆಲ್ಲೂ ಈ ರೋಗ ಕಂಡು ಬಂದಿಲ್ಲ. ಆದರೂ, ಎಲ್ಲ ಇಲಾಖೆ­ಗ­ಳಿಗೆ ಮಾಹಿತಿ ನೀಡಲಾಗಿದೆ’ ಎಂದರು. ಗಡಿ ಭಾಗದ ಮಡಿ­ಕೇರಿ, ಮೈಸೂ­ರು, ಚಾಮ­­ರಾ­ಜ­­ನಗರ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದೂ ತಿಳಿಸಿದರು.

ನೋಡಲ್‌ ಅಧಿಕಾರಿ ನೇಮಕ: ಹಕ್ಕಿ­ಜ್ವರ ಪ್ರಕರಣ­ಗ­ಳನ್ನು ನಿರ್ವಹಿಸಲು ಪಶು ಆರೋಗ್ಯ ಮತ್ತು ಜಾನು­ವಾರು ಜೈವಿಕ ಸಂಸ್ಥೆಯ ವಿಜ್ಞಾನಿ ಎಸ್‌. ಎಂ. ಬೈರೇ­ಗೌಡ ಅವರನ್ನು ನೋಡಲ್‌ ಅಧಿಕಾರಿ­ಯ­ನ್ನಾಗಿ ನೇಮಿ­ಸ­­ಲಾಗಿದೆ ಎಂದು ಹೇಳಿದರು.

ಬೈರೇಗೌಡ ಮಾತನಾಡಿ, ‘ಜನರು ಆತಂಕ ಪಡ­ಬೇಕಿಲ್ಲ. ವೈರಸ್‌ನಿಂದ ಬರುವ ಈ ರೋಗ ರಾಜ್ಯದಲ್ಲಿ ಎಲ್ಲೂ ಪತ್ತೆಯಾಗಿಲ್ಲ’ ಎಂದರು.

‘ಕೇರಳದ ಕೊಟ್ಟಾಯಂ ಜಿಲ್ಲೆಯಲ್ಲಿ 7 ಸಾವಿರ ಬಾತು­ಕೋಳಿಗಳು ಸಾವನ್ನಪ್ಪಿವೆ. ಹಕ್ಕಿ ಜ್ವರದ ಕಾರಣ­ದಿಂದ ಅಲ್ಲಿನ ಒಂದು ಕಿ.ಮೀ ವ್ಯಾಪ್ತಿ­ಯಲ್ಲಿರುವ ಸುಮಾರು 2.4 ಲಕ್ಷ ಬಾತುಕೋಳಿಗಳನ್ನು ಕೊಲ್ಲಲು ಕೇಂದ್ರ ಸರ್ಕಾರ ಸೂಚನೆ ನೀಡಿದೆ. ನಮ್ಮಲ್ಲಿಂದಲೂ ಇಬ್ಬರು ಅಧಿಕಾರಿ­ಗಳನ್ನು ಅಲ್ಲಿಗೆ ಕಳುಹಿಸಲಾಗಿದೆ’ ಎಂದು ಅವರು ಮಾಹಿತಿ ನೀಡಿದರು.

‘ರೋಗವು ಅಷ್ಟು ದೂರದಿಂದ ಇಲ್ಲಿಗೆ ಹರಡುವ ಸಾಧ್ಯತೆ ಕಡಿಮೆ. ಆದರೂ, ರಾಜ್ಯದಿಂದ ಕೇರಳಕ್ಕೆ ಹೋಗುವ ಮತ್ತು ಅಲ್ಲಿಂದ ಇಲ್ಲಿಗೆ ಬರುವ ವಾಹನ­­ಗಳ ಮೇಲೆ ನಿಗಾ ಇಡಲಾಗಿದೆ’ ಎಂದರು.

ಮನುಷ್ಯರಿಗೂ ಬರುವ ಸಾಧ್ಯತೆ: ಈ ರೋಗದ ವೈರಸ್‌ ಯಾವ ಕ್ಷಣದಲ್ಲಿ ಬೇಕಾದರೂ ಮಾರ್ಪಾ­ಡು­­ಗೊಳ್ಳ­ಬಹುದು. ಹಾಗಾಗಿ ಮನುಷ್ಯರ ದೇಹಕ್ಕೂ ವೈರಾಣು ಸೇರ­ಬಹುದು ಹಾಗಾಗಿ ಹೆಚ್ಚಿನ ಎಚ್ಚರಿಕೆ ವಹಿಸ­ಲಾ­ಗುತ್ತಿದೆ ಎಂದರು.

ಆದರೂ, ಈ ಸೋಂಕು ಮನುಷ್ಯರಿಗೆ ತಗುಲಿದ ಪ್ರಕ­ರ­­­ಣ­ಗಳು ತುಂಬಾ ಕಡಿಮೆ. ಹಕ್ಕಿ ಜ್ವರದಿಂದಾಗಿ ದೇಶ­ದಲ್ಲಿ ಇದುವರೆಗೆ ಯಾರೂ ಮೃತಪಟ್ಟಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ರಾಷ್ಟ್ರೀಯ ಪಶು ಆರೋಗ್ಯ ಸಂಸ್ಥೆಯ ತಜ್ಞರೂ ಕೇರಳಕ್ಕೆ ಬುಧವಾರ ಭೇಟಿ ನೀಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT